ಮುಂಬೈ ದಾದರ್ ರೈಲು ನಿಲ್ದಾಣದಲ್ಲಿ ಎರಡು ಬ್ಯಾಗ್ ಪತ್ತೆ, ಅನುಮಾನಾಸ್ಪದವಾದುದು ಏನೂ ಕಂಡು ಬಂದಿಲ್ಲ: ಬಾಂಬ್ ನಿಷ್ಕ್ರಿಯ ದಳ
ಮುಂಬೈನ ದಾದರ್ ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಪತ್ತೆಯಾದ ಬ್ಯಾಗ್ ನ್ನು ಪೊಲೀಸ್ ಬಾಂಬ್ ಪತ್ತೆ ಮತ್ತು ನಿಷ್ಕಿಯ ದಳವು ತನಿಖೆ ನಡೆಸಿದೆ. ಅದರೊಳಗೆ ಅನುಮಾನಾಸ್ಪದ ಏನೂ ಕಂಡುಬಂದಿಲ್ಲ.
ಇಂದು(ಶುಕ್ರವಾರ) ಸಂಜೆ ದಾದರ್ ರೈಲು ನಿಲ್ದಾಣದ(Dadar railway station) ಟಿಕೆಟ್ ಕೌಂಟರ್‌ನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಇದು ಖಾಲಿ ಬ್ಯಾಗ್ ಎಂದು ಬಾಂಬ್ ಸ್ಕ್ವಾಡ್ ಹೇಳಿದೆ. ಬ್ಯಾಗ್ ಪತ್ತೆಯಾದ ಬಳಿಕ ಅಲ್ಲಿ ಆತಂಕದ ವಾತಾವರಣ ಉಂಟಾಗಿತ್ತು, ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಾಂಬ್ ಪತ್ತೆ ಮತ್ತು ನಿಷ್ಕಿಯ ದಳ (Bomb Detection and Disposal Squad)ತಕ್ಷಣ ಸ್ಥಳಕ್ಕೆ ತಲುಪಿದೆ. ಆದರೆ, ಬ್ಯಾಗ್‌ನಲ್ಲಿ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ತಂಡ ಹೇಳಿದೆ. ಮುಂಬೈನ ದಾದರ್ ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಪತ್ತೆಯಾದ ಬ್ಯಾಗ್ ನ್ನು ಪೊಲೀಸ್ ಬಾಂಬ್ ಪತ್ತೆ ಮತ್ತು ನಿಷ್ಕಿಯ ದಳವು ತನಿಖೆ ನಡೆಸಿದೆ. ಅದರೊಳಗೆ ಅನುಮಾನಾಸ್ಪದ ಏನೂ ಕಂಡುಬಂದಿಲ್ಲ ಎಂದು ಸೆಂಟ್ರಲ್ ರೈಲ್ವೇಯ ಸಿಪಿಆರ್‌ಒ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
Maharashtra | A suspicious bag has been found at the ticket counter of Dadar railway station. Bomb Detection and Disposal Squad is reaching the spot to investigate: GRP Mumbai
— ANI (@ANI) December 30, 2022
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಟಿಕೆಟ್ ಕೌಂಟರ್ ಬಳಿ ಎರಡು ಅನುಮಾನಾಸ್ಪದ ಬ್ಯಾಗ್ ಗಳಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕೂಡಲೇ ನಗರ ಪೊಲೀಸರೊಂದಿಗೆ ರೈಲ್ವೇ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಯಿತು ಎಂದು ಮೂಲಗಳು ವರದಿ ಮಾಡಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:20 pm, Fri, 30 December 22