Video: ಜರ್ಮನ್ ಶೆಫರ್ಡ್ ನಾಯಿಯನ್ನು ಬಾಲಕರ ಮೇಲೆ ಛೂ ಬಿಟ್ಟ ಮಾಲೀಕ
ಜರ್ಮನ್ ಶೆಫರ್ಡ್ ನಾಯಿಯನ್ನು ಅದರ ಮಾಲೀಕ ಬಾಲಕರ ಮೇಲೆ ಛೂ ಬಿಟ್ಟಿರುವ ಘಟನೆ ಪಿಂಪ್ರಿ-ಚಿಂಚ್ವಾಡದ ಭೋಸಾರಿ ಪ್ರದೇಶದಲ್ಲಿ ನಡೆದಿದೆ. ಭೋಸಾರಿ MIDC ಬಳಿಯ ಸ್ವರಾಜ್ಯ ನಗರಿ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ. ವೀಡಿಯೊದಲ್ಲಿ, ಮಕ್ಕಳು ಸೊಸೈಟಿ ಆವರಣದಲ್ಲಿ ಆಟವಾಡುತ್ತಿರುವುದನ್ನು ಕಾಣಬಹುದು. ನಾಯಿ ಬಾಲಕನನ್ನು ಅಟ್ಟಿಸಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು, ನಾಯಿ ಆ ಬಾಲಕನನ್ನು ಕಚ್ಚಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಲ್ಟ್ ಜತೆಗೆ ನಾಯಿಯನ್ನು ಕರೆದುಕೊಂಡು ಬರುತ್ತಿದ್ದ ಮಾಲೀಕ ಇದ್ದಕ್ಕಿದ್ದಂತೆ ಕುತ್ತಿಗೆಯಿಂದ ಬೆಲ್ಟ್ ತೆಗೆದಿದ್ದಾನೆ. ಅದು ಏಕಾಏಕಿ ಬಾಲಕರನ್ನು ಅಟ್ಟಿಸಿಕೊಂಡು ಹೋಗಿದೆ.
ಪಿಂಪ್ರಿ-ಚಿಂಚ್ವಾಡ್, ಅಕ್ಟೋಬರ್ 20: ಜರ್ಮನ್ ಶೆಫರ್ಡ್ ನಾಯಿಯನ್ನು ಅದರ ಮಾಲೀಕ ಬಾಲಕರ ಮೇಲೆ ಛೂ ಬಿಟ್ಟಿರುವ ಘಟನೆ ಪಿಂಪ್ರಿ-ಚಿಂಚ್ವಾಡದ ಭೋಸಾರಿ ಪ್ರದೇಶದಲ್ಲಿ ನಡೆದಿದೆ. ಭೋಸಾರಿ MIDC ಬಳಿಯ ಸ್ವರಾಜ್ಯ ನಗರಿ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ. ವೀಡಿಯೊದಲ್ಲಿ, ಮಕ್ಕಳು ಸೊಸೈಟಿ ಆವರಣದಲ್ಲಿ ಆಟವಾಡುತ್ತಿರುವುದನ್ನು ಕಾಣಬಹುದು. ನಾಯಿ ಬಾಲಕನನ್ನು ಅಟ್ಟಿಸಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು, ನಾಯಿ ಆ ಬಾಲಕನನ್ನು ಕಚ್ಚಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಲ್ಟ್ ಜತೆಗೆ ನಾಯಿಯನ್ನು ಕರೆದುಕೊಂಡು ಬರುತ್ತಿದ್ದ ಮಾಲೀಕ ಇದ್ದಕ್ಕಿದ್ದಂತೆ ಕುತ್ತಿಗೆಯಿಂದ ಬೆಲ್ಟ್ ತೆಗೆದಿದ್ದಾನೆ. ಅದು ಏಕಾಏಕಿ ಬಾಲಕರನ್ನು ಅಟ್ಟಿಸಿಕೊಂಡು ಹೋಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

