AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ

ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕಾ ಗಾಂಧಿ ವಾಡ್ರಾ ಸಹ ಪ್ರಧಾನ ಮಂತ್ರಿಗಳ ತಾಯಿಯವರ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ
ತಾಯಿಯ ಚಟ್ಟಕ್ಕೆ ಹೆಗಲು ನೀಡಿರುವ ಪ್ರಧಾನಿ ನರೇಂದ್ರ ಮೋದಿ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Dec 30, 2022 | 1:46 PM

Share

ಜನ್ಮದಾತೆಯನ್ನು ಕಳೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕಾಂಗ್ರೆಸ್ ನಾಯಕ ಮತ್ತು ಸಂಸದ (MP) ರಾಹುಲ್ ಗಾಂಧಿ (Rahul Gandhi) ಅವರು ಸಂತಾಪ ಸೂಚಿಸಿ ಕಳಕಳಿ ವ್ಯಕ್ತಪಡಿಸಿದ್ದಾರೆ. ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬಾ ಅವರ ಸಾವಿನ ಸುದ್ದಿ ಅತೀವ ದುಃಖಕರವಾಗಿದೆ. ಪ್ರಧಾನಿಯವರಿಗೆ ಮತ್ತು ಅವರ ಕುಟುಂಬಕ್ಕೆ ಸಂತಾಪ ಸೂಚಿಸಿ ಕಳಕಳಿ ವ್ಯಕ್ತಪಡಿಸುತ್ತೇನೆ,’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಹೀರಾಬೆನ್ ಅವರನ್ನು ಅಹ್ಮದಾಬಾದ್ ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು ಮತ್ತು ಅವರು ಶತಕದ (99) ಹೊಸ್ತಿಲಲ್ಲಿದ್ದರು. ಗಾಂಧಿನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಅಂತಿಮ ವಿಧಿವಿಧಾನಗಳನ್ನು ಪೂರೈಸಿದರು. ‘ಒಂದು ಅದ್ಭುತವಾದ ಶತಕೀಯ ಬದುಕು ದೇವರ ಪಾದವನ್ನು ಸೇರಿದೆ…ಅಮ್ಮನಲ್ಲಿ ನಾನು ಸದಾ ತ್ರಯಕತನವನ್ನು ಕಂಡೆ, ಒಬ್ಬ ತಪಸ್ವಿಯ ಯಾತ್ರೆ, ನಿಸ್ವಾರ್ಥ ಮನೋಭಾವದ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕು ಮೊದಲಾದವುಗಳನ್ನು ಒಳಗೊಂಡ ಜೀವನ ಅವರು ನಡೆಸಿದರು,’ ಎಂಬ ಹೃದಯಸ್ಪರ್ಶಿ ಶ್ರದ್ಧಾಂಜಲಿಯನ್ನು ಪ್ರಧಾನಿಗಳು ಪೋಸ್ಟ್ ಮಾಡಿದ್ದಾರೆ.

ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕಾ ಗಾಂಧಿ ವಾಡ್ರಾ ಸಹ ಪ್ರಧಾನ ಮಂತ್ರಿಗಳ ತಾಯಿಯವರ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ.

‘ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ತಾಯಿಯ ಸಾವಿನ ದುಃಖಕರ ಸುದ್ದಿ ಗೊತ್ತಾಯಿತು. ದೇವರ ಅಗಲಿದ ಆತ್ಮಕ್ಕೆ ತನ್ನ ಪವಿತ್ರ ಪಾದಗಳ ಬಳಿ ಆಶ್ರಯ ನೀಡಲಿ ಮತ್ತು ಶ್ರೀ @narendramodi ಜೀ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ಶೋಕವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ,’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Nandi Hills: ನಂದಿ ಗಿರಿಧಾಮ ಹೊಸ ವರ್ಷಾಚರಣೆಗೆ ಕ್ಲೋಸ್! ಸಾರ್ವಜನಿಕರಿಗೆ ಪ್ರವೇಶ ಬಂದ್ -ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆದೇಶ

ತಾಯಿಯ ಅಂತಿಮ ವಿಧಿವಿಧಾನಗಳನ್ನು ಪೂರೈಸುವ ಮೊದಲು ಪ್ರಧಾನಿ ಮೊದಲು ಹೀರಾಬೆನ್ ಅವರ ಚಟ್ಟಕ್ಕೆ ಹೆಗಲು ನೀಡಿದರು.

ತಮ್ಮ ಮಾ ಅವರ 99 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಾಯಿಯನ್ನು ಕುರಿತು ಒಂದು ಬ್ಲಾಗ್ ಬರೆದಿದ್ದರು. ಅದರಲ್ಲಿ ಅವರು ತಮ್ಮ ತಾಯಿಯ ಬದುಕಿನ ಹಲವಾರು ಅಂಶಗಳನ್ನು ಉಲ್ಲೇಖಿಸಿ ಅವು ಹೇಗೆ ‘ತಮ್ಮ ಮನಸ್ಸು, ವ್ಯಕ್ತಿತ್ವ ಮತ್ತು ಅತ್ಮವಿಶ್ವಾಸ ರೂಪಸಿಕೊಳ್ಳಲು ನೆರವಾದವು’ ಅಂತ ಹೇಳಿದ್ದರು.

ಇದನ್ನೂ ಓದಿ: Heeraben Modi Funeral: ಮೋದಿ ತಾಯಿ ಹೀರಾಬೆನ್ ಪಂಚಭೂತಗಳಲ್ಲಿ ಲೀನ; ಚಿತೆಗೆ ಅಗ್ನಿಸ್ಪರ್ಶ ಮಾಡಿದ ಪ್ರಧಾನಿ 

ತಮ್ಮ ಬಾಲ್ಯಕ್ಕೆ ಹೋಲಿಸಿದರೆ ತಾಯಿಯ ಬಾಲ್ಯ ಅತಿಹೆಚ್ಚು ಕಷ್ಟಕರವಾಗಿತ್ತು, ಚಿಕ್ಕಂದಿನಲ್ಲೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದ ನೋವು ಅವರಿಗೆ ಜೀವನದುದ್ದಕ್ಕೂ ಕಾಡಿತು ಎಂದು ಪ್ರಧಾನಿಗಳು ತಮ್ಮ ಬ್ಲಾಗ್ ನಲ್ಲಿ ಬರೆದಿದ್ದರು. ‘ನಮ್ಮ ಮನೆಯ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಮಾ ಕೆಲ ಮನೆಗಳಿಗೆ ಹೋಗಿ ಪಾತ್ರೆ ತೊಳೆಯುತ್ತಿದ್ದರು. ನಮ್ಮ ಮನೆಯ ಕನಿಷ್ಟ ಅದಾಯವನ್ನು ಹೆಚ್ಚಿಸಲು ಮಾ ಬಿಡುವಿನ ಸಮಯದಲ್ಲಿ ಚರಖಾದಲ್ಲಿ ನೂಲು ಸುತ್ತುತ್ತಿದ್ದರು,’ ಎಂದು ತಮ್ಮ ತಾಯಿ ಅನುಭವಿಸಿದ ಬಾಧೆಗಳನ್ನು ನೆನಪಿಸಿಕೊಳ್ಳುತ್ತಾ ಬ್ಲಾಗ್ ನಲ್ಲಿ ಪ್ರಧಾನಿಗಳು ಬರೆದಿದ್ದರು.

ಮತ್ತಷ್ಟು ರಾಷ್ಟ್ರೀ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

VIDEO: ರಣರೋಚಕ ಪಂದ್ಯ ರನೌಟ್​ನೊಂದಿಗೆ ಅಂತ್ಯ
VIDEO: ರಣರೋಚಕ ಪಂದ್ಯ ರನೌಟ್​ನೊಂದಿಗೆ ಅಂತ್ಯ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು