ಖಲಿಸ್ತಾನಿ(Khalistani)ಗಳಿಗೆ ಜಾಗ ನೀಡದಂತೆ ಕೆನಡಾ, ಅಮೆರಿಕ, ಯುಕೆ ಹಾಗೂ ಆಸ್ಟ್ರೇಲಿಯಾ ದೇಶಗಳಿಗೆ ಭಾರತ ಮನವಿ ಮಾಡಿದೆ. ಇದು ನಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಹೇಳಿದ್ದಾರೆ. ಖಲಿಸ್ತಾನಿಗಳ ಮನಸ್ಥಿತಿಯು ಭಾರತ ಹಾಗೂ ಅವರು ವಾಸಿಸುತ್ತಿರುವ ದೇಶಗಳಿಗೆ ಹಾನಿಕಾರಕವಾಗಿದೆ. ಕೆನಡಾದಲ್ಲಿ ಸಿಖ್ ಫಾರ್ ಜಸ್ಟಿಸ್ ಬ್ಯಾನರ್ ಅಡಿಯಲ್ಲಿ ಕೆಲವು ಪೋಸ್ಟರ್‌ಗಳನ್ನು ಹಾಕಲಾಗಿದೆ, ಅದರಲ್ಲಿ ಕಿಲ್ ಇಂಡಿಯಾ ಎಂದು ಬರೆಯಲಾಗಿತ್ತು.
ಈ ಪೋಸ್ಟರ್‌ನಲ್ಲಿ ಜುಲೈ 8 ರಂದು ನಿಗದಿಯಾಗಿರುವ ಖಲಿಸ್ತಾನ್ ಫ್ರೀಡಂ ರ್ಯಾಲಿಗೆ ಜನರನ್ನು ಆಹ್ವಾನಿಸಲಾಗಿದೆ. ಪೋಸ್ಟರ್ ಪ್ರಕಾರ, ರ್ಯಾಲಿಯು ಗ್ರೇಟ್ ಪಂಜಾಬ್ ಬಿಸಿನೆಸ್ ಸೆಂಟರ್ ಮಾಲ್ಟನ್‌ನಿಂದ ಪ್ರಾರಂಭವಾಗಿ ಟೊರೊಂಟೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕೊನೆಗೊಳ್ಳುತ್ತದೆ. ಖಾಲಿಸ್ತಾನ್ ಟೈಗರ್ ಫೋರ್ಸ್‌ನ ಮಾಜಿ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ಹತ್ಯೆ ಮಾಡಲಾಗಿದೆ.
ಮತ್ತಷ್ಟು ಓದಿ: Amritpal Singh: ಖಲಿಸ್ತಾನಿ ಬೆಂಬಲಿಗ ಅಮೃತ್ಪಾಲ್ ಸಿಂಗ್ ಶರಣಾಗುವ ಸಾಧ್ಯತೆ, ಏ.14ರವರೆಗೆ ಪಂಜಾಬ್ ಪೊಲೀಸರ ರಜೆಗಳು ರದ್ದು
ಕೆನಡಾದಲ್ಲಿ ಭಾರತೀಯ ರಾಯಭಾರಿ, ಹೈಕಮಿಷನರ್ ಸಂಜಯ್ ವರ್ಮಾ ಮತ್ತು ಟೊರೊಂಟೊದಲ್ಲಿರುವ ಭಾರತದ ಕಾನ್ಸುಲ್ ಜನರಲ್ ಅಪೂರ್ವ ಶ್ರೀವಾಸ್ತವ ಅವರ ಚಿತ್ರಗಳು ಮತ್ತು ಹೆಸರುಗಳನ್ನು ಹೊಂದಿರುವ ಖಲಿಸ್ತಾನ್ ಪರ ಪೋಸ್ಟರ್ ಕೆನಡಾದಲ್ಲಿ ಹೊರಬಿದ್ದಿದ್ದು, ಖಲಿಸ್ತಾನಿ ಹರ್ದೀಪ್ ನಿಜ್ಜಾರ್ ಹತ್ಯೆಗೆ ಭಾರತವೇ ಕಾರಣ ಎಂದು ಹೇಳಿಕೊಂಡಿದೆ.
#WATCH | On names of Indian diplomats in Khalistani posters in Canada, EAM Dr S Jaishankar, says “We have requested our partner countries like Canada, the United States, the UK and Australia not to give space to the Khalistanis. This will affect our relations. We will raise this… pic.twitter.com/U4IQBzZ35X
— ANI (@ANI) July 3, 2023
2022 ರಲ್ಲಿ, ಜಲಂಧರ್‌ನಲ್ಲಿ ಪಾದ್ರಿಯೊಬ್ಬರನ್ನು ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಖಾಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ನಿಜ್ಜರ್‌ಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ಮಾರ್ಚ್‌ನಲ್ಲಿ ಖಲಿಸ್ತಾನ ಬೆಂಬಲಿಗರು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Wed, 5 July 23