ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ‘ಹಿಂದೂ ಆಚರಣೆಗಳನ್ನು’ ಅಪಹಾಸ್ಯ ಮಾಡಿದ್ದಾರೆ ಎಂದು ಸಮಾಜವಾದಿ ಪಕ್ಷದ (Samajwadi Party)ನಾಯಕ ಐಪಿ ಸಿಂಗ್ (IP Singh) ವಾಗ್ದಾಳಿ ನಡೆಸಿದ್ದಾರೆ. ತಮ್ಮ ತಾಯಿ ಹೀರಾಬೆನ್ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಪ್ರಧಾನಿ ಮೋದಿ ಶುಕ್ರವಾರ ಕೆಲಸಕ್ಕೆ ಮರಳಿದ್ದರು. ಎಸ್‌ಪಿ ನಾಯಕ ಐಪಿ ಸಿಂಗ್ ಒಬ್ಬ ಹಿಂದೂ ಮಗ, ಎಲ್ಲಾ ಹಿಂದೂ ಸಂಸ್ಕಾರಗಳನ್ನು ಗೌರವಿಸುತ್ತಾ, ತೇಹ್ರಾವಿವರೆಗೆ ಎಲ್ಲವನ್ನೂ ತ್ಯಜಿಸಿ ತನ್ನ ತಂದೆಯ ಆತ್ಮಕ್ಕೆ ಶಾಂತಿ ಕೋರಿದ. ಇನ್ನೊಬ್ಬರು ಹಿಂದೂ ಸಂಸ್ಕಾರಗಳನ್ನು ತಿರಸ್ಕರಿಸಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತನ್ನ ತಾಯಿಯ ಅಂತ್ಯಕ್ರಿಯೆಯ ನಂತರ ಸೂತಕದಲ್ಲಿ ಶುಭ ಕಾರ್ಯವನ್ನು ನಿಷೇಧಿಸಲಾಗಿದೆ. ಈಗ ಹಿಂದೂ ಯಾರು? ಎಂದು ಸಿಂಗ್, ಅಖಿಲೇಶ್ ಯಾದವ್ ಮತ್ತು ನರೇಂದ್ರ ಮೋದಿಯವರ ಫೋಟೊ ಟ್ವೀಟ್ ಮಾಡಿದ್ದಾರೆ.
एक वो हिंदू बेटा जिसने सभी हिंदू संस्कारों का मान रखते हुए तेरहवीं तक सब कुछ त्याग पिता की आत्मा को शांति हेतु पाठ किया।
एक वो बेटा जो हिंदू संस्कारों को नकारते हुए सूतक में शुभ कार्य प्रतिबंधित होने के बावजूद माँ के निधन के उपरांत सरकारी कार्यक्रम में शामिल हुआ।
हिंदू कौन हुआ? pic.twitter.com/usSAFDoRXW
— I.P. Singh (@IPSinghSp) December 30, 2022
ಏತನ್ಮಧ್ಯೆ, ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ಅವರು ಎಸ್‌ಪಿ ನಾಯಕನನ್ನು ಕಟುವಾಗಿ ಟೀಕಿಸಿದ್ದಾರೆ.
Mindset of Samajwadi Party on a day we mourn the loss of a mother figure to the entire nation. Instead of lauding that PM Modi keeps Kartavya above Grief & Bharat Mata above personal loss – SP attacks him!
PM @narendramodi ji’s fault is that he keeps Nation above Parivar ! pic.twitter.com/Ku8xW1lgkG
— Shehzad Jai Hind (@Shehzad_Ind) December 30, 2022
ಇಡೀ ದೇಶದ ಅಮ್ಮನಂತಿರುವವರು ತೀರಿ ಹೋದ ದುಃಖದಲ್ಲಿರುವ ದಿನ ಸಮಾಜವಾದಿ ಪಕ್ಷದ ಮನಸ್ಥಿತಿಯನ್ನು ಇದು ತೋರಿಸುತ್ತದೆ.. ಪ್ರಧಾನಿ ಮೋದಿ ದುಃಖಕ್ಕಿಂತ ಮೇಲೆ ಕರ್ತವ್ಯವನ್ನಿರಿಸಿದ್ದಾರೆ. ವೈಯಕ್ತಿಕ ನಷ್ಟಕ್ಕಿಂತ ಭಾರತ ಮಾತೆಯನ್ನು ಮೇಲಿರಿಸಿದ್ದಾರೆ. ಹೀಗಿರುವಾಗ ಸಮಾಜವಾದಿ ಪಕ್ಷ ಅವರ ಮೇಲೆ ದಾಳಿ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜಿ ದೇಶವನ್ನು ಕುಟುಂಬಕ್ಕಿಂತ ಮೇಲಿಟ್ಟಿರುವುದೇ ಅವರ ತಪ್ಪು ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ