RSS ಮುಖ್ಯಸ್ಥ ಮೋಹನ್ ಭಾಗವತ್​ರನ್ನು ರಾಷ್ಟ್ರಪಿತ ಎಂದು ಕರೆದ AIIO ಮುಖ್ಯಸ್ಥ ಉಮರ್ ಅಹ್ಮದ್

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 22, 2022 | 5:24 PM

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂದು ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಆಲ್ ಇಂಡಿಯಾ ಇಮಾಮ್ ಸಂಘಟನೆಯ(AIIO) ಮುಖ್ಯಸ್ಥ ಇಮಾಮ್ ಡಾ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರೊಂದಿಗೆ ಸಭೆ ನಡೆಸಿದರು.

RSS ಮುಖ್ಯಸ್ಥ ಮೋಹನ್ ಭಾಗವತ್​ರನ್ನು ರಾಷ್ಟ್ರಪಿತ ಎಂದು ಕರೆದ AIIO ಮುಖ್ಯಸ್ಥ ಉಮರ್ ಅಹ್ಮದ್
RSS chief Mohan Bhagwat and Imam Umer Ahmed Ilyasi
Follow us on

ದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂದು ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಆಲ್ ಇಂಡಿಯಾ ಇಮಾಮ್ ಸಂಘಟನೆಯ(AIIO) ಮುಖ್ಯಸ್ಥ ಇಮಾಮ್ ಡಾ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಅವರೊಂದಿಗೆ ಸಭೆ ನಡೆಸಿದರು.

ಇಂದು ದೆಹಲಿಯಲ್ಲಿ ಮುಸ್ಲಿಂ ಮುಖಂಡರಾದ ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಧರ್ಮಗುರು ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದಾರೆ. ಮೋಹನ್ ಭಾಗವತ್ ಅವರು ಅವರನ್ನು ದೆಹಲಿಯ ಹೃದಯಭಾಗದಲ್ಲಿರುವ ಮಸೀದಿಯಲ್ಲಿ ಭೇಟಿಯಾಗಿದ್ದಾರೆ. ಒಂದು ಗಂಟೆಗಳ ಕಾಲ ಇಬ್ಬರು ಚರ್ಚೆಯನ್ನು ನಡೆಸಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥರು ಕಳೆದ ಕೆಲವು ದಿನಗಳಿಂದ ಕೋಮು ಸೌಹಾರ್ದತೆಯನ್ನು ಬಲಪಡಿಸಲು ಮುಸ್ಲಿಂ ಮುಖಂಡರೊಂದಿಗೆ ಹಲವು ಚರ್ಚೆಗಳನ್ನು ನಡೆಸಿದ್ದಾರೆ.

ಆರ್‌ಎಸ್‌ಎಸ್ ಸರ್ ಸಂಘಚಾಲಕ್ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡುತ್ತಾರೆ. ಇದು ಭೇಟಿ ಸಂವಾದ ಪ್ರಕ್ರಿಯೆಯ ಭಾಗವಾಗಿದೆ ಎಂದು ಆರ್‌ಎಸ್‌ಎಸ್ ವಕ್ತಾರ ಸುನೀಲ್ ಅಂಬೇಕರ್ ಹೇಳಿದ್ದಾರೆ.

ಕಳೆದ ತಿಂಗಳು, ಭಾಗವತ್ ಅವರು ಐದು ಮುಸ್ಲಿಂ ನಾಯಕರನ್ನು ಭೇಟಿ ಮಾಡಿದರು ಮತ್ತು ದೇಶದಲ್ಲಿ ನೆಡಯುತ್ತಿರುವ ಕೋಮು ವಿವಾದಗಳ ಬಗ್ಗೆ ಕುರಿತು ತಮ್ಮ ಕಳವಳಗಳನ್ನು ಚರ್ಚಿಸಿದರು.

ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ದೇಗುಲದಲ್ಲಿ ಹಿಂದೂ ಪ್ರಾರ್ಥನೆಯನ್ನು ಕೋರಿದ ಮನವಿಯ ಹಿನ್ನೆಲೆಯಲ್ಲಿ, ಪ್ರತಿ ಮಸೀದಿಯ ಕೆಳಗೆ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ ಎಂದು ಭಾಗವತ್ ಹೇಳಿಕೆಯ ಅನೇಕ ಚರ್ಚೆಗಳಿಗೆ ಕಾರಣವಾಗಿತ್ತು.

75 ನಿಮಿಷಗಳ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಶಿ, ದೇಶದ ಪರಿಸ್ಥಿತಿಯ ಬಗ್ಗೆ ನನಗೆ ಆತಂಕವಿದೆ ಎಂದು ಭಾಗವತ್ ಹೇಳಿದರು. ಸಹಕಾರ ಮತ್ತು ಒಗ್ಗಟ್ಟಿನಿಂದ ಮಾತ್ರ ದೇಶವು ಮುನ್ನಡೆಯಲು ಸಾಧ್ಯ ಎಂದು ಅವರು ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಉಲ್ಲೇಖಿಸಿದ್ದಾರೆ.

ಗೋಹತ್ಯೆ, ಇದು ಹಿಂದೂಗಳನ್ನು ಅಸಮಾಧಾನಗೊಳಿಸುತ್ತಿದೆ ಎಂದು ಅವರು ಹೇಳಿದರು. ಆದ್ದರಿಂದ ನಾವು ಇದನ್ನು ದೇಶಾದ್ಯಂತ ಗೋಹತ್ಯೆ ನಿಷೇಧಿಸಲಾಗಿದೆ ಎಂದು ಹೇಳಿದ್ದೇವೆ. ಮುಸ್ಲಿಮರು ಕಾನೂನು ಪಾಲಕರು ಮತ್ತು ಯಾರಾದರೂ ಅದನ್ನು ಉಲ್ಲಂಘಿಸಿದರೆ, ಅದು ದೊಡ್ಡ ತಪ್ಪು ಮತ್ತು ಶಿಕ್ಷೆಯಾಗಬೇಕು ಎಂದು ಖುರೈಶಿ ಹೇಳಿದರು.

ಇನ್ನೊಂದು ನಾನ್-ಬೆಲಿವರ್ಸ್ ಎಂಬ ಪದವನ್ನು ಬಳಸುವುದು ಹಿಂದೂಗಳಿಗೆ ಕೆಟ್ಟ ಭಾವನೆಯನ್ನು ಉಂಟು ಮಾಡಿತ್ತು. ನಾವು ಮೂಲತಃ ಅರೇಬಿಕ್ ಭಾಷೆಯಲ್ಲಿ ಹೇಳಿದ್ದೇವೆ, ಈ ಪದದ ಅರ್ಥವು ನಂಬಿಕೆಯಿಲ್ಲದವರು, ಕೆಲವರು ಇಸ್ಲಾಂನಲ್ಲಿ ನಂಬುತ್ತಾರೆ, ಅವರನ್ನು “ಮೋಮಿನ್” ಎಂದು ಕರೆಯಲಾಗುತ್ತದೆ, ನಂಬಿಕೆಯಿಲ್ಲದವರನ್ನು “ಕಾಫಿರ್” ಎಂದು ಕರೆಯಲಾಗುತ್ತದೆ. ಇದು ತಟಸ್ಥ ಪದವಾಗಿತ್ತು ಆದರೆ ಅದು ಇಂದು ನಿಂದನೀಯ ಪದವಾಗಿದೆ ಖುರೈಶಿ ಹೇಳಿದರು.

ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಲೆಫ್ಟಿನೆಂಟ್ ಜನರಲ್ ಜಮೀರ್ ಉದ್ದೀನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ದಿಕಿ ಮತ್ತು ಉದ್ಯಮಿ ಸಯೀದ್ ಶೆರ್ವಾನಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಹೆಚ್ಚಿನ ಮಾಹಿತಿ ನೀಡಲಾಗುವುದು

Published On - 10:52 am, Thu, 22 September 22