ಕೇರಳ: ಕೇರಳದ ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮಕರಜ್ಯೋತಿ ಮೂಡುವ ಮೂಲಕ ಭಕ್ತ ಸಾಗರಕ್ಕೆ ಮಣಿಕಂಠ ಸ್ವಾಮಿ ದರ್ಶನ ನೀಡಿದ್ದಾನೆ. ಐತಿಹಾಸಿಕ ಶಬರಿಮಲೆ ದೇಗುಲದಲ್ಲಿ ಮಕರಜ್ಯೋತಿ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಸಾಗರ ನೆರೆದಿತ್ತು. (Sabarimala) ಅಯ್ಯಪ್ಪನ ದರ್ಶನದ ಜೊತೆಗೆ ಮಕರಜ್ಯೋತಿ ದರ್ಶನವನ್ನು ಅಯ್ಯಪ್ಪ ಸ್ವಾಮಿ ಭಕ್ತರು ಕಣ್ತುಂಬಿಕೊಂಡರು, ಇದು ಭಕ್ತಕೋಟಿಗೆ ಒಂದು ಪುಣ್ಯ ಕಾಲ, ಈ ಕ್ಷಣಕ್ಕಾಗಿ ಶ್ರದ್ಧೆ, ಭಕ್ತಿಯಿಂದ ಕಾಯುತ್ತಿದ್ದ ಮಾಲಾಧಾರಿಗಳಿಗೆ ದೇವರೇ ಒಂದು ಬಾರಿ ದರ್ಶನ ನೀಡುವ ಕ್ಷಣ ಇದು. ಶಬರಿಮಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮೂರು ಬಾರಿ ಮಕರಜ್ಯೋತಿ ಮೂಡುತ್ತದೆ. ಮೂಡುವುದು ಮೂಡುವುದು ಮಕರಜ್ಯೋತಿ ಎನ್ನುವ ಹಾಡಿನ ಮೂಲಕ ಭಕ್ತರು ಜ್ಯೋತಿಯನ್ನು ಕಣ್ತುಂಬಿಕೊಳ್ಳತ್ತಾರೆ. ಸ್ವಾಮಿಯೇ ಅಯ್ಯಪ್ಪ ಎನ್ನುವ ಮಂತ್ರ ಘೋಷಣೆ ಮೂಲಕ ಈ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ.
ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಈ ಮಕರಜ್ಯೋತಿ ಗೋಚರಿಸುವುದು. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪೊನ್ನಂಬಲಮೇಡುವಿನ ಬೆಟ್ಟದಲ್ಲಿ ಮಣಿಕಂಠನ ರೂಪದಲ್ಲಿ ಈ ಜ್ಯೋತಿ ಮೂಡುವುದು. ಈ ಜ್ಯೋತಿ ರೂಪದಲ್ಲಿ ಮೂರು ಸಲ ಗೋಚರಿಸಿದೆ. ಮಕರಜ್ಯೋತಿಯನ್ನು ಕಣ್ತುಂಬಿಕೊಳ್ಳಲು ನೆರೆದಿರುವ ಅಯ್ಯಪ್ಪ ಭಕ್ತರಿಗೆ ಇದೊಂದು ಸಂತಸದ ವಾತಾವರಣವನ್ನು ನಿಮಾರ್ಣ ಮಾಡಿದೆ.
ಈ ಮಕರ ಜ್ಯೋತಿಗೆ ಅನೇಕ ವಿವಾದಗಳು ಕೂಡ ಸೃಷ್ಟಿಯಾಗಿತ್ತು. ದೂರದ ಕಾಡಿನ ಬೆಟ್ಟದಲ್ಲಿ ಮೂಡುವುದು ಜ್ಯೋತಿ ಅಲ್ಲ, ಅದು ಮಾನವ ನಿರ್ಮಿತ ಎಂಬ ವಿವಾದಗಳು ಕೂಡ ಇತ್ತು. ಆದರೆ ಈ ಬಗ್ಗೆ ಅನೇಕ ಬಾರಿ ವಿರೋಧಿಸಲಾಗಿತ್ತು. ಈ ಯಾವುದೇ ವಿವಾದಗಳಿದ್ದರು, ಭಕ್ತಕುಲಕ್ಕೆ ನಾವು ನಂಬಿರುವ ದೈವ ಅಯ್ಯಪ್ಪನೇ ದರ್ಶನ ನೀಡುತ್ತಾನೆ ಎಂಬ ನಂಬಕೆಯನ್ನು ಇಟ್ಟುಕೊಂಡಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Sat, 14 January 23