ತಮಿಳುನಾಡು: ತಾನು ಕಲಿತ ಶಾಲೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ದಲಿತ ಯುವಕನಿಗೆ ಥಳಿತ
ತಾನು ಓದಿದ ಶಾಲೆಯ ವಾರ್ಷಿಕೋತ್ಸಕ್ಕೆ ಪಾಲ್ಗೊಳ್ಳಲು ತೆರಳಿದ್ದ ದಲಿತ ಯುವಕನನ್ನು ಥಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆತ 8ನೇ ತರಗತಿವರೆಗೆ ಓದಿದ್ದ ಶಾಲೆಯಲ್ಲಿಯೇ ಆತನನ್ನು ನಿಂದಿಸಿ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಶ್ಯಾಮ್ಕುಮಾರ್ನನ್ನು ತಿರುಪ್ಪುರ್ ಮೆಡಿಕಲ್ ಕಾಲೇಜು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಲ್ಲೂರು ಪೊಲೀಸರು ಕಾರ್ತಿಕ್ ಹಾಗೂ ಆತನ ಸಂಬಂಧಿ ಬಾಲಸುಬ್ರಮಣಿಯಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಶುಕ್ರವಾರ ನಡೆದ ಘಟನೆ ಇದು. ಅಂದು ಶಾಲೆಯ ವಾರ್ಷಿಕೋತ್ಸವ ಎಂಬ ಖುಷಿಯಿಂದ ಕೆಲಸಕ್ಕೆ ಅರ್ಧ ದಿನ ರಜೆ ಹಾಕಿ ಶಾಲೆಗೆ ತೆರಳಿದ್ದರು. ಅಲ್ಲಿ ಯಾಕೆ ಬಂದೆ ಎಂದು ಕೇಳಿ ಕಾರ್ತಿಕ್ ಎಂಬಾತ ಜಾತಿ ನಿಂದನೆ ಮಾಡಿ ಕಾಲಿನಿಂದ ಒದ್ದಿದ್ದ, ಬಳಿಕ ಸಂಬಂಧಿಯೊಂದಿಗೆ ಸೇರಿ ಹಿಗ್ಗಾಮುಗ್ಗ ಥಳಿಸಿದ್ದರು.
ದ್ವಿತೀಯ ಪಿಯುಸಿಯಲ್ಲಿ ಫೇಲ್ ಆದ ಕಾರಣ ಶ್ಯಾಮ್ಕುಮಾರ್ ಕಳೆದ ಎರಡು ವರ್ಷಗಳಿಂದ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ಕೃಷಿ ಕಾರ್ಮಿಕರಾಗಿದ್ದು, ತಾಯಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಅವರು ಪ್ರಭಾವಶಾಲಿಗಳು ಹಾಗಾಗಿ ದೂರು ಕೊಟ್ಟು ಇಷ್ಟು ದಿನವಾದರೂ ಆರಾಮವಾಗಿ ತಿರುಗಾಡಿಕೊಂಡಿದ್ದಾರೆ ಎಂದು ಶ್ಯಾಮ್ಪ್ರಸಾದ್ ಹೇಳಿದ್ದಾರೆ.
ಮತ್ತಷ್ಟು ಓದಿ: ಕಳ್ಳತನ ಮಾಡಿದ ಆರೋಪ ದಲಿತ ಬಾಲಕನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿತ
ನಾವು ಅಪರಾಧಿಗಳನ್ನು ಗುರುತಿಸಿದ್ದೇವೆ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ನಾವು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಅವರನ್ನು ಇನ್ನೂ ಬಂಧಿಸಿಲ್ಲ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ