Viral Video: ಮೈದಾನಕ್ಕಿಳಿದು ವಾಲಿಬಾಲ್ ಆಡಿದ ಪಂಜಾಬ್ ಸಿಎಂ ಭಗವಂತ್ ಮಾನ್; ವೈರಲ್ ವಿಡಿಯೋ ಇಲ್ಲಿದೆ

ಕ್ರೀಡಾಕೂಟವನ್ನು ಉದ್ಘಾಟಿಸಿದ ನಂತರ ಪಂಜಾಬ್ ಸಿಎಂ ಭಗವಂತ್ ಮಾನ್ ಹಳದಿ ಪಟ್ಟೆಗಳಿರುವ ಕಪ್ಪು ಟ್ರ್ಯಾಕ್‌ಸೂಟ್‌ ಹಾಕಿಕೊಂಡು, ತಲೆಗೆ ಕ್ಯಾಪ್ ತೊಟ್ಟುಕೊಂಡು ವಾಲಿಬಾಲ್ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Viral Video: ಮೈದಾನಕ್ಕಿಳಿದು ವಾಲಿಬಾಲ್ ಆಡಿದ ಪಂಜಾಬ್ ಸಿಎಂ ಭಗವಂತ್ ಮಾನ್; ವೈರಲ್ ವಿಡಿಯೋ ಇಲ್ಲಿದೆ
ವಾಲಿಬಾಲ್ ಆಡಿದ ಪಂಜಾಬ್ ಸಿಎಂ ಭಗವಂತ್ ಮಾನ್Image Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 30, 2022 | 11:24 AM

ಪಂಜಾಬ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (CM Bhagwant Mann) ಮೈದಾನಕ್ಕಿಳಿದು ಆಟಗಾರರ ಗುಂಪಿನೊಂದಿಗೆ ವಾಲಿಬಾಲ್ ಪಂದ್ಯವನ್ನು (volleyball match) ಆಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೋಮವಾರ ಜಲಂಧರ್‌ನ ಗುರು ಗೋವಿಂದ್ ಸಿಂಗ್ ಸ್ಟೇಡಿಯಂನಲ್ಲಿ ‘ಖೇದನ್ ವತನ್ ಪಂಜಾಬ್ ಡಯಾನ್’ ಕ್ರೀಡಾಕೂಟವನ್ನು ಉದ್ಘಾಟಿಸಿದ ನಂತರ ಭಗವಂತ್ ಮಾನ್ ಹಳದಿ ಪಟ್ಟೆಗಳಿರುವ ಕಪ್ಪು ಟ್ರ್ಯಾಕ್‌ಸೂಟ್‌ ಹಾಕಿಕೊಂಡು, ತಲೆಗೆ ಕ್ಯಾಪ್ ತೊಟ್ಟುಕೊಂಡು ವಾಲಿಬಾಲ್ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಖೇತನ್ ವತನ್ ಪಂಜಾಬ್ ಡಯಾನ್ 2 ತಿಂಗಳ ಅವಧಿಯ ಕ್ರೀಡಾಕೂಟವಾಗಿದ್ದು, ಇದರಲ್ಲಿ ವಿವಿಧ ವಯೋಮಾನದ 4 ಲಕ್ಷಕ್ಕೂ ಹೆಚ್ಚು ಆಟಗಾರರು 28 ಕ್ರೀಡಾ ವಿಭಾಗಗಳಲ್ಲಿ ಬ್ಲಾಕ್‌ನಿಂದ ರಾಜ್ಯ ಮಟ್ಟದವರೆಗಿನ ಸ್ಪರ್ಧೆಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯ ಮಟ್ಟದ ವಿಜೇತರಿಗೆ 6 ಕೋಟಿ ರೂ. ನಗದು ಬಹುಮಾನ ನೀಡಲಾಗುವುದು.

ಇದನ್ನೂ ಓದಿ: Bhagwant Mann: ಪಂಜಾಬ್ ಸಿಎಂ ಭಗವಂತ್ ಮಾನ್ ನಿವಾಸಕ್ಕೆ 10 ಸಾವಿರ ರೂ. ದಂಡ

2 ತಿಂಗಳ ಕಾಲ ನಡೆಯುವ ಕ್ರೀಡಾಕೂಟವನ್ನು ಉದ್ಘಾಟಿಸಿದ ನಂತರ, ಸಿಎಂ ಭಗವಂತ್ ಮಾನ್ ಗುರು ಗೋವಿಂದ್ ಸಿಂಗ್ ಕ್ರೀಡಾಂಗಣದಲ್ಲಿ ಸುಮಾರು 10ರಿಂದ 15 ನಿಮಿಷಗಳ ಕಾಲ ವಾಲಿಬಾಲ್ ಆಟವನ್ನು ಆಡಿದರು. ಅಲ್ಲಿದ್ದ ಆಟಗಾರರು ಮೈದಾನದಲ್ಲಿ ವಾಲಿಬಾಲ್ ಆಡಿದ ಭಗವಂತ್ ಮಾನ್ ಅವರನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ