ಸಮಾಜವಾದಿ ಪಾರ್ಟಿ ಗೆದ್ದಿದ್ದು 304 ಕ್ಷೇತ್ರಗಳನ್ನು ಎಂದು ಪ್ರತಿಪಾದಿಸಿದ ಅಖಿಲೇಶ್​ ಯಾದವ್​; ಹೇಗೆಂದೂ ವಿವರಿಸಿದ್ದಾರೆ ನೋಡಿ !

| Updated By: Lakshmi Hegde

Updated on: Mar 15, 2022 | 6:35 PM

ನಿನ್ನೆ ಸಮಾಜವಾದಿ ಪಾರ್ಟಿ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಕೂಡ ಟ್ವೀಟ್ ಮಾಡಿ ಇದನ್ನೇ ಹೇಳಿದ್ದರು. ಮತಪತ್ರ ಎಣಿಕೆ ನಡೆಸಿದಾಗ ಸಮಾಜವಾದಿ ಪಕ್ಷ 304 ಕ್ಷೇತ್ರಗಳನ್ನು ಗೆದ್ದಿತ್ತು ಎಂದಿದ್ದರು. ಆದರೆ ಅಖಿಲೇಶ್​ ಯಾದವ್ ಬೇರೆ ರೀತಿ ವಿವರಿಸಿದ್ದಾರೆ.

ಸಮಾಜವಾದಿ ಪಾರ್ಟಿ ಗೆದ್ದಿದ್ದು 304 ಕ್ಷೇತ್ರಗಳನ್ನು ಎಂದು ಪ್ರತಿಪಾದಿಸಿದ ಅಖಿಲೇಶ್​ ಯಾದವ್​; ಹೇಗೆಂದೂ ವಿವರಿಸಿದ್ದಾರೆ ನೋಡಿ !
ಅಖಿಲೇಶ್ ಯಾದವ್
Follow us on

ಲಖನೌ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ  ಪಕ್ಷ ಮತ್ತು ಅದರ ಮೈತ್ರಿ ಪಕ್ಷಗಳು ಸೇರಿ ಒಟ್ಟು 304 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್ ಪ್ರತಿಪಾದಿಸಿದ್ದಾರೆ. ಫೆ.10ರಿಂದ ಮಾರ್ಚ್​ 7ರವರೆಗೆ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಅದರ ಮೈತ್ರಿ ಪಕ್ಷಗಳು ಸೇರಿ ಒಟ್ಟು 125 ಕ್ಷೇತ್ರಗಳನ್ನು ಗೆದ್ದುಕೊಂಡಿವೆ.  ಸದ್ಯ ಅಲ್ಲೀಗ ಎರಡನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರುತ್ತಿದೆ.

ಆದರೆ ಈ ಮಧ್ಯೆ ಅಖಿಲೇಶ್ ಯಾದವ್ ತಾವು ಉತ್ತರ ಪ್ರದೇಶದಲ್ಲಿ 304 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದ್ದಾಗಿ ಟ್ವೀಟ್ ಮಾಡಿಕೊಂಡಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ಅಂಚೆ ಮತಪತ್ರದ ಮೂಲಕ ನಮ್ಮ ಸಮಾಜವಾದಿ ಪಾರ್ಟಿ ಮತ್ತು ಮೈತ್ರಿ ಪಕ್ಷಕ್ಕೆ ಶೇ.51 .5ರಷ್ಟು ಮತದಾನವಾಗಿದೆ. ಈ ಆಧಾರದಲ್ಲಿ ಹೇಳುವುದಾದರೆ ನಾವು 304 ಕ್ಷೇತ್ರಗಳನ್ನು ಗೆದ್ದುಕೊಂಡಂತೆ ಆಗುತ್ತದೆ.  ಹೀಗೆ ಮತ ಪತ್ರದ ಮೂಲಕ ನಮ್ಮ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಮತ ಹಾಕಿದ ಶಿಕ್ಷಕರು, ಸರ್ಕಾರಿ ನೌಕರರು ಮತ್ತು ಇತರ ಮತದಾರರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ನಿನ್ನೆ ಸಮಾಜವಾದಿ ಪಾರ್ಟಿ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಕೂಡ ಟ್ವೀಟ್ ಮಾಡಿ ಇದನ್ನೇ ಹೇಳಿದ್ದರು. ಮತಪತ್ರ ಎಣಿಕೆ ನಡೆಸಿದಾಗ ಸಮಾಜವಾದಿ ಪಕ್ಷ 304 ಕ್ಷೇತ್ರಗಳನ್ನು ಗೆದ್ದಿತ್ತು. ಬಿಜೆಪಿ ಕೇವಲ 99 ಕ್ಷೇತ್ರ ಗೆದ್ದುಕೊಂಡಿದೆ. ಆದರೆ ಇವಿಎಂ ಮತ ಎಣಿಕೆಯಲ್ಲಿ ಬಿಜೆಪಿಗೇ  ಗೆಲುವಾಗಿದೆ. ಅಂದರೆ ಇದರಲ್ಲಿ ಮೋಸ ನಡೆದಿದೆ ಎಂದೇ ಅರ್ಥ ಎಂದು ಹೇಳಿದ್ದರು. ಈ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿಯಲ್ಲಿ ಇದ್ದು, ಹಿಂದಿನ ಅವಧಿಯಲ್ಲಿ ಯುಪಿ ಕ್ಯಾಬಿನೆಟ್​ ಸಚಿವರೂ ಆಗಿದ್ದರು. ಆದರೆ ಸರ್ಕಾರ ಹಿಂದುಳಿದ ವರ್ಗದವರ ನಿರ್ಲಕ್ಷ್ಯ ಮಾಡುತ್ತದೆ ಎಂದು ಆರೋಪಿಸಿ ಪಕ್ಷಾಂತರ ಮಾಡಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಮಗಿಯಲಿದೆ ಪ್ರಭಾಸ್ ಆಟ; ‘ರಾಧೆ ಶ್ಯಾಮ್​’ ಬಹುತೇಕ ಶೋಗಳು ಅಂತ್ಯ?

Published On - 6:35 pm, Tue, 15 March 22