AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾಥವಾದ ನಾಯಿ ಮರಿಗಳಿಗೆ ತಾಯಿಯಾದ ಹಂದಿ: ಅಪರೂಪದ ವಿಡಿಯೋ ಇಲ್ಲಿದೆ ನೋಡಿ!

ಅನಾಥವಾದ ನಾಯಿ ಮರಿಗಳಿಗೆ ತಾಯಿಯಾದ ಹಂದಿ: ಅಪರೂಪದ ವಿಡಿಯೋ ಇಲ್ಲಿದೆ ನೋಡಿ!

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 18, 2022 | 3:50 PM

Share

ಅನಾಥವಾದ ನಾಯಿ ಮರಿಗಳಿಗೆ ಹಂದಿಯೊಂದು ಹಾಲುಣಿಸಿ ಪೋಷಣೆ ಮಾಡುತ್ತಿರುವಂತಹ ಅಪರೂಪದ ಘಟನೆ ಬೆಣ್ಣೆ ನಗರಿ ದಾವಣಗೆರೆಯ ರಂಗನಾಥ್ ಬಡಾವಣೆಯಲ್ಲಿ ಕಂಡು ಬಂದಿದೆ.

ದಾವಣಗೆರೆ: ತಾಯಿ ಅಂಥಕರಣವೇ ಹಾಗೆ. ತನ್ನ ಮಕ್ಕಳಿರಲಿ ಅಥವಾ ಬೇರೆಯವರ ಮಕ್ಕಳಿರಲಿ ಅವರು ಹಸಿವು ಎಂದಾಗ ಮನ ಕರಗದೇ ಇರದು. ಅದು ಮನುಷ್ಯರಲ್ಲಾಗಿರಬಹುದು ಅಥವಾ ಪ್ರಾಣಿಗಳಲ್ಲಾಗಿರಬಹುದು. ಸಂಬಂಧಗಳಿಗೆ ಬೆಲೆಯೇ ಇಲ್ಲದ ಈ ಕಾಲದಲ್ಲಿ ದಿನ ಬೆಳಗಾದರೆ ಸಾಕು ಒಡಹುಟ್ಟಿದವರು ಕೂಡಾ ಶತ್ರುಗಳಾಗುತ್ತಾರೆ. ಇವುಗಳ ನಡುವೆ ತಾಯಿ ಪ್ರೀತಿ, ಹೃದಯ ವೈಶಾಲ್ಯತೆ ಅಂದರೇನು ಅಂತ ಇಲ್ಲೊಂದು ಹಂದಿ ತೋರಿಸಿ ಕೊಟ್ಟಿದೆ. ಅನಾಥವಾದ ನಾಯಿ ಮರಿಗಳಿಗೆ ಹಂದಿಯೊಂದು ಹಾಲುಣಿಸಿ ಪೋಷಣೆ ಮಾಡುತ್ತಿರುವಂತಹ ಅಪರೂಪದ ಘಟನೆ ಬೆಣ್ಣೆ ನಗರಿ ದಾವಣಗೆರೆಯ ರಂಗನಾಥ್ ಬಡಾವಣೆಯಲ್ಲಿ ಕಂಡು ಬಂದಿದೆ. ಆರು ನಾಯಿ ಮರಿಗಳನ್ನು ತನ್ನ ಮಕ್ಕಳಂತೆ  ಹಂದಿ ಸಲಹುತ್ತಿದೆ. ನಾಯಿ ಮರಿಗಳಿಗೆ ಹಂದಿ ಹಾಲುಣಿಸುತ್ತಿರುವ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಕೂಡ ಆಗಿದೆ. ಕೆಲ ತಿಂಗಳಿನಿಂದ ನಾಯಿ ಮರಿಗಳಿಗೆ ಹಂದಿ ತಾಯಿಯಾಗಿದ್ದು, ಮಾತೃ ವಾತ್ಸಲ್ಯ ನೀಡುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.