AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐಎಡಿಎಂಕೆ ಜತೆ ನಟ ದಳಪತಿ ವಿಜಯ್ ಪಕ್ಷ ಟಿವಿಕೆ ಮೈತ್ರಿ ಇಲ್ಲ

ನಟ ದಳಪತಿ ವಿಜಯ್ ಹುಟ್ಟು ಹಾಕಿರುವ ತಮಿಳಗ ವೆಟ್ರಿ ಕಳಗಂ(ಟಿವಿಕೆ)ಯು ಎಐಎಡಿಂಕೆ ಜತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎಂಬುದನ್ನು ಪಕ್ಷ ಸ್ಪಷ್ಟಪಡಿಸಿದೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಜತೆಗಿನ ಸಂಭಾವ್ಯ ಮೈತ್ರಿ ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ.

ಎಐಎಡಿಎಂಕೆ ಜತೆ ನಟ ದಳಪತಿ ವಿಜಯ್ ಪಕ್ಷ ಟಿವಿಕೆ ಮೈತ್ರಿ ಇಲ್ಲ
ವಿಜಯ್Image Credit source: Mint
ನಯನಾ ರಾಜೀವ್
|

Updated on: Nov 18, 2024 | 2:29 PM

Share

ನಟ ದಳಪತಿ ವಿಜಯ್ ಹುಟ್ಟು ಹಾಕಿರುವ ತಮಿಳಗ ವೆಟ್ರಿ ಕಳಗಂ(ಟಿವಿಕೆ)ಯು ಎಐಎಡಿಂಕೆ ಜತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎಂಬುದನ್ನು ಪಕ್ಷ ಸ್ಪಷ್ಟಪಡಿಸಿದೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಜತೆಗಿನ ಸಂಭಾವ್ಯ ಮೈತ್ರಿ ಬಗೆಗಿನ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ.

ವಿಜಯ್ ತಮ್ಮ ಪಕ್ಷದ ಪ್ರಾರಂಭೋತ್ಸವದಂದು ಡಿಎಂಕೆ ತಮ್ಮ ರಾಜಕೀಯ ಎದುರಾಳಿಯಾದರೆ ಬಿಜೆಪಿ ಸೈದ್ಧಾಂತಿಕ ಎದುರಾಳಿ ಎಂದು ಘೋಷಿಸಿದ್ದರು. ಆದರೆ ಹಾಗಾದರೆ ಎಐಎಡಿಎಂಕೆ ಜತೆಗೆ ಮೈತ್ರಿ ಮಾಡಿಕೊಳ್ಳಬಹುದು ಎನ್ನುವ ಅಂತೆ ಕಂತೆಗಳು ಶುರುವಾಗಿದ್ದವು. ಇದೀಗ ಈ ಕುರಿತು ತಮಿಳಗ ವೆಟ್ರಿ ಕಳಗಂ ಸ್ಪಷ್ಟನೆ ಕೊಟ್ಟಿದ್ದು, ಇದರಲ್ಲಿ ಯಾವುದೇ ಸತ್ಯವಿಲ್ಲ ಎಂದಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಆನಂದ್ ಮಾತನಾಡಿ, ಸಾರ್ವಜನಿಕರು ಇಂತಹ ಸುದ್ದಿಗಳನ್ನು ನಿರ್ಲಕ್ಷಿಸಬೇಕೆಂದು ಒತ್ತಾಯಿಸಿದ ಅವರು, 2026 ರ ವಿಧಾನಸಭಾ ಚುನಾವಣೆಗೆ ಪಕ್ಷವು ತಯಾರಿ ನಡೆಸುತ್ತಿದೆ, ನಿರ್ಣಾಯಕ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಚುನಾವಣಾ ಆಯೋಗದಿಂದ ನಟ ದಳಪತಿ ವಿಜಯ್ ಪಕ್ಷಕ್ಕೆ ಮಾನ್ಯತೆ

ಮೈತ್ರಿಯ ಭಾಗವಾಗಿ 2026 ರ ಚುನಾವಣೆಯಲ್ಲಿ ಸ್ಪರ್ಧಿಸಲು ವಿಜಯ್ ಉಪ ಮುಖ್ಯಮಂತ್ರಿ ಸ್ಥಾನ ಮತ್ತು 60 ಸ್ಥಾನಗಳನ್ನು ಬಯಸುತ್ತಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ.

ಆದರೆ ಇದ್ಯಾವುದು ಸತ್ಯವಲ್ಲ, ನಮ್ಮ ಪಕ್ಷವು ಸಂಪೂರ್ಣವಾಗಿ ತಮಿಳುನಾಡಿನ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿದೆ. ಪಕ್ಷದ ನಾಯಕರು ಪ್ರಸ್ತಾಪಿಸಿದ ಸಿದ್ಧಾಂತವನ್ನು ಅನುಸರಿಸಿ, ಜನಬೆಂಬಲದ ಮೂಲಕ ಭಾರಿ ಗೆಲುವು ಸಾಧಿಸುವುದು ಮತ್ತು ಜನರಿಗಾಗಿ ಉತ್ತಮ ಸರ್ಕಾರವನ್ನು ರಚಿಸುವುದು ಗುರಿಯಾಗಿದೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ