ಹರ್ಯಾಣ ಚುನಾವಣೆ ಗೆಲ್ಲಲು ಬಿಜೆಪಿ ರಾಮ್ ರಹೀಮ್, ಕೇಜ್ರಿವಾಲ್​​ನ್ನು ಬಿಡುಗಡೆ ಮಾಡಿದೆ: ರಾಬರ್ಟ್ ವಾದ್ರಾ

ಕೊಲೆ, ಅತ್ಯಾಚಾರದ ಆರೋಪ ಹೊತ್ತಿರುವ ಬಾಬಾ ರಾಮ್ ರಹೀಮ್ ಅವರನ್ನು ಬಿಜೆಪಿ ಚುನಾವಣೆಗೆ 20 ದಿನಗಳ ಮೊದಲು ಬಿಡುಗಡೆ ಮಾಡಿದಾಗ ... ಕೇಜ್ರಿವಾಲ್ ಅವರು ಸರಿಯಾದ ಸಮಯಕ್ಕೆ ಜೈಲಿನಿಂದ ಹೊರಬಂದು ಹರ್ಯಾಣದಲ್ಲಿ ಪ್ರಚಾರ ನಡೆಸಬಹುದು. ಇದು ಬಿಜೆಪಿಯ ಪೂರ್ವಯೋಜಿತ ನಿರ್ಧಾರಗಳು ಎಂದು ನಾನು ಭಾವಿಸುತ್ತೇನೆ ಎಂದು ಪಿಟಿಐ ಜತೆ ಮಾತನಾಡಿದ ವಾದ್ರಾ ಹೇಳಿದ್ದಾರೆ.

ಹರ್ಯಾಣ ಚುನಾವಣೆ ಗೆಲ್ಲಲು ಬಿಜೆಪಿ ರಾಮ್ ರಹೀಮ್, ಕೇಜ್ರಿವಾಲ್​​ನ್ನು ಬಿಡುಗಡೆ ಮಾಡಿದೆ: ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ
Follow us
|

Updated on: Oct 01, 2024 | 8:37 PM

ದೆಹಲಿ ಅಕ್ಟೋಬರ್01: ಹರ್ಯಾಣ ವಿಧಾನಸಭಾ ಚುನಾವಣೆ ಮೇಲೆ ಪ್ರಭಾವ ಬೀರಲು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಬಿಜೆಪಿ ಬೆಂಬಲ ನೀಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಮಂಗಳವಾರ ಆರೋಪಿಸಿದ್ದಾರೆ.

ಹತ್ಯೆ ಮತ್ತು ಅತ್ಯಾಚಾರದ ಅಪರಾಧಿ ರಾಮ್ ರಹೀಮ್ ಅವರನ್ನು ಚುನಾವಣಾ ಪ್ರಚಾರಕ್ಕಾಗಿ ಪೆರೋಲ್‌ನಲ್ಲಿ ಬಿಡುಗಡೆ ಮಾಡಲು ಬಿಜೆಪಿ ಅವಕಾಶ ಮಾಡಿಕೊಟ್ಟಿದೆ . ಕೇಜ್ರಿವಾಲ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಹರ್ಯಾಣದಲ್ಲಿ ಕಾಂಗ್ರೆಸ್‌ನ ಅವಕಾಶಗಳನ್ನು ಘಾಸಿಗೊಳಿಸುವ ಬಿಜೆಪಿಯ ಯೋಜನೆಯ ಭಾಗವಾಗಿದೆ ಎಂದಿದ್ದಾರೆ ವಾದ್ರಾ.

ಕೊಲೆ, ಅತ್ಯಾಚಾರದ ಆರೋಪ ಹೊತ್ತಿರುವ ಬಾಬಾ ರಾಮ್ ರಹೀಮ್ ಅವರನ್ನು ಬಿಜೆಪಿ ಚುನಾವಣೆಗೆ 20 ದಿನಗಳ ಮೊದಲು ಬಿಡುಗಡೆ ಮಾಡಿದಾಗ … ಕೇಜ್ರಿವಾಲ್ ಅವರು ಸರಿಯಾದ ಸಮಯಕ್ಕೆ ಜೈಲಿನಿಂದ ಹೊರಬಂದು ಹರ್ಯಾಣದಲ್ಲಿ ಪ್ರಚಾರ ನಡೆಸಬಹುದು. ಇದು ಬಿಜೆಪಿಯ ಪೂರ್ವಯೋಜಿತ ನಿರ್ಧಾರಗಳು ಎಂದು ನಾನು ಭಾವಿಸುತ್ತೇನೆ ಎಂದು ಪಿಟಿಐ ಜತೆ ಮಾತನಾಡಿದ ವಾದ್ರಾ ಹೇಳಿದ್ದಾರೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಚುನಾವಣಾ ಆಯೋಗವು ಅವರ ಪೆರೋಲ್ ವಿನಂತಿಯನ್ನು ಅಂಗೀಕರಿಸಿದ ನಂತರ ಗುರ್ಮೀತ್ ರಾಮ್ ರಹೀಮ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.  ಅಬಕಾರಿ ನೀತಿ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿರುವ ಕೇಜ್ರಿವಾಲ್ ಹರಿಯಾಣದಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಉದ್ಯಮಿಯಾಗಿರುವ ವಾದ್ರಾ, ಬಿಜೆಪಿ ತನ್ನ ವ್ಯವಹಾರಕ್ಕೆ ಅಡೆತಡೆಗಳನ್ನು ಸೃಷ್ಟಿಸಿದೆ, ಹರ್ಯಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಕಷ್ಟಕರವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಹಾರದ ಜನರು ಕಾಂಗ್ರೆಸ್ ಅನ್ನು ಬೇರುಸಹಿತ ಕಿತ್ತೊಗೆದರು, ಬಿಜೆಪಿಗೂ ಅದೇ ಗತಿ ಬರಲಿದೆ: ಪ್ರಶಾಂತ್ ಕಿಶೋರ್

“ನಾನು ಹರ್ಯಾಣದಲ್ಲಿ ಉದ್ಯೋಗವನ್ನು ನೀಡಬಹುದಿತ್ತು ಆದರೆ ಈ (ಬಿಜೆಪಿ) ಸರ್ಕಾರವು ನನ್ನ ಎಲ್ಲ ಸಹಚರರನ್ನು ಹೆದರಿಸಿ ಅವರು ದೂರ ಹೋಗುವಂತೆ ನೋಡಿಕೊಂಡರು, ನನಗೆ ಕೆಲಸ ಮಾಡುವುದು ಕಷ್ಟ, ಆರ್ಥಿಕವಾಗಿ ಅವರು ನನ್ನನ್ನು ನಾಶಮಾಡಲು ಪ್ರಯತ್ನಿಸಿದರು” ಎಂದಿದ್ದಾರೆ.

ಅಕ್ಟೋಬರ್ 5 ರಂದು ನಡೆಯಲಿರುವ ಹರ್ಯಾಣ ಚುನಾವಣೆಯಲ್ಲಿ ಅಕ್ಟೋಬರ್ 8 ರಂದು ಫಲಿತಾಂಶದೊಂದಿಗೆ ಕಾಂಗ್ರೆಸ್ ಪ್ರಬಲ ಬಹುಮತ ಗಳಿಸಲಿದೆ ಎಂದು ವಾದ್ರಾ ವಿಶ್ವಾಸ ವ್ಯಕ್ತಪಡಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ