AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gujarat: ವಿಚಾರಣೆ ವೇಳೆ ನ್ಯಾಯಾಧೀಶರ ಮೇಲೆ ಕಲ್ಲು ಎಸೆದ ಕೊಲೆ ಯತ್ನ ಪ್ರಕರಣದ ಆರೋಪಿ; 3 ಪೊಲೀಸರು ಸಸ್ಪೆಂಡ್​

ಗುಜರಾತ್‌ನ ನವಸಾರಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಕೊಲೆ ಯತ್ನ ಪ್ರಕರಣದ ಆರೋಪಿ ನ್ಯಾಯಾಧೀಶರ ಮೇಲೆ ಕಲ್ಲು ಎಸೆದಿರುವ ಘಟನೆ ನಡೆದಿದೆ.

Gujarat: ವಿಚಾರಣೆ ವೇಳೆ ನ್ಯಾಯಾಧೀಶರ ಮೇಲೆ ಕಲ್ಲು ಎಸೆದ ಕೊಲೆ ಯತ್ನ ಪ್ರಕರಣದ ಆರೋಪಿ; 3 ಪೊಲೀಸರು ಸಸ್ಪೆಂಡ್​
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 30, 2022 | 11:03 PM

Share

ಗಾಂಧಿನಗರ: ಗುಜರಾತ್‌ (Gujarat)ನ ನವಸಾರಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ (Court of Additional Sessions) ಕೊಲೆ ಯತ್ನ ಪ್ರಕರಣದ ಆರೋಪಿ (Attempt To Murder Accused) ನ್ಯಾಯಾಧೀಶರ (Judge) ಮೇಲೆ ಕಲ್ಲು ಎಸೆದಿರುವ ಘಟನೆ ನಡೆದಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಎನ್​ಡಿಟಿವಿ ವರದಿ ಮಾಡಿದೆ. ಧರ್ಮೇಶ್ ರಾಥೋಡ್ ಕೃತ್ಯವೆಸಗಿದ ಆರೋಪಿ. ಆರೋಪಿ ರಾಥೋಡ್ ಕೊಲೆ ಯತ್ನ ಪ್ರಕರಣದ ಬಂಧಿತನಾಗಿದ್ದಾನೆ. ಈತನ ಮೇಲೆ ಸೆಕ್ಷನ್ 307 ಮತ್ತು ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಬಳಸಿ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಸೆಕ್ಷನ್ 326ರ ಅಡಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:  ಮುಂಬೈ ದಾದರ್​​ ರೈಲು ನಿಲ್ದಾಣದಲ್ಲಿ ಎರಡು ಬ್ಯಾಗ್‌ ಪತ್ತೆ, ಅನುಮಾನಾಸ್ಪದವಾದುದು ಏನೂ ಕಂಡು ಬಂದಿಲ್ಲ: ಬಾಂಬ್ ನಿಷ್ಕ್ರಿಯ ದಳ

ಕೊಲೆ ಯತ್ನ ಪ್ರಕರಣ ಸಂಬಂಧ ಆರೋಪಿ ಸೂರತ್‌ನ ಲಾಜ್‌ಪೋರ್ ಜೈಲಿನಲ್ಲಿದನು. ಇಂದು (ಡಿ.30) ಆರೋಪಿಯನ್ನು ವಿಚಾರಣೆಗೆಂದು ನವಸಾರಿಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಪೊಲೀಸರು ಕರೆ ತಂದಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಯುವಾಗ ಆರೋಪಿ ರಾಥೋಡ್,​ ನ್ಯಾ. ಎ ಆರ್ ದೇಸಾಯಿ ಅವರ ಮೇಲೆ ಕಲ್ಲು ಎಸೆದಿದ್ದಾನೆ.

ಇದನ್ನೂ ಓದಿ: ಚಂದ್ರಬಾಬು ನಾಯ್ಡು ರ್‍ಯಾಲಿಯಲ್ಲಿ ಕಾಲ್ತುಳಿತ ಪ್ರಕರಣ: ಇದು ಹೇಯ ಕೃತ್ಯ ಎಂದು ಜಗನ್​​ ಮೋಹನ್​​​ ರೆಡ್ಡಿ ವಾಗ್ದಾಳಿ

ಅದೃಷ್ಟವಶಾತ್, ಕಲ್ಲು ಗುರಿ ತಪ್ಪಿ ಹೆಚ್ಚುವರಿ ಸೆಷನ್ಸ್ ನ್ಯಾ. ಎ ಆರ್ ದೇಸಾಯಿ ಅವರ ಹಿಂಭಾಗದ ಗೋಡೆಗೆ ಬಡಿದಿದೆ. ಇದರಿಂದ ಯಾವುದೇ ನ್ಯಾ. ಎ ಆರ್ ದೇಸಾಯಿ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ನವಸಾರಿ ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಸೂರತ್‌ನ ಲಾಜ್‌ಪೋರ್ ಜೈಲಿನಿಂದ ನವಸಾರಿ ಸೆಷನ್ಸ್ ಕೋರ್ಟ್‌ಗೆ ರಾಥೋಡ್‌ರನ್ನು ಕರೆದೊಯ್ದ ಮೂವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಲೋಪಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ರಾಥೋಡ್ ವಿರುದ್ಧ ಹೊಸ ಎಫ್‌ಐಆರ್ ದಾಖಲಾಗಿದೆ. ಘಟನೆಗೆ ಸಾಕ್ಷಿಯಾದ ವಕೀಲ ಪ್ರತಾಪ್ ಮಹಿದಾ ಅವರು ರಾಥೋಡ್ ಈ ಹಿಂದೆ ಮ್ಯಾಜಿಸ್ಟ್ರೇಟ್ ಮೇಲೆ ಶೂ ಎಸೆದಿದ್ದನು ಎಂದು ಹೇಳಿದ್ದಾರೆ.

ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ