ಕಡಿಮೆ ಹೊಗೆ ನೀಡುವ ಹರಳೆಣ್ಣೆಯಿಂದ ದೀಪ ಬೆಳಗಿಸಿ; ದೀಪಾವಳಿಗೆ ಸದ್ಗುರು ಸಲಹೆ
ಬೆಳಕಿನ ಹಬ್ಬದ ಮಹತ್ವದ ಕುರಿತು ಸದ್ಗುರು ಜಗ್ಗಿ ವಾಸುದೇವ್ ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ. ಜನರು ಹಣತೆ ಹಚ್ಚುವುದರ ಜೊತೆಗೆ ತಮ್ಮೊಳಗಿನ ಬೆಳಕನ್ನು ಕೂಡ ಬೆಳಗಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ. ನಾವು ಹಲವು ರೀತಿಯ ದೀಪಗಳನ್ನು ಬೆಳಗಿಸಬಹುದಾದರೂ ಕಡಿಮೆ ಹೊಗೆಯನ್ನು ಉತ್ಪಾದಿಸುವ ಹರಳೆಣ್ಣೆಯಿಂದ ದೀಪವನ್ನು ಬೆಳಗಿಸುವುದು ಉತ್ತಮ ಎಂದು ಅವರು ಹೇಳಿದ್ದಾರೆ.

ನವದೆಹಲಿ, ಅಕ್ಟೋಬರ್ 20: ದೀಪಾವಳಿ (Deepavali) ಹಬ್ಬದ ವೇಳೆ ಕಡಿಮೆ ಹೊಗೆ ಸೂಸುವ ಪಟಾಕಿಗಳನ್ನು ಸಿಡಿಸುವ ಮೂಲಕ, ರಾಸಾಯನಿಕ ಮುಕ್ತವಾದ ರೀತಿಯಲ್ಲಿ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಹಬ್ಬವನ್ನು ಆಚರಿಸಲು ಸರ್ಕಾರ ಜನರಲ್ಲಿ ಮನವಿ ಮಾಡಿದೆ. ಆದರೆ, ಕಡಿಮೆ ಹೊಗೆ ಉತ್ಪಾದಿಸುವ ಹರಳೆಣ್ಣೆಯಿಂದ ಹಣತೆಯನ್ನು ಬೆಳಗಿಸುವ ಬಗ್ಗೆ ಜನರಿಗೆ ಇಶಾ ಫೌಂಡೇಷನ್ನ ಮುಖ್ಯಸ್ಥ ಸದ್ಗುರು (Sadhguru) ಜಗ್ಗಿ ವಾಸುದೇವ್ ಸಲಹೆ ನೀಡಿದ್ದಾರೆ.
ದೀಪಾವಳಿ ಎಂದರೆ ಕೇವಲ ಮನೆಗಳ ಮುಂದೆ ದೀಪಗಳನ್ನು ಬೆಳಗಿಸುವುದಲ್ಲ, ನಮ್ಮೊಳಗಿನ ಕತ್ತಲೆಯನ್ನು ಹೋಗಲಾಡಿಸಿ ನಮ್ಮ ಮನಸ್ಸನ್ನು ಬೆಳಕಿನಿಂದ ತುಂಬುವುದಾಗಿದೆ. ಈ ಬಾರಿ ದೀಪಾವಳಿಗೆ ಹರಳೆಣ್ಣೆಯ ದೀಪಗಳನ್ನು ಬೆಳಗಿಸುವ ಮೂಲಕ ಹಸಿರು ದೀಪಾವಳಿಯನ್ನು ಆಚರಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಹರಳೆಣ್ಣೆ ಬಳಸುವುದರಿಂದ ಹೊಗೆ ಕಡಿಮೆಯಾಗಿ ಬೆಳಕು ಹೆಚ್ಚು ಇರುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Video: ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಇಡೀ ಜಗತ್ತು ದೀಪಾವಳಿ ಆಚರಣೆಯಲ್ಲಿ ಮುಳುಗಿರುವ ಈ ಸಮಯದಲ್ಲಿ, ಸದ್ಗುರುಗಳು ಒಳ್ಳೆಯ ಸಂದೇಶವೊಂದನ್ನು ನೀಡಿದ್ದಾರೆ. ಈ ಹಬ್ಬದ ನಿಜವಾದ ಅರ್ಥ ಕೇವಲ ಮನೆಗಳ ಮುಂದೆ ದೀಪಗಳನ್ನು ಬೆಳಗಿಸುವುದಲ್ಲ. ನಮ್ಮ ಮನಸ್ಸಿನಲ್ಲಿರುವ ಕತ್ತಲೆಯನ್ನು ಓಡಿಸಿ ನಮ್ಮೊಳಗಿನ ಬೆಳಕನ್ನು ಬೆಳಗಲು ಬಿಡಬೇಕು ಎಂದು ಅವರು ನಮಗೆ ನೆನಪಿಸಿದ್ದಾರೆ. “ಕತ್ತಲೆಯನ್ನು ಹೋಗಲಾಡಿಸುವುದು ಬೆಳಕಿನ ಸ್ವಭಾವ. ನಿಮ್ಮೊಳಗಿನ ಬೆಳಕು ಬೆಳೆದು ನೀವು ಸ್ಪರ್ಶಿಸುವ ಪ್ರತಿಯೊಬ್ಬರಿಗೂ ಆ ಬೆಳಕು ಹರಡಲಿ ಎಂದು ನಾನು ಬಯಸುತ್ತೇನೆ” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Obliteration of darkness is the nature of Light. May your inner Light grow – to illuminate you and all that you touch. A Dazzling Diwali to you.
Love & Blessings, Sadhguru pic.twitter.com/KRubFdSDED
— Sadhguru (@SadhguruJV) October 20, 2025
ದೀಪಾವಳಿಯ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಈ ಹಬ್ಬದ ಸಮಯದಲ್ಲಿ ಉತ್ತರ ಗೋಳಾರ್ಧವು ಸೂರ್ಯನಿಂದ ದೂರ ಸರಿಯುತ್ತದೆ. ಅದಕ್ಕಾಗಿಯೇ ಹವಾಮಾನವು ತಂಪಾಗುತ್ತದೆ ಮತ್ತು ಸೂರ್ಯನ ಬೆಳಕು ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಜನರು ಸ್ವಲ್ಪ ಆಲಸ್ಯ, ದಣಿವು ಮತ್ತು ಮಾನಸಿಕವಾಗಿ ಆತಂಕವನ್ನು ಅನುಭವಿಸುತ್ತಾರೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಮತ್ತು ನಮ್ಮನ್ನು ಬೆಳಕಿನಿಂದ ತುಂಬಿಸಿಕೊಳ್ಳುವ ಸಮಯ ಅದು. ಅದಕ್ಕಾಗಿಯೇ ದೀಪವನ್ನು ಬೆಳಗಿಸುವುದು ಒಂದು ಸಂಪ್ರದಾಯವಾಗಿದೆ ಎಂದು ಸದ್ಗುರು ವಿವರಿಸಿದ್ದಾರೆ.
ಇದನ್ನೂ ಓದಿ: ದೀಪಾವಳಿಯಲ್ಲಿ ಕಣ್ಣಿಗೆ ಹಾನಿಯಾಗುವುದನ್ನು ತಡೆಯಲು ಆರೋಗ್ಯ ಇಲಾಖೆ ನೀಡಿರುವ ಈ ಸಲಹೆಗಳನ್ನು ಪಾಲಿಸಿ
ದೀಪಗಳನ್ನು ವಿವಿಧ ಎಣ್ಣೆಗಳಿಂದ ಬೆಳಗಿಸಬಹುದು, ಆದರೆ ಇದಕ್ಕೆ ಹರಳೆಣ್ಣೆ ಉತ್ತಮ ಎಂದು ಸದ್ಗುರು ಹೇಳಿದ್ದಾರೆ. ಇದು ಕಡಿಮೆ ಹೊಗೆಯನ್ನು ಉತ್ಪಾದಿಸುತ್ತದೆ. ಇದು ಸ್ವಚ್ಛವಾಗಿ ಮತ್ತು ಸರಾಗವಾಗಿ ಉರಿಯುತ್ತದೆ ಎಂದು ಅವರು ವಿವರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




