ಮಾಸ್ಕೋ: ರಷ್ಯಾದಿಂದ ಉಕ್ರೇನ್ನಲ್ಲಿ ಯುದ್ಧ ಮುಂದುವರೆದಿದ್ದು, ಈಗಾಗಲೇ ಎರಡೂ ದೇಶಗಳ ಸಾಕಷ್ಟು ಸೈನಿಕರು ಸಾವನ್ನಪ್ಪಿದ್ದಾರೆ. ಬ್ರಿಟನ್ (Britain) ಮತ್ತು ಜರ್ಮನಿ ಸೇರಿದಂತೆ 36 ದೇಶಗಳ ವಿಮಾನಯಾನ ಸಂಸ್ಥೆಗಳ ವಿಮಾನ ಹಾರಾಟವನ್ನು ರಷ್ಯಾ ನಿಷೇಧಿಸಿದೆ. ರಷ್ಯಾದ ವಿಮಾನಯಾನ ಸಂಸ್ಥೆಗಳು ಯುರೋಪಿಯನ್ ರಾಷ್ಟ್ರಗಳು ಮತ್ತು ಕೆನಡಾ, ಜರ್ಮನಿ (Germany) ಮುಂತಾದ ವಾಯುಪ್ರದೇಶವನ್ನು ಪ್ರವೇಶಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಉಕ್ರೇನ್ ಮೇಲೆ ದಾಳಿ ಮಾಡಿದ್ದರಿಂದ ಅನೇಕ ದೇಶಗಳು ರಷ್ಯಾದ ವಿಮಾನಗಳಿಗೆ ನಿಷೇಧ ಹೇರಿತ್ತು. ರಷ್ಯಾದ ವಿಮಾನಯಾನ ಸಂಸ್ಥೆಗಳಿಗೆ ಅಥವಾ ರಷ್ಯಾದಲ್ಲಿ ನೋಂದಾಯಿಸಲ್ಪಟ್ಟಿರುವ ನಾಗರಿಕ ವಿಮಾನಯಾನದ ಮೂಲಕ ಪ್ರಯಾಣಿಸುವ ವಿಮಾನಗಳಿಗೆ ಯುರೋಪಿಯನ್ ರಾಷ್ಟ್ರಗಳು ನಿಷೇಧ ಹೇರಿದ್ದಕ್ಕೆ ಪ್ರತೀಕಾರವಾಗಿ ಈ ನಿರ್ಬಂಧ ಹೇರಲಾಗಿದೆ ಎಂದು ಹೇಳಿದೆ.
ವಿಶೇಷ ಪರವಾನಗಿಯೊಂದಿಗೆ ಮಾತ್ರ ಏರ್ಲೈನ್ಸ್ ರಷ್ಯಾದ ವಾಯುಪ್ರದೇಶವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಯುರೋಪಿಯನ್ ರಾಷ್ಟ್ರಗಳು, ಕೆನಡಾ, ನೆರೆಯ ಪುಟ್ಟರಾಷ್ಟ್ರ ಬೆಲ್ಜಿಯಂ ಸೇರಿದಂತೆ ಸುಮಾರು 36 ರಾಷ್ಟ್ರಗಳಿಗೆ ತನ್ನ ವಾಯುಮಾರ್ಗ ಬಳಕೆ ಮಾಡದಂತೆ ರಷ್ಯಾ ನಿರ್ಬಂಧ ಹೇರಿದೆ. ಆದರೆ, ತುರ್ತು ಪರಿಸ್ಥಿತಿಯಲ್ಲಿ ಆಯಾ ದೇಶಗಳ ವಿಮಾನಗಳು ವಿಶೇಷ ಅನುಮತಿಯೊಂದಿಗೆ ಮಾತ್ರ ರಷ್ಯಾದ ವಾಯುಪ್ರದೇಶವನ್ನು ಪ್ರವೇಶಿಸಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಉಕ್ರೇನ್ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ರಷ್ಯಾ ಮೇಲೆ ಆರ್ಥಿಕ ಮತ್ತು ವ್ಯಾವಹಾರಿಕ ನಿರ್ಬಂಧಗಳನ್ನು ಹೇರಿದೆ. ಇದಕ್ಕೆ ಪ್ರತಿಯಾಗಿ ರಷ್ಯಾದಲ್ಲಿರುವ ಅಮೆರಿಕನ್ನರು ಸ್ಥಳೀಯರ ವಿರೋಧ ಎದುರಿಸುವಂತಾಗಿದೆ. ರಷ್ಯಾದಲ್ಲಿರುವ ಅಮೆರಿಕನ್ನರಿಗೆ ಸ್ಥಳೀಯರು ಕೂಡಲೇ ದೇಶ ತೊರೆಯುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
ಖಾಸಗಿ ಜೆಟ್‌ಗಳು ಸೇರಿದಂತೆ ರಷ್ಯಾದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಯುರೋಪಿಯನ್ ಯೂನಿಯನ್ ಭಾನುವಾರ ಘೋಷಿಸಿತ್ತು. ವಿಮಾನಯಾನ ಸಂಸ್ಥೆಗಳು ಕೆಲವು ಮಾರ್ಗಗಳಲ್ಲಿ ದೀರ್ಘವಾದ ಮಾರ್ಗಗಳನ್ನು ಬಳಸಬೇಕಾದ್ದರಿಂದ ಟಿಕೆಟ್ ದರವೂ ಹೆಚ್ಚಾಗುವ ಸಾಧ್ಯತೆಯಿದೆ. ತನ್ನ ವಿಮಾನಗಳ ಮೇಲಿನ ನಿಷೇಧಗಳಿಗೆ ಪ್ರತಿಕ್ರಿಯೆಯಾಗಿ ಬ್ರಿಟನ್ ಮತ್ತು ಜರ್ಮನಿ ಸೇರಿದಂತೆ 36 ದೇಶಗಳ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ನಿಷೇಧಿಸುವುದಾಗಿ ರಷ್ಯಾ ಇಂದು ಘೋಷಿಸಿತು.
ರಷ್ಯಾದ ವಿಮಾನಯಾನ ಸಂಸ್ಥೆಗಳು ಈಗ ಬಹುಪಾಲು ಯುರೋಪಿಯನ್ ರಾಷ್ಟ್ರಗಳು ಮತ್ತು ಕೆನಡಾದ ವಾಯುಪ್ರದೇಶವನ್ನು ಪ್ರವೇಶಿಸಲು ಸಾಧ್ಯವಾಗದ ಕಾರಣ ರಷ್ಯಾ ಕೂಡ ಈ ನಿರ್ಬಂಧ ಹೇರಿದೆ. ಬ್ರಿಟನ್ ದೇಶದ ಪ್ರಮುಖ ವಾಹಕವಾದ ಏರೋಫ್ಲಾಟ್ ಮತ್ತು ಖಾಸಗಿ ಜೆಟ್‌ಗಳನ್ನು ನಿರ್ಬಂಧಿಸಿದ ನಂತರ ಕಳೆದ ವಾರ ರಷ್ಯಾ ಇಂಗ್ಲೆಂಡ್ ವಿಮಾನಯಾನ ಸಂಸ್ಥೆಗಳನ್ನು ನಿಷೇಧಿಸಿತು.
ಖಾಸಗಿ ಜೆಟ್‌ಗಳು ಸೇರಿದಂತೆ ರಷ್ಯಾದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಯುರೋಪಿಯನ್ ಯೂನಿಯನ್ ಭಾನುವಾರ ಘೋಷಿಸಿದೆ. ಈ ಕ್ರಮಗಳಿಂದ ವಿಮಾನಯಾನ ಸಂಸ್ಥೆಗಳು ಕೆಲವು ಮಾರ್ಗಗಳಲ್ಲಿ ಟಿಕೆಟ್ ದರ ಹೆಚ್ಚಾಗುವ ಸಾಧ್ಯತೆಯಿದೆ.