ಚಂದ್ರಬಾಬು ನಾಯ್ಡು ರ್‍ಯಾಲಿಯಲ್ಲಿ ಕಾಲ್ತುಳಿತ ಪ್ರಕರಣ: ಇದು ಹೇಯ ಕೃತ್ಯ ಎಂದು ಜಗನ್​​ ಮೋಹನ್​​​ ರೆಡ್ಡಿ ವಾಗ್ದಾಳಿ

ಚಂದ್ರಬಾಬು ನಾಯ್ಡು ಅವರ "ಪ್ರಚಾರದ ಹುಚ್ಚು" ಈ ದುರಂತಕ್ಕೆ ಕಾರಣ. ಅವರು ಸಾರ್ವಜನಿಕರ ಕ್ಷಮೆಯಾಚಿಸಬೇಕು ಎಂದು ಜಗನ್ ಒತ್ತಾಯಿಸಿದರು.

ಚಂದ್ರಬಾಬು ನಾಯ್ಡು ರ್‍ಯಾಲಿಯಲ್ಲಿ ಕಾಲ್ತುಳಿತ ಪ್ರಕರಣ: ಇದು ಹೇಯ ಕೃತ್ಯ ಎಂದು ಜಗನ್​​ ಮೋಹನ್​​​ ರೆಡ್ಡಿ ವಾಗ್ದಾಳಿ
ಜಗನ್ ಮೋಹನ್ ರೆಡ್ಡಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 30, 2022 | 9:26 PM

ನರಸೀಪಟ್ಟಣಂ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರು ಇಂದು ರಾಜ್ಯದ ನೆಲ್ಲೂರು ಜಿಲ್ಲೆಯ ಕಂದುಕೂರಿನಲ್ಲಿ ತಮ್ಮ ಪಕ್ಷವು ಬುಧವಾರ ಆಯೋಜಿಸಿದ್ದ ರೋಡ್‌ಶೋನಲ್ಲಿ (Road Show) ಎಂಟು ಜನರ ಸಾವಿಗೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು(Chandrababu Naidu) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಂದ್ರಬಾಬು ನಾಯ್ಡು ಅವರ “ಪ್ರಚಾರದ ಹುಚ್ಚು” ಈ ದುರಂತಕ್ಕೆ ಕಾರಣ. ಅವರು ಸಾರ್ವಜನಿಕರಕ್ಷಮೆಯಾಚಿಸಬೇಕು ಎಂದು ಜಗನ್ ಒತ್ತಾಯಿಸಿದರು. ಚಂದ್ರಬಾಬು ನಾಯ್ಡು ಅವರು ಇಂದು ತಮ್ಮ ಪಕ್ಷದ ಕಾರ್ಯಕರ್ತರ ನಿಧನಕ್ಕೆ ಸಂತಾಪ ಸೂಚಿಸಿದ್ದರು. “ಇದೊಂದು ದುಃಖದ ಘಟನೆ. ಇದರ ಬಗ್ಗೆ ನನಗೆ ತುಂಬಾ ವಿಷಾದವಿದೆ” ಎಂದು ಅವರು ಹೇಳಿದರು. ಕಾಲ್ತುಳಿತದಲ್ಲಿ ಮೃತಪಟ್ಟ ಎಂಟು ಮಂದಿಯ ಕುಟುಂಬಗಳಿಗೆ ತಲಾ ₹ 24 ಲಕ್ಷ ಪರಿಹಾರ ನೀಡುವುದಾಗಿ ಟಿಡಿಪಿ ಘೋಷಿಸಿದೆ.ಆದಾಗ್ಯೂ, ಜಗನ್ ರೆಡ್ಡಿ ಇದಕ್ಕೆ ತೃಪ್ತರಾಗಿಲ್ಲ. ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ ಜಗನ್,ಬಾಬು ತನ್ನ ರಾಜಕೀಯ ಲಾಭಕ್ಕಾಗಿ ಎಂಟು ಜನರನ್ನು ಕೊಂದದ್ದು ತುಂಬಾ ಹೇಯ ಮತ್ತು ನಾಚಿಕೆಗೇಡಿನ ಸಂಗತಿ. ಫೋಟೋ ಶೂಟ್‌ಗಾಗಿ, ಡ್ರೋನ್‌ ಶಾಟ್‌ಗಾಗಿ, ಕಡಿಮೆ ಜನರಿದ್ದರೂ, ದೊಡ್ಡ ಸಂಖ್ಯೆಗಳನ್ನು ತೋರಿಸುವ ಸಲುವಾಗಿ ಜನರನ್ನು ಕಿರಿದಾದ ಓಣಿಗೆ ತಳ್ಳಿದರು. ತಮ್ಮ ವಾಹನವನ್ನು ಬ್ಯಾರಿಕೇಡ್‌ನಂತೆ ಬಳಸಿ ಎಂಟು ಮಂದಿಯನ್ನು ಕೊಂದಿದ್ದಾರೆ. ಇದಕ್ಕಿಂತ ಕೆಟ್ಟದ್ದು ಇನ್ನೇನಿದೆ?” ಎಂದು ಹೇಳಿದ್ದಾರೆ.

ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಟಿಡಿಪಿ ಮುಖ್ಯಸ್ಥರು ಈ ಹಿಂದೆಯೂ ಇದನ್ನು ಮಾಡಿದ್ದಾರೆ ಎಂದು ರೆಡ್ಡಿ ಹೇಳಿದ್ದಾರೆ. 2015ರಲ್ಲಿ ನಡೆದ ಗೋದಾವರಿ ಪುಷ್ಕರಲು ವೇಳೆ 29 ಜನರ ಸಾವಿಗೆ ಅವರು ಕಾರಣರಾದರು. ಇದು ಅವರಿಗೆ ಹೊಸದಲ್ಲ, ಕೇವಲ ಪ್ರಚಾರದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಅವರು ವಂಚನೆ ಮಾಡಿದರು ಮತ್ತು “ಜನರ ಬೆನ್ನಿಗೆ ಚೂರಿ ಹಾಕಿದರು” ಎಂದು ಜಗನ್ ಟೀಕಿಸಿದ್ದಾರೆ.

ಮರಣದ ಕೇವಲ ಒಂದು ದಿನದ ನಂತರ “ಯಾವುದೇ ಪಶ್ಚಾತ್ತಾಪವಿಲ್ಲದೆ” ಕಾವಲಿ ಪಟ್ಟಣದಲ್ಲಿ ಮತ್ತೊಂದು ರೋಡ್‌ಶೋ ಕೈಗೊಂಡಿದ್ದಕ್ಕಾಗಿ ಜಗನ್, ನಾಯ್ಡು ಅವರನ್ನು ಟೀಕಿಸಿದರು.

ಇದನ್ನೂ ಓದಿ: ಮುಂಬೈ ದಾದರ್​​ ರೈಲು ನಿಲ್ದಾಣದಲ್ಲಿ ಎರಡು ಬ್ಯಾಗ್‌ ಪತ್ತೆ, ಅನುಮಾನಾಸ್ಪದವಾದುದು ಏನೂ ಕಂಡು ಬಂದಿಲ್ಲ: ಬಾಂಬ್ ನಿಷ್ಕ್ರಿಯ ದಳ

8 ಅಮಾಯಕರ ಸಾವಿಗೆ ನೈತಿಕ ಹೊಣೆ ಹೊರುವ ಬದಲು, ಟಿಡಿಪಿ ಮುಖ್ಯಸ್ಥರು ಸಾರ್ವಜನಿಕರ ಮೇಲೆ ಆರೋಪ ಹೊರಿಸಿದ್ದಾರೆ. ಚಂದ್ರಬಾಬು ನಾಯ್ಡು “ಸಾರ್ವಜನಿಕ ರ್ಯಾಲಿಗಳಿಗೆ ಭೇಟಿ ನೀಡುವಾಗ ಜನರು ಸ್ವಯಂ ಶಿಸ್ತಿನಲ್ಲಿರಬೇಕು. ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಸತ್ತವರ ಜಾತಿಗಳನ್ನು ಉಲ್ಲೇಖಿಸಿದ ಶ ನಾಯ್ಡು ಅವರ ವಿರುದ್ಧವೂ ಜಗನ್ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯವೆಂದರೆ ಶೂಟಿಂಗ್, ಅಥವಾ ಡೈಲಾಗ್‌ಗಳು ಅಥವಾ ಡ್ರೋನ್ ಶಾಟ್‌ಗಳು ಅಥವಾ ನಾಟಕವಲ್ಲ. ರಾಜಕೀಯ ಎಂದರೆ ನಾವು ರೈತರ ಕುಟುಂಬಗಳು ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಲ್ಲಿ ತಂದಿರುವ ಬದಲಾವಣೆ ಎಂದು ಅವರು ಹೇಳಿದರು. “ಆಡಳಿತವನ್ನು ಪರಿವರ್ತಿಸುವುದು, ನಮ್ಮ ಆರೋಗ್ಯ ವ್ಯವಸ್ಥೆಯನ್ನು ಪರಿವರ್ತಿಸುವುದು ಮತ್ತು ಜನರನ್ನು ತಲುಪುವುದೇ ರಾಜಕೀಯ” ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:21 pm, Fri, 30 December 22

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು