Chandrababu Naidu: ಮಾಜಿ ಸಿಎಂ ಚಂದ್ರಬಾಬು ನಾಯ್ಡು ರ್‍ಯಾಲಿ ವೇಳೆ ಕಾಲ್ತುಳಿತ: 8 ಜನರು ಸಾವು
ಆಂಧ್ರದಲ್ಲಿ ಟಿಡಿಪಿ ರ್‍ಯಾಲಿ ವೇಳೆ ಕಾಲ್ತುಳಿತ ಉಂಟಾಗಿ 8 ಜನರು ಸಾವನ್ನಪ್ಪಿರುವಂತಹ ಘಟನೆ ನೆಲ್ಲೂರು ಕ್ಷೇತ್ರದ ವ್ಯಾಪ್ತಿಯ ಕಂದುಕೂರಿನಲ್ಲಿ ನಡೆದಿದೆ.
ಆಂಧ್ರ ಪ್ರದೇಶ: ಆಂಧ್ರದಲ್ಲಿ ಟಿಡಿಪಿ ರ್‍ಯಾಲಿ ವೇಳೆ ಕಾಲ್ತುಳಿತ ಉಂಟಾಗಿ 8 ಜನರು ಸಾವನ್ನಪ್ಪಿರುವಂತಹ ಘಟನೆ ನೆಲ್ಲೂರು ಕ್ಷೇತ್ರದ ವ್ಯಾಪ್ತಿಯ ಕಂದುಕೂರಿನಲ್ಲಿ ನಡೆದಿದೆ. ಮಾಜಿ ಸಿಎಂ ಚಂದ್ರಬಾಬು ನಾಯ್ಡು (chandrababu naidu) ಟಿಡಿಪಿ ಬಹಿರಂಗ ಸಭೆ ಆಯೋಜಿಸಿದ್ದರು. ಈ ವೇಳೆ ವೇದಿಕೆ ಬಳಿ ನೂಕುನುಗ್ಗಲು ಉಂಟಾಗಿದ್ದು, 8 ಜನ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದುರಂತದಲ್ಲಿ ಮೃತಪಟ್ಟ ಟಿಡಿಪಿ ಕಾರ್ಯಕರ್ತರ ವಿವರ
ಕೊಂಡಮುಡುಸಿ ಗ್ರಾಮದ ನಿವಾಸಿ ವಾಸು, ಗುಲ್ಲಪಾಳ್ಯಂ ಗ್ರಾಮದ ನಿವಾಸಿ ಪುರುಷೋತ್ತಮ್, ಗುಲ್ಲಪಾಳ್ಯಂ ಗ್ರಾಮದ ನಿವಾಸಿ ಮರುಲಪಾಟಿ ಚಿನಕೊಂಡಯ್ಯ, ಆತ್ಮಕೂರು ಗ್ರಾಮದ ನಿವಾಸಿ ದೇವಿನೇನಿ ರವೀಂದ್ರ. ಒರುಗುಸೇನಿ ಪಾಳ್ಯಂ ಗ್ರಾಮದ ನಿವಾಸಿ ಯಾಟಗಿರಿ ವಿಜಯಾ, ಕಂದುಕೂರು ಗ್ರಾಮದ ನಿವಾಸಿ ರಾಜೇಶ್ವರಿ, ಕಲುವಕೂರಿ ಯಾನಾದಿ. ಒರುಗುಸೇನಿ ಪಾಳ್ಯಂ ಗ್ರಾಮದ ನಿವಾಸಿ ಯಾಟಗಿರಿ ವಿಜಯಾ, ಕಂದುಕೂರು ಗ್ರಾಮದ ನಿವಾಸಿ ರಾಜೇಶ್ವರಿ.
ಇದನ್ನೂ ಓದಿ: ತಮಿಳುನಾಡು: ಪರಿಶಿಷ್ಟ ಜಾತಿಯವರು ವಾಸಿಸುತ್ತಿದ್ದ ಗ್ರಾಮದಲ್ಲಿನ ನೀರಿನ ಟ್ಯಾಂಕ್ಗೆ ಮಲ ಸುರಿದ ಜನರು; ಮಕ್ಕಳು ಅಸ್ವಸ್ಥ, ಕೇಸು ದಾಖಲು
Andhra Pradesh | Seven TDP workers lost their lives after a scuffle broke out between party workers during a public meeting being held by TDP leader N Chandrababu Naidu in Kandukuru of Nellore district today.
7 people have lost their lives, injured admitted to hospital: Police pic.twitter.com/uqU1j8K66X
— ANI (@ANI) December 28, 2022
ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ
ಘಟನೆ ಕುರಿತಾಗಿ ಮಾಜಿ ಸಿಎಂ ಚಂದ್ರಬಾಬು ಅವರು ದುಃಖ ವ್ಯಕ್ತಪಡಿಸಿದ್ದಾರೆ. ಮುಗ್ಧ ಜನರು ಸಾಯುತ್ತಿರುವುದು ದುಃಖದ ಸಂಗತಿ. ನಾವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಂತ್ರಸ್ತರ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರವನ್ನು ಚಂದ್ರಬಾಬು ನಾಯ್ಡು ಘೋಷಣೆ ಮಾಡಿದ್ದಾರೆ. ಚಂದ್ರಬಾಬು ನಾಯ್ಡು ಆಸ್ಪತ್ರೆಗೆ ಹೋಗಿ ಗಾಯಾಳುಗಳನ್ನು ಭೇಟಿಯಾಗಿದ್ದಾರೆ. ಸಂತ್ರಸ್ತರ ಯೋಗಕ್ಷೇಮವನ್ನು ತಿಳಿದ ನಂತರವೇ ಮಾತನಾಡುವುದಾಗಿ ಹೇಳಿದ್ದರು. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅವರು ವಿನಂತಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಘಟಕದ ಮೇಲೆ ದಾಳಿ, ಬಲೆಗೆ ಬಿದ್ದ ಬೆಂಗಳೂರು ಮೂಲದ ರೌಡಿಶೀಟರ್‌ಗಳು
ಮಾಜಿ ಸಚಿವ ನಾರಾ ಲೋಕೇಶ್ ಟ್ವೀಟ್
ಇನ್ನು ಘಟನೆ ಕುರಿತಾಗಿ ಮಾಜಿ ಸಚಿವ ನಾರಾ ಲೋಕೇಶ್ ಟ್ವೀಟ್ ಮಾಡಿದ್ದು, ಚಂದ್ರಬಾಬು ಅವರು ಕಂದಕೂರಿಗೆ ಭೇಟಿ ನೀಡಿದಾಗ ನಡೆದ ಅಹಿತಕರ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಕುಟುಂಬ ಸದಸ್ಯರಾಗಿರುವ ಟಿಡಿಪಿ ಕಾರ್ಯಕರ್ತರ ಸಾವು ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ತೆಲುಗು ದೇಶಂ ಪಕ್ಷವು ಮೃತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ನೀಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:19 pm, Wed, 28 December 22