ಸಲ್ಮಾನ್​ ಮನೆ ಎದುರು ಗುಂಡಿನ ದಾಳಿ ಪ್ರಕರಣ, ಎನ್​ಕೌಂಟರ್ ಸ್ಪೆಷಲಿಸ್ಟ್​ ದಯಾನಾಯಕ್ ಎಂಟ್ರಿ

|

Updated on: Apr 22, 2024 | 3:22 PM

ನಟ ಸಲ್ಮಾನ್ ಖಾನ್ ಮನೆ ಎದುರು ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿಚಾರಣೆಯಲ್ಲಿ ಹಲವು ಸಂಗತಿಗಳು ಬಹಿರಂಗವಾಗಿವೆ. ಈ ಇಬ್ಬರೂ ಆರೋಪಿಗಳು ಭುಜ್‌ನಲ್ಲಿ ಸಿಕ್ಕಿಬಿದ್ದಿದ್ದು, ಇದೀಗ ಈ ಪ್ರಕರಣದ ಆರೋಪಿಗಳ ವಿಚಾರಣೆಯ ಆಧಾರದ ಮೇಲೆ ಸೂರತ್‌ನಲ್ಲೂ ತನಿಖೆಯನ್ನು ಪ್ರಾರಂಭಿಸಲಾಗಿದೆ.ಇದರ ಆಧಾರದ ಮೇಲೆ ಮುಂಬೈ ಅಪರಾಧ ವಿಭಾಗದ ತಂಡ ಸೂರತ್ ನಗರದಲ್ಲಿ ತನಿಖೆ ಆರಂಭಿಸಿದೆ. ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಸೂರತ್ ನಗರಕ್ಕೆ ಆಗಮಿಸಿದ್ದಾರೆ.

ಸಲ್ಮಾನ್​ ಮನೆ ಎದುರು ಗುಂಡಿನ ದಾಳಿ ಪ್ರಕರಣ, ಎನ್​ಕೌಂಟರ್ ಸ್ಪೆಷಲಿಸ್ಟ್​ ದಯಾನಾಯಕ್ ಎಂಟ್ರಿ
ದಯಾ ನಾಯಕ್
Follow us on

ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್(Daya Nayak) ಎಂಟ್ರಿ ಕೊಟ್ಟಿದ್ದಾರೆ. ಈ ಘಟನೆಗೆ ಬಳಸಲಾದ ಬಂದೂಕನ್ನು ಹುಡುಕಲು ಮುಂಬೈ ಅಪರಾಧ ವಿಭಾಗದ ತಂಡವು ಸೂರತ್ ತಲುಪಿದೆ. ಗುಜರಾತ್‌ನ ಕಚ್‌ನಲ್ಲಿ ಸಿಕ್ಕಿಬಿದ್ದ ಇಬ್ಬರು ಶೂಟರ್‌ಗಳು ತಾಪಿ ನದಿಯಲ್ಲಿ ಬಂದೂಕು ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಮನೆಗೆ ಫೈರಿಂಗ್ ಪ್ರಕರಣದಲ್ಲಿ ಇಬ್ಬರು ಶೂಟರ್‌ಗಳ ಜೊತೆಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಪೊಲೀಸರು ಆರೋಪಿಯನ್ನಾಗಿ ಮಾಡಿದ್ದಾರೆ.
ಮುಂಬೈ ಕ್ರೈಂ ಬ್ರಾಂಚ್ ಸಂಪೂರ್ಣ ಸಿದ್ಧತೆಯೊಂದಿಗೆ ಆಗಮಿಸಿದೆ. ಪಿ ನದಿಯಲ್ಲಿ ಬಂದೂಕಿನ ಹುಡುಕಾಟಕ್ಕೆ ಸ್ವಲ್ಪ ಸಮಯ ಹಿಡಿಯಬಹುದು ಎನ್ನಲಾಗಿದೆ.

ಸಲ್ಮಾನ್ ಖಾನ್ ಅವರ ಗ್ಯಾಲಕ್ಸ್ ಅಪಾರ್ಟ್‌ಮೆಂಟ್‌ನ ಹೊರಗೆ ಗುಂಡು ಹಾರಿಸಿದ ಶೂಟರ್‌ಗಳು ಮುಂಬೈನಿಂದ ಕಚ್‌ಗೆ ಬರುತ್ತಿದ್ದಾಗ ಸೂರತ್‌ನ ತಾಪಿ ನದಿಯಲ್ಲಿ ಬಂದೂಕನ್ನು ಎಸೆದಿದ್ದೇವೆ ಎಂದು ಹೇಳಿದ್ದರು. ಮುಂಬೈ ಕ್ರೈಂ ಈ ಹೈ ಪ್ರೊಫೈಲ್ ಪ್ರಕರಣದ ತನಿಖೆ ನಡೆಸುತ್ತಿದೆ.

ಮತ್ತಷ್ಟು ಓದಿ: ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕ ದುಬೈಗೆ ತೆರಳಿದ ಸಲ್ಮಾನ್​ ಖಾನ್​

ಇದೀಗ ಈ ತಂಡ ಸೂರತ್ ತಲುಪಿದೆ.ಇದರಲ್ಲಿ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಕೂಡ ಸೇರಿದ್ದಾರೆ. ಏಪ್ರಿಲ್ 17 ರಂದು ಗುಜರಾತ್‌ನ ಕಚ್ ಪೊಲೀಸರು ಆಶಾಪುರ ಮಾತಾ ದೇವಸ್ಥಾನದಿಂದ ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಅವರನ್ನು ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದರು.

ಮುಂಬೈ ಪೊಲೀಸರು ಇಬ್ಬರು ಶೂಟರ್‌ಗಳನ್ನು 10 ದಿನಗಳ ಕಾಲ ವಶಕ್ಕೆ ತೆಗೆದುಕೊಂಡಿದ್ದಾರೆ. ಕ್ರೈಂ ಬ್ರಾಂಚ್ ತಂಡ ಸೂರತ್‌ನಲ್ಲಿ ಶೂಟರ್‌ಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸಲಿದೆ. ಶೋಧ ಕಾರ್ಯಕ್ಕಾಗಿ ತಜ್ಞರ ತಂಡವೂ ಅಪರಾಧ ವಿಭಾಗದ ಜತೆಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ