AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದ ಮತ್ತಿನಲ್ಲಿ ಕತ್ತಿಯಿಂದ ಪತ್ನಿಯ ಕತ್ತು ಸೀಳಿದ ವ್ಯಕ್ತಿ

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕತ್ತಿಯಿಂದ ಪತ್ನಿಯ ಕತ್ತು ಸೀಳಿರುವ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, 33 ವರ್ಷದ ಆರೋಪಿ ದೀಪು ಸಿಂಗ್ ಕುಡಿತದ ಚಟ ಹೊಂದಿದ್ದ ಮತ್ತು ಆತ ತನ್ನ ಪತ್ನಿ ಪ್ರಿಯಾಂಕಾ ಜತೆ ಸ್ವಲ್ಪ ಜಗಳವನ್ನೂ ಆಡಿದ್ದ ಎಂದು ಹೇಳಿದ್ದಾರೆ.

ಕುಡಿದ ಮತ್ತಿನಲ್ಲಿ ಕತ್ತಿಯಿಂದ ಪತ್ನಿಯ ಕತ್ತು ಸೀಳಿದ ವ್ಯಕ್ತಿ
Image Credit source: DNA Forensics
ನಯನಾ ರಾಜೀವ್
|

Updated on: Nov 18, 2024 | 12:47 PM

Share

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕತ್ತಿಯಿಂದ ಪತ್ನಿಯ ಕತ್ತು ಸೀಳಿರುವ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, 33 ವರ್ಷದ ಆರೋಪಿ ದೀಪು ಸಿಂಗ್ ಕುಡಿತದ ಚಟ ಹೊಂದಿದ್ದ ಮತ್ತು ಆತ ತನ್ನ ಪತ್ನಿ ಪ್ರಿಯಾಂಕಾ ಜತೆ ಸ್ವಲ್ಪ ಜಗಳವನ್ನೂ ಆಡಿದ್ದ ಎಂದು ಹೇಳಿದ್ದಾರೆ.

ಈ ಕೊಲೆ ನಡೆಯುವಾಗ ಮನೆಯಲ್ಲಿ ಕೇವಲ ಇಬ್ಬರೇ ಇದ್ದರು, ಸಿಂಗ್ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ, ಆರೋಪಿಯ ತಾಯಿ ಮನೆಗೆ ಹಿಂದಿರುಗಿದಾಗ, ತನ್ನ ಸೊಸೆಯ ದೇಹವು ರಕ್ತದಲ್ಲಿ ತೊಯ್ದು ಹೋಗಿರುವುದನ್ನು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಎಸ್‌ಎಚ್‌ಒ ಹೇಳಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೆಳಗಾವಿ: ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ, ಕುಂದಾ ನಗರಿಯಲ್ಲಿ ಮತ್ತೊಂದು ಅಮಾನವೀಯ ಘಟನೆ

ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ಆಭರಣ ವ್ಯಾಪಾರಿಯೊಬ್ಬರು ತಮ್ಮ ಪತ್ನಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗನನ್ನು ವಿಷವುಣಿಸಿ ಕೊಂದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ . ಇದಾದ ಬಳಿಕ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ.

ಮುಕೇಶ್ ವರ್ಮಾ ಎಂಬ ವ್ಯಕ್ತಿಯನ್ನು ರೈಲ್ವೇ ರಕ್ಷಣಾ ಪಡೆ ಯೋಧರು ರೈಲು ಹಳಿಗಳಿಂದ ರಕ್ಷಿಸಿದ್ದಾರೆ. ಮುಕೇಶ್ ತನ್ನ ಹೆಂಡತಿ ಮತ್ತು ಮಕ್ಕಳ ಶವಗಳ ಫೋಟೋಗಳನ್ನು ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

ಎರಡು ವಾರಗಳ ಹಿಂದೆ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಯುಪಿಯ ವಾರಾಣಸಿಯ ಭದೈನಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ, ಇಬ್ಬರು ಪುತ್ರರು ಮತ್ತು ಮಗಳನ್ನು ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ