ಭಾರತ ಮತ್ತು ಜಪಾನಿನ ಪಾರಂಪರಿಕ ಮತ್ತು ಸಾಂಸ್ಕೃತಿಕ ಅಭಿರುಚಿಗಳ ಸಂಕೇತವಾಗಿದೆ ಈ ರುದ್ರಾಕ್ಷ್ ಸಮಾವೇಶ ಕೇಂದ್ರ

| Updated By: preethi shettigar

Updated on: Jul 16, 2021 | 7:48 AM

ಎರಡು ಅಂತಸ್ತಿನ ಕಟ್ಟಡವಾಗಿರುವ ರುದ್ರಾಕ್ಷ್​ನ ಮುಖ್ಯ ಹಾಲ್ ಗೋಪುರವನ್ನೊಳಗೊಂಡಿದ್ದು ಅಲ್ಲಿ 1,200 ಜನರು ಆಸೀನರಾಬಹುದು. ಗ್ಯಾಲರಿ, ಸಭೆ ನಡೆಸಲ‘ಲು ರೂಮುಗಳು ಮತ್ತು ಸುಮಾರ 120 ಕಾರುಗಳನ್ನು ಪಾರ್ಕ್ ಮಾಡುವಷ್ಟು ಸ್ಥಳಾವಕಾಶ ಇಲ್ಲಿದೆ.

ಭಾರತ ಮತ್ತು ಜಪಾನಿನ ಪಾರಂಪರಿಕ ಮತ್ತು ಸಾಂಸ್ಕೃತಿಕ ಅಭಿರುಚಿಗಳ ಸಂಕೇತವಾಗಿದೆ ಈ ರುದ್ರಾಕ್ಷ್ ಸಮಾವೇಶ ಕೇಂದ್ರ
ರುದ್ರಾಕ್ಷ್ ಸಮಾವೇಶ ಕೇಂದ್ರ, ವಾರಣಾಸಿ
Follow us on

ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ವಾರಣಾಸಿಯಲ್ಲಿ ರುದ್ರಾಕ್ಷ್​ ಎಂದು ಕರೆಸಿಕೊಳ್ಳುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಜಪಾನ್ ಮತ್ತು ಭಾರತದ ನಾಗರಿಕತೆ ಹಾಗೂ ಎರಡು ರಾಷ್ಟ್ರಗಳ ನಡುವಿನ ಪಾರಂಪರಿಕ ಮತ್ತು ಸಾಂಸ್ಕೃತಿಕ ಹೋಲಿಕೆಗಳ ಆಧಾರದಲ್ಲಿ ನಿರ್ಮಿಸಲಾಗಿರುವ ರುದ್ರಾಕ್ಷ್ ಕಟ್ಟಡವು ಸುಮಾರು 2.87 ಭೂಪ್ರದೇಶವನ್ನು ಆವರಿಸಿದೆ. ಆರಂಭದಿಂದಲೂ ಮಿತ್ರರಾಷ್ಟ್ರಗಳಾಗಿರುವ ಭಾರತ ಮತ್ತು ಜಪಾನ್ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸಿದ್ದು ಪ್ರಧಾನಿ ಮೋದಿ ಮತ್ತು ಜಪಾನಿನ ಹಿಂದಿನ ಪ್ರಧಾನ ಮಂತ್ರಿ ಶಿಂಜೊ ಅಬಿ ಅವರು. ನಾಯಕರು ಪರಸ್ಪರರ ದೇಶಗಳಿಗೆ ಭೇಟಿ ನೀಡಿ ಎರಡು ದೇಶಗಳ ನಡುವಿನ ಪರಂಪರೆ, ಸಂಪ್ರದಾಯ ಮತ್ತು ಸಾಂಸ್ಕೃತಿಕ ಅಭಿರುಚಿಗಳು ಒಂದೇ ತೆರನಾಗಿರುವದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಇದರ ಫಲಶೃತಿಯೇ ಭವ್ಯವಾಗಿ ಎದ್ದು ನಿಂತಿರುವ ರುದ್ರಾಕ್ಷ್ ಕಟ್ಟಡ. ಜಪಾನಿನ ಕ್ಯುಟೋ ಎಂಬ ಪ್ರದೇಶ ಮತ್ತು ಕಾಶಿ ನಡುವಿನ ಸಾಂಪ್ರದಾಯಿಕ ಮತ್ತು ಪಾರಂಪರಿಕ ಅಂಶಗಳಲ್ಲಿ ಕಂಡುಬರುವ ಸಮಾನತೆಗಳು ಈ ಕಟ್ಟಡದಲ್ಲಿ ಸಮ್ಮಿಳಿತಗೊಂಡಿವೆ.

ಎರಡು ಅಂತಸ್ತಿನ ಕಟ್ಟಡವಾಗಿರುವ ರುದ್ರಾಕ್ಷ್​ನ ಮುಖ್ಯ ಹಾಲ್ ಗೋಪುರವನ್ನೊಳಗೊಂಡಿದ್ದು ಅಲ್ಲಿ 1,200 ಜನರು ಆಸೀನರಾಬಹುದು. ಗ್ಯಾಲರಿ, ಸಭೆ ನಡೆಸಲ‘ಲು ರೂಮುಗಳು ಮತ್ತು ಸುಮಾರ 120 ಕಾರುಗಳನ್ನು ಪಾರ್ಕ್ ಮಾಡುವಷ್ಟು ಸ್ಥಳಾವಕಾಶ ಇಲ್ಲಿದೆ.

ಕಟ್ಟಡದ ಸಮಾವೇಶ ಕೇಂದ್ರದಲ್ಲಿ 108 ರುದ್ರಾಕ್ಷಗಳನ್ನು ಅಳವಡಿಸಲಾಗಿದೆ ಮತ್ತ ಅದರ ಮೇಲ್ಛಾವಣಿಯನ್ನು ಶಿವ ಲಿಂಗದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ.

https://drive.google.com/file/d/16mAazwZJmEI0eRFqUPsHXRb9qlUL1Dtb/view

ಜನರು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಾಲೋಚನೆಗಳನ್ನು ನಡೆಸಲು ಅನುಕೂಲವಾಗುವುದಕ್ಕೋಸ್ಕರ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸುತ್ತವೆ.

ಅಂತರಾಷ್ಟ್ರೀಯ ಸಮಾವೇಶಗಳು, ವಸ್ತು ಮತ್ತು ಕಲಾ ಪ್ರದರ್ಶನಗಳು, ಸಂಗೀತ ಕಛೇರಿ ಮತ್ತು ಸಂಗೀತ ಸಂಜೆ ಸೇರಿದಂತೆ ಇನ್ನೂ ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲು ರುದ್ರಾಕ್ಷ್ ಅತ್ಯಂತ ಸೂಕ್ತ ಸ್ಥಳವಾಗಿದೆ. ಇಲ್ಲಿನ ಗ್ಯಾಲರಿಯನ್ನು ವಾರಣಾಸಿಯ ಕಲೆ, ಸಂಸ್ಕೃತಿ ಮತ್ತು ಸಂಗೀತವನ್ನು ಬಿಂಬಿಸುವಂತೆ ನಿರ್ಮಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಮಾಹಿತಿಯೊಂದರ ಪ್ರಕಾರ ರುದ್ರಾಕ್ಷ್ ಕಟ್ಟಡವು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದೆ ಮತ್ತು ಗ್ರೀನ್ ರೇಟಿಂಗ್ ಫಾರ್ ಇಂಟಿಗ್ರೇಟೆಡ್ ಹ್ಯಾಬಿಟಾಟ್ ಅಸ್ಸೆಸ್​ಮೆಂಟ್ (ಜಿಆರ್​ಐಎಚ್​ಎ)ನ ಮೂರನೇ ಹಂತಕ್ಕೆ ಆರ್ಹವಾಗಿದೆ

ವಾರಾಣಾಸಿಗೆ ತಮ್ಮ ಭೇಟಿಯ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸುಮಾರು 1,500 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಗೆ ಶಂಕಸ್ಥಾಪನೆ ನೆರವೇರಿಸಲಿದ್ದಾರೆ.

ಇದನ್ನೂ ಓದಿ: PM Modi Varanasi Visit: ಕಾಶಿ ಮೆಡಿಕಲ್​ ಹಬ್​ ಆಗಿ ಬದಲಾಗುತ್ತಿದೆ..ಯೋಗಿ ಜೀ ಅವರಿಂದ ಉತ್ತರಪ್ರದೇಶ ಅಭಿವೃದ್ಧಿಯಾಗುತ್ತಿದೆ: ಪ್ರಧಾನಿ ಮೋದಿ