ಇಂಜೆಕ್ಷನ್ ನೀಡುವಾಗ ಪಶು ವೈದ್ಯರಿಗೇ ಕಚ್ಚಿದ ನಾಯಿ; ಕೇರಳದಲ್ಲಿ ಹೆಚ್ಚುತ್ತಿದೆ ಶ್ವಾನದ ದಾಳಿ
ನಾಯಿಯ ದಾಳಿಯನ್ನು ತಡೆಯಲು ಮುಂದಾದಾಗ ಆ ಸಾಕು ನಾಯಿ ತನ್ನ ಮಾಲೀಕರ ಮೇಲೂ ದಾಳಿ ಮಾಡಿದೆ. ಈ ನಡುವೆ ವೈದ್ಯರು ಮನೆಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಿರುವನಂತಪುರಂ: ಕೇರಳದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಕೇರಳದ ತಿರುವನಂತಪುರಂ (Tiruvanantapuram) ಜಿಲ್ಲೆಯ ತಿರುಪುರಂನಲ್ಲಿ ಪಶು ವೈದ್ಯರು (Veterinary Doctor) ನಾಯಿಗೆ ಆ್ಯಂಟಿ ರೇಬಿಸ್ ಲಸಿಕೆ (Anti-Rabies Vaccine) ನೀಡುತ್ತಿದ್ದಾಗ ಆ ನಾಯಿ ಅವರ ಮೇಲೆ ದಾಳಿ ಮಾಡಿದೆ. ಬಿಜೇಶ್ ಎಂಬ ಪಶು ವೈದ್ಯರ ಮುಖ ಮತ್ತು ಎಡಗೈಗೆ ನಾಯಿ ಕಚ್ಚಿದ್ದರಿಂದ ತೀವ್ರವಾದ ಗಾಯಗಳಾಗಿವೆ. ವೈದ್ಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ.
ತಿರುಪುರಂನ ಮನೆಯೊಂದರಲ್ಲಿ ಪಶುವೈದ್ಯರು ಸಾಕು ನಾಯಿಗಳಿಗೆ ರೇಬಿಸ್ ಇಂಜೆಕ್ಷನ್ ನೀಡುತ್ತಿದ್ದಾಗ ಈ ಘಟನೆ ನಡೆದಿದೆ. ತಮ್ಮ ಮೇಲೆ ದಾಳಿ ನಡೆಸಿದ ನಾಯಿಗೆ ವೈದ್ಯರು ಲಸಿಕೆ ನೀಡುವಾಗ ಆ ನಾಯಿಯ ಮುಖಕ್ಕೆ ಮಾಸ್ಕ್ ಹಾಕಲಾಗಿತ್ತು. ಆದರೂ ಮಾಲೀಕನ ಹಿಡಿತದಿಂದ ಬಿಡಿಸಿಕೊಂಡ ಆ ಸಾಕು ನಾಯಿ ವೈದ್ಯ ಬಿಜೇಶ್ ಮೇಲೆ ಹಲ್ಲೆ ನಡೆಸಿದೆ. ನಾಯಿ ತನ್ನ ಮಾಸ್ಕ್ ತೆಗೆದುಕೊಂಡು ವೈದ್ಯರ ಕೈ, ಮುಖಕ್ಕೆ ಕಚ್ಚಿದೆ.
ಇದನ್ನೂ ಓದಿ: Viral Video: ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ವೈದ್ಯನ ವಿಡಿಯೋ ವೈರಲ್
ನಾಯಿಯ ದಾಳಿಯನ್ನು ತಡೆಯಲು ಮುಂದಾದಾಗ ಆ ಸಾಕು ನಾಯಿ ತನ್ನ ಮಾಲೀಕರ ಮೇಲೂ ದಾಳಿ ಮಾಡಿದೆ. ಈ ನಡುವೆ ವೈದ್ಯರು ಮನೆಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೆಪ್ಟೆಂಬರ್ 13ರಂದು ಕೇರಳದ ಕೋಳಿಕ್ಕೋಡ್ ಜಿಲ್ಲೆಯ ಅರಕ್ಕಿನಾರ್ ಗ್ರಾಮದಲ್ಲಿ 12 ವರ್ಷದ ಬಾಲಕನ ಮೇಲೆ ನಾಯಿ ಹಲ್ಲೆ ನಡೆಸಿತ್ತು. ನಾಯಿಯ ದಾಳಿಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಗೂ ಮೊದಲು ಆ ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು ಇಬ್ಬರು ಮಕ್ಕಳು ಸೇರಿದಂತೆ ಐವರ ಮೇಲೆ ದಾಳಿ ನಡೆಸಿತ್ತು. ಸೆಪ್ಟೆಂಬರ್ 5ರಂದು ಹಾಲು ಖರೀದಿಸಲು ತೆರಳುತ್ತಿದ್ದ 12 ವರ್ಷದ ಬಾಲಕಿಯನ್ನು ನಾಯಿ ಕಚ್ಚಿ, ಕೊಂದು ಹಾಕಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 am, Thu, 22 September 22