Ayodhya Hotel Bill: ಟೀ, ಟೋಸ್ಟ್ಗೆ ₹252 ಬಿಲ್; ಅಯೋಧ್ಯೆಯ ಶಬರಿ ರಸೋಯಿ ರೆಸ್ಟೋರೆಂಟ್‌ಗೆ ನೋಟೀಸ್
ರೆಸ್ಟೋರೆಂಟ್‌ನ ಮಾಲೀಕರು ಅಹಮದಾಬಾದ್ ಮೂಲದ ಸಂಸ್ಥೆ M/s ಕವಚ್ ಫೆಸಿಲಿಟಿ ಮ್ಯಾನೇಜ್‌ಮೆಂಟ್. ಇಲ್ಲಿನ ಜನರು ಉಚಿತ ಆಹಾರ ಮತ್ತು ಪಾನೀಯವನ್ನು ಬಯಸುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಬಿಲ್ ನ್ನು ವೈರಲ್ ಮಾಡಿದ್ದಾರೆ. ನಾವು ದೊಡ್ಡ ಹೋಟೆಲ್‌ಗಳಲ್ಲಿ ಕಂಡುಬರುವ ಸೌಕರ್ಯಗಳನ್ನು ನಾವು ನೀಡುತ್ತಿದ್ದೇವೆ. ನಾವು ಈ ಬಗ್ಗೆ ಪ್ರಾಧಿಕಾರದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದೇವೆ ಎಂದು ರೆಸ್ಟೋರೆಂಟ್‌ನ ಪ್ರಾಜೆಕ್ಟ್ ಮುಖ್ಯಸ್ಥ ಸತ್ಯೇಂದ್ರ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಜನವರಿ 29: ರಾಮಾಯಣದಲ್ಲಿ ಬರುವ ಮಹತ್ವದ ಪಾತ್ರ ಶಬರಿ. ಶ್ರೀರಾಮನಿಗಾಗಿ (Ram) ಆಕೆ ಕಾದಿದ್ದು, ಆತ ಬಂದಾಗ ಆತನಿಗಾಗಿ ತೆಗೆದಿರಿಸಿದ ಹಣ್ಣುಗಳನ್ನು ನೀಡುತ್ತಾಳೆ. ಆ ಹಣ್ಣುಗಳನ್ನು ನೀಡುವಾಗ ಮೊದಲು ಆಕೆಯೇ ರುಚಿ ನೋಡಿ ಮತ್ತೆ ರಾಮನಿಗೆ ಅರ್ಪಿಸಿದ್ದು ಕತೆ. ಆದಾಗ್ಯೂ, ಇತ್ತೀಚೆಗೆ ಅಯೋಧ್ಯೆಯಲ್ಲಿ (Ayodhya) ನಿರ್ಮಿಸಲಾದ ರೆಸ್ಟೋರೆಂಟ್‌ಗೂ ಶಬರಿಯ ಹೆಸರನ್ನೇ ಇಡಲಾಗಿದೆ. ಇಲ್ಲಿನ ಶಬರಿ ರಸೋಯಿ ರೆಸ್ಟೋರೆಂಟ್ (Shabari Rasoi restaurant) ಈಗ ಸುದ್ದಿಯಲ್ಲಿದೆ. ಅದೇನಪ್ಪಾ ಎಂದರೆ ಅಲ್ಲಿ ಒಂದು ಟೀ ಮತ್ತು ಟೋಸ್ಟ್ ಗೆ ಗ್ರಾಹಕರೊಬ್ಬರು ಪಾವತಿ ಮಾಡಿದ ಬಿಲ್ 252 ರೂಪಾಯಿ.
ಈ ಬಿಲ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ರೆಸ್ಟೋರೆಂಟ್ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿದೆ. ಎಡಿಎ ಪ್ರಕಾರ, ಬಜೆಟ್ ವರ್ಗದೊಳಗೆ ಬರುವ ಈ ಉಪಾಹಾರ ಗೃಹವು ಭಕ್ತರು ಮತ್ತು ಯಾತ್ರಾರ್ಥಿಗಳೊಂದಿಗೆ ಒಂದು ಕಪ್ ಚಹಾ ಮತ್ತು ಎರಡು ತುಂಡು ಟೋಸ್ಟ್ 10 ರೂಗೆ ನೀಡುವುದಾಗಿ ಒಪ್ಪಂದವನ್ನು ಹೊಂದಿದೆ.
ಭೋಜನಕ್ಕೆ 50 ಆಸನಗಳನ್ನು ಹೊಂದುವುದರ ಜೊತೆಗೆ,ಹಾಸ್ಟೆಲ್‌ನಲ್ಲಿ 100 ಹಾಸಿಗೆಗಳನ್ನು ಒದಗಿಸುತ್ತದೆ ಈ ರೆಸ್ಟೋರೆಂಟ್ .ಅಲ್ಲಿ ಅತಿಥಿಗಳು ಪ್ರತಿ ರಾತ್ರಿ 50 ರೂಪಾಯಿಗಳಿಗೆ ಹಾಸಿಗೆಯನ್ನು ಬಾಡಿಗೆಗೆ ಪಡೆಯಬಹುದು. ಗುಜರಾತ್ ಮೂಲದ M/s ಕವಚ್ ಫೆಸಿಲಿಟಿ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಅರುಂಧತಿ ಭವನದಲ್ಲಿರುವ ಶಬರಿ ರಸೋಯ್ ಎಂಬ ರೆಸ್ಟೋರೆಂಟ್‌ನ ಮಾಲೀಕರಾಗಿದ್ದು, ರಾಮ ಮಂದಿರದ ಬಳಿಯ ತೆಹ್ರಿ ಬಜಾರ್‌ನಲ್ಲಿ ADA ನಿರ್ಮಿಸಿದ ಹೊಸ ಬಹು-ಮಹಡಿ ಕಟ್ಟಡದಲ್ಲಿ ಈ ರೆಸ್ಟೋರೆಂಟ್ ಇದೆ. ಅಧಿಸೂಚನೆಯ ಮೂಲಕ, ವಿವರಣೆಯನ್ನು ನೀಡಲು ಎಡಿಎ ರೆಸ್ಟೋರೆಂಟ್‌ಗೆ ಮೂರು ದಿನಗಳನ್ನು ನೀಡಿದೆ.ಇಲ್ಲದಿದ್ದರೆ, ಪ್ರಾಧಿಕಾರವು ವ್ಯವಹಾರದ ಗುತ್ತಿಗೆಯನ್ನು ಕೊನೆಗೊಳಿಸುತ್ತದೆ.
ರೆಸ್ಟೋರೆಂಟ್‌ನ ಮಾಲೀಕರು ಅಹಮದಾಬಾದ್ ಮೂಲದ ಸಂಸ್ಥೆ M/s ಕವಚ್ ಫೆಸಿಲಿಟಿ ಮ್ಯಾನೇಜ್‌ಮೆಂಟ್. ಇಲ್ಲಿನ ಜನರು ಉಚಿತ ಆಹಾರ ಮತ್ತು ಪಾನೀಯವನ್ನು ಬಯಸುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಬಿಲ್ ನ್ನು ವೈರಲ್ ಮಾಡಿದ್ದಾರೆ. ನಾವು ದೊಡ್ಡ ಹೋಟೆಲ್‌ಗಳಲ್ಲಿ ಕಂಡುಬರುವ ಸೌಕರ್ಯಗಳನ್ನು ನಾವು ನೀಡುತ್ತಿದ್ದೇವೆ. ನಾವು ಈ ಬಗ್ಗೆ ಪ್ರಾಧಿಕಾರದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದೇವೆ ಎಂದು ಅಯೋಧ್ಯೆಯಲ್ಲಿರುವ ಶಬರಿ ರಸೋಯಿ ರೆಸ್ಟೋರೆಂಟ್‌ನ ಪ್ರಾಜೆಕ್ಟ್ ಮುಖ್ಯಸ್ಥ ಸತ್ಯೇಂದ್ರ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನೆನಪಿಗಾಗಿ ಹಾರಿಸಲಾದ ಹನುಮ ಧ್ವಜ ತೆರವಿಗೆ ಗ್ರಾಮಸ್ಥರ ವಿರೋಧ, ಲಾಠಿ ಚಾರ್ಜ್
ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಎಡಿಎ ಉಪಾಧ್ಯಕ್ಷ ವಿಶಾಲ್ ಸಿಂಗ್, “ಇಲ್ಲಿನ ಭಕ್ತರಿಗೆ ಕಡಿಮೆ ದರದಲ್ಲಿ ಸೌಲಭ್ಯಗಳು ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಲು, ನಾವು ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಮಾರಾಟಗಾರರೊಂದಿಗಿನ ಒಪ್ಪಂದದಲ್ಲಿ ಅಧಿಕಾರದಲ್ಲಿ ವಸತಿ ನಿಲಯ, ಪಾರ್ಕಿಂಗ್ ಮತ್ತು ಆಹಾರಕ್ಕಾಗಿ ಸಮಂಜಸವಾದ ದರಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ