₹500 ಕೋಟಿ ಹಗರಣ ಆರೋಪ: ಪಂಜಾಬ್ ಅಬಕಾರಿ ನೀತಿ ಬಗ್ಗೆ ಸಿಬಿಐ,ಇಡಿ ತನಿಖೆಗೆ ಒತ್ತಾಯಿಸಿದ ವಿಪಕ್ಷ

|

Updated on: Aug 31, 2022 | 3:36 PM

ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ₹ 500 ಕೋಟಿ ಹಗರಣ ನಡೆದಿದೆ ಎಂದು ನಾಯಕರು ಆರೋಪಿಸಿದ್ದಾರೆ

₹500 ಕೋಟಿ ಹಗರಣ ಆರೋಪ: ಪಂಜಾಬ್ ಅಬಕಾರಿ ನೀತಿ ಬಗ್ಗೆ ಸಿಬಿಐ,ಇಡಿ ತನಿಖೆಗೆ ಒತ್ತಾಯಿಸಿದ ವಿಪಕ್ಷ
ಭಗವಂತ್ ಸಿಂಗ್ ಮಾನ್
Follow us on

ದೆಹಲಿಯ ನಂತರ ಈಗ ಪಂಜಾಬ್‌ನಲ್ಲಿ (Punjab) ಆಮ್ ಆದ್ಮಿ ಪಕ್ಷದ (Aam Aadmi Party)ಅಬಕಾರಿ ನೀತಿ (excise policy) ಬಗ್ಗೆ ಪ್ರತಿಪಕ್ಷಗಳು ದಾಳಿ ನಡೆಸಿವೆ. ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಮತ್ತು ಇತರ ನಾಯಕರು ಬುಧವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ನೀತಿಯ ವಿರುದ್ಧ ಜ್ಞಾಪಕ ಪತ್ರವನ್ನು ಸಲ್ಲಿಸಿದರು. ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ (Bhagwant Singh Mann)ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ₹ 500 ಕೋಟಿ ಹಗರಣ ನಡೆದಿದೆ ಎಂದು ನಾಯಕರು ಆರೋಪಿಸಿದ್ದಾರೆ. ಪಂಜಾಬ್ ಗವರ್ನರ್‌ಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ. ದೆಹಲಿ ನೀತಿಗೆ ಅನುಗುಣವಾಗಿ ರೂಪಿಸಲಾದ ಅದರ “ಟೇಲರ್-ಮೇಡ್” ಅಬಕಾರಿ ನೀತಿಯ ಮೂಲಕ ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಮಾಡಿದ ₹ 500 ಕೋಟಿ ಹಗರಣದಲ್ಲಿ ಸಿಬಿಐ ಮತ್ತು ಇಡಿ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದೇವೆ. ಪ್ರಕರಣವನ್ನು ಸಿಬಿಐ ದಾಖಲಿಸಿದೆ ಎಂದು ಸುಖಬೀರ್ ಬಾದಲ್ ಟ್ವೀಟ್​​ನಲ್ಲಿ ಬರೆದಿದ್ದಾರೆ.

ದೆಹಲಿಯಲ್ಲಿ ಎಎಪಿಯ ಮದ್ಯ ನೀತಿಯ ಬಗ್ಗೆ ದಾಳಿ ಪ್ರತಿದಾಳಿ ನಡೆಯುತ್ತಿರುವ ಹೊತ್ತಲ್ಲೇ ಮಾರ್ಚ್‌ನಲ್ಲಿ ಭಾರಿ ಜನಾದೇಶವನ್ನು ಪಡೆದು ಅಧಿಕಾರಕ್ಕೆ ಬಂದ ಭಗವಂತ್ ಮಾನ್ ಸರ್ಕಾರದ ವಿರುದ್ಧದ ಆರೋಪಗಳು ಕೇಳಿ ಬಂದಿವೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅಬಕಾರಿ ಇಲಾಖೆಯನ್ನು ನಿಭಾಯಿಸುವ ಮೂಲಕ ವಿವಾದದ ಕೇಂದ್ರವಾಗಿದ್ದಾರೆ. ತನಿಖೆ ತೀವ್ರಗೊಂಡಿರುವಾಗಲೇ ಅವರ ಮನೆ ಮತ್ತು ಬ್ಯಾಂಕ್ ಲಾಕರ್ ಅನ್ನು ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಎಎಪಿ ಬಿಜೆಪಿಯಿಂದ ಮಾತ್ರ ಟೀಕೆಗಳನ್ನು ಎದುರಿಸುತ್ತಿಲ್ಲ. ಮಂಗಳವಾರ, ಅಣ್ಣಾ ಹಜಾರೆ ಕೇಜ್ರಿವಾಲ್ ಗೆ ಪತ್ರ ಬರೆದು ಕಿವಿ ಹಿಂಡಿದ್ದರು. ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನೀವು ಅಧಿಕಾರದ ನಶೆಯಲ್ಲಿದ್ದೀರಿ ಎಂದು ತೋರುತ್ತದೆ ಎಂದು ಅರವಿಂದ ಕೇಜ್ರಿವಾಲ್‌ಗೆ  ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪತ್ರ ಬರೆದಿದ್ದಾರೆ. ಭ್ರಷ್ಟಾಚಾರ ಪ್ರಕರಣದ ನಂತರ ಜುಲೈನಲ್ಲಿ ಹಿಂತೆಗೆದುಕೊಳ್ಳಲಾದ ಅವರ ಸರ್ಕಾರಿ ಅಬಕಾರಿ ಪರವಾನಗಿ ನೀತಿಯ ಕುರಿತು ಅಣ್ಣಾ, ಈ ರೀತಿ ಟೀಕೆ ಮಾಡಿದ್ದಾರೆ. ನೀವು ಮುಖ್ಯಮಂತ್ರಿಯಾದ ನಂತರ ನಾನು ನಿಮಗೆ ಮೊದಲ ಬಾರಿಗೆ ಪತ್ರ ಬರೆಯುತ್ತಿದ್ದೇನೆ, ಏಕೆಂದರೆ ನಿಮ್ಮ ಸರ್ಕಾರದ ಮದ್ಯ ನೀತಿಯ ಬಗ್ಗೆ ಇತ್ತೀಚಿನ ಸುದ್ದಿ ವರದಿಗಳಿಂದ ನನಗೆ ನೋವಾಗಿದೆ ಎಂದು ಪತ್ರ ಆರಂಭವಾಗುತ್ತದೆ. ನಿಮ್ಮ ‘ಸ್ವರಾಜ್’ ಪುಸ್ತಕದಲ್ಲಿ ಅಬಕಾರಿ ನೀತಿಗಳ ಬಗ್ಗೆ ಆದರ್ಶಪ್ರಾಯವಾದ ವಿಷಯಗಳನ್ನು ಬರೆದಿದ್ದೀರಿ, ಅದಕ್ಕೆ ನನಗೆ ಪರಿಚಯವನ್ನು ಬರೆಯುವಂತೆ ಮಾಡಿದ್ದೀರಿ ಎಂದ ಅಣ್ಣಾ, ಪ್ರದೇಶದ ನಿವಾಸಿಗಳ ಒಪ್ಪಿಗೆಯಿಲ್ಲದೆ ಯಾವುದೇ ಮದ್ಯದ ಅಂಗಡಿಗಳನ್ನು ತೆರೆಯಬೇಡಿ. ಮುಖ್ಯಮಂತ್ರಿಯಾದ ನಂತರ ನೀವು ಆ ಆದರ್ಶಗಳನ್ನು ಮರೆತಿದ್ದೀರಿ ಎಂದಿದ್ದಾರೆ.

ಇದನ್ನೂ ಓದಿ
ನೀವು ಅಧಿಕಾರದ ನಶೆಯಲ್ಲಿದ್ದೀರಿ: ಅರವಿಂದ ಕೇಜ್ರಿವಾಲ್‌ಗೆ ಅಣ್ಣಾ ಹಜಾರೆ ಪತ್ರ
Shocking News: ಮಹಿಳೆಯರ ಪಾಲಿನ ಡೇಂಜರ್ ಸಿಟಿಯಾಗಿದೆ ದೆಹಲಿ; 2021ರಲ್ಲಿ ಪ್ರತಿದಿನ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ!
Viral Video: ಮೈದಾನಕ್ಕಿಳಿದು ವಾಲಿಬಾಲ್ ಆಡಿದ ಪಂಜಾಬ್ ಸಿಎಂ ಭಗವಂತ್ ಮಾನ್; ವೈರಲ್ ವಿಡಿಯೋ ಇಲ್ಲಿದೆ

ನೀವು, ಮನೀಶ್ ಸಿಸೋಡಿಯಾ ಮತ್ತು ಇತರರು ಸ್ಥಾಪಿಸಿದ ಆಮ್ ಆದ್ಮಿ ಪಕ್ಷವು ಈಗ ಯಾವುದೇ ಪಕ್ಷಕ್ಕಿಂತ ಭಿನ್ನವಾಗಿಲ್ಲ. ನಾವು ಒತ್ತಡದ ಗುಂಪಿಗೆ ಅಂಟಿಕೊಂಡಿದ್ದರೆ ಮತ್ತು ನಾನು ಸೂಚಿಸಿದಂತೆ ಜಾಗೃತಿ ಅಭಿಯಾನವನ್ನು ನಡೆಸಿದ್ದರೆ ಭಾರತದಲ್ಲಿ ಎಲ್ಲಿಯೂ ಇಂತಹ ತಪ್ಪು ಮದ್ಯ ನೀತಿ ರೂಪುಗೊಳ್ಳುತ್ತಿರಲಿಲ್ಲ ಎಂದು ಹಜಾರೆ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಬಿಜೆಪಿ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಹಜಾರೆ ಅವರ ದನಿಯನ್ನು ಬಳಸುತ್ತಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ₹ 500 ಕೋಟಿ ಹಗರಣ ನಡೆದಿದೆ ಎಂದು ನಾಯಕರು ಆರೋಪಿಸಿದ್ದಾರೆ

 

 

Published On - 3:34 pm, Wed, 31 August 22