ಅತಿಸಾರದಿಂದ ಬಳಲುತ್ತಿರುವ ಜನರು; ಇದು ಒಡಿಶಾ ಸರ್ಕಾರದ ವೈಫಲ್ಯ ಎಂದ ಧರ್ಮೇಂದ್ರ ಪ್ರಧಾನ್

|

Updated on: Mar 26, 2024 | 9:55 PM

ಕೇಂದ್ರ ಸಚಿವ ಮತ್ತು ಸಂಬಲ್‌ಪುರ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿ ಧರ್ಮೇಂದ್ರ ಪ್ರಧಾನ್ ಒಡಿಶಾದ ಸಂಬಲ್‌ಪುರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹೋಳಿ ಆಚರಿಸಿದರು. ಬಳಿಕ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ ಅತಿಸಾರದಿಂದ ಬಳಲುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು.

ಅತಿಸಾರದಿಂದ ಬಳಲುತ್ತಿರುವ ಜನರು; ಇದು ಒಡಿಶಾ ಸರ್ಕಾರದ ವೈಫಲ್ಯ ಎಂದ ಧರ್ಮೇಂದ್ರ ಪ್ರಧಾನ್
ಸಂಬಲ್‌ಪುರ ಬಿಜೆಪಿ ಅಭ್ಯರ್ಥಿ ಧರ್ಮೇಂದ್ರ ಪ್ರಧಾನ್ ಹೋಳಿ ಆಚರಣೆ; VIMSARಗೆ ಭೇಟಿ ನೀಡಿ ಅತಿಸಾರ ರೋಗಿಗಳ ಆರೋಗ್ಯ ವಿಚಾರಣೆ
Follow us on

ಸಂಬಲ್‌ಪುರ, ಮಾ.26: ಕೇಂದ್ರ ಸಚಿವ ಮತ್ತು ಸಂಬಲ್‌ಪುರ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿ ಧರ್ಮೇಂದ್ರ ಪ್ರಧಾನ್ (Dharmendra Pradhan) ಒಡಿಶಾದ ಸಂಬಲ್‌ಪುರದಲ್ಲಿರುವ ಬಿಜೆಪಿ (BJP) ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಪಕ್ಷದ ಮುಖಂಡರು, ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಹೋಳಿ (Holi) ಆಚರಿಸಿದರು.

ಅತಿಸಾರ ರೋಗಿಗಳನ್ನು ಭೇಟಿಯಾದ ಧರ್ಮೇಂದ್ರ ಪ್ರಧಾನ್

ಅತಿಸಾರ ರೋಗಿಗಳನ್ನು ಭೇಟಿ ಮಾಡಲು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (VIMSAR) ಭೇಟಿ ನೀಡಿದರು. ಅಲ್ಲದೆ, ರೋಗಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಧರ್ಮೇಂದ್ರ ಪ್ರಧಾನ್ ಹೋಳಿ ಆಚರಣೆ

ಇದನ್ನೂ ಓದಿ: Pakhala Divas: ಪಖಾಲ ಕೇವಲ ಆಹಾರವಲ್ಲ, ಒಡಿಶಾದ ಸಂಸ್ಕೃತಿಯ ಗುರುತು: ಧರ್ಮೇಂದ್ರ ಪ್ರಧಾನ್

ಬಳಿಕ ಮಾತನಾಡಿದ ಧರ್ಮೇಂದ್ರ ಪ್ರಧಾನ್, ನಾನು ಅತಿಸಾರ ರೋಗಿಗಳನ್ನು ಭೇಟಿ ಮಾಡಿ ವೈದ್ಯರಲ್ಲಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದೆ. ದುರದೃಷ್ಟವಶಾತ್, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು ನೂರಕ್ಕೂ ಹೆಚ್ಚು ಜನರು ಅತಿಸಾರದಿಂದ ಬಳಲುತ್ತಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಧರ್ಮೇಂದ್ರ ಪ್ರಧಾನಿ ಹೇಳಿಕೆ ಬಗ್ಗೆ ಎಎನ್​ಐ ಎಕ್ಸ್ ಪೋಸ್ಟ್

ಇದು ಕಳವಳಕಾರಿ ವಿಷಯವಾಗಿದೆ. ಮಹಾನದಿ ನದಿಯ ನೀರನ್ನು ಸಂಗ್ರಹಿಸಲು ದೊಡ್ಡ ಅಣೆಕಟ್ಟು ಹೊಂದಿರುವ ಹಿರಾಕುಡ್‌ನಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ, ಕೇಂದ್ರ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ಒಡಿಶಾದ ಜನರಿಗೆ ಮನೆಯಲ್ಲಿ ಶುದ್ಧ ನೀರು ಸಿಗುವಂತೆ ಸಂಪನ್ಮೂಲಗಳನ್ನು ಒದಗಿಸಿದೆ. ಆದರೆ ಜನರು ಮಾರ್ಚ್‌ನಲ್ಲಿಯೂ ಅತಿಸಾರದಿಂದ ಬಳಲುತ್ತಿದ್ದಾರೆ, ಇದು ರಾಜ್ಯ ಸರ್ಕಾರ ಮತ್ತು ಪ್ರಾದೇಶಿಕ ಆಡಳಿತದ ವೈಫಲ್ಯವನ್ನು ತೋರಿಸುತ್ತದೆ ಎಂದರು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:50 pm, Tue, 26 March 24