ಕಳ್ಳತನ ಮಾಡಿದ ಆರೋಪ ದಲಿತ ಬಾಲಕನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿತ
ಕಳ್ಳತನ ಆರೋಪದ ಮೇಲೆ 11 ವರ್ಷದ ದಲಿತ ಬಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಥಳಿಸಿದ ಆರೋಪ ಚಿಂತಾಮಣಿ ತಾಲ್ಲೂಕಿನ ಕೆಂಪದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ: ಕಳ್ಳತನ ಆರೋಪದ ಮೇಲೆ 11 ವರ್ಷದ ದಲಿತ ಬಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಥಳಿಸಿದ ಆರೋಪ ಚಿಂತಾಮಣಿ ತಾಲ್ಲೂಕಿನ ಕೆಂಪದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸವರ್ಣಿಯ ನಾಗರಾಜ್ ಎಂಬುವರ ಮಗಳ ಕಿವಿ ಓಲೆಯನ್ನು ಬಾಲಕ ಕದ್ದಿದ್ದಾನೆಂದು ಆರೋಪಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಗ್ರಾಮದಲ್ಲಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆಂದು ಬಾಲಕ ಆರೋಪಿಸಿದ್ದಾನೆ.
ಮಗನ ರಕ್ಷಣೆಗೆ ಹೋದ ಆತನ ತಾಯಿಗೂ ಹಲ್ಲೆ ಮಾಡಿರುವ ದೂರು ಕೇಳಿ ಬಂದಿದೆ. ಬಾಲಕ ಹಾಗೂ ಆತನ ತಾಯಿ ಚಿಂತಾಮಣಿ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕಾರಣ ದಾಖಲಾಗಿದೆ. ಕೆಂಪದೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ, ನವೀನ, ನಂಜೇಗೌಡ, ಹರೀಶ, ನಾಗರಾಜ್ ಸೇರಿದಂತೆ ಹಲವರು ವಿರುದ್ದ ಪ್ರಕರಣ ದಾಖಲಾಗಿದೆ.
ಹಳೇ ವೈಷ್ಯಮ್ಯಕ್ಕೆ ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ
ಮಂಡ್ಯ: ಹಳೇ ವೈಷ್ಯಮ್ಯಕ್ಕೆ ಕತ್ತು ಕುಯ್ದು ಯುವಕನ ಹತ್ಯೆ (brutal murder) ಮಾಡಿರುವಂತಹ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ನೀಲನಹಳ್ಳಿಯಲ್ಲಿ ನಡೆದಿದೆ. ಹತ್ಯೆಯಿಂದ ಬೆಳ್ಳಂಬೆಳಗ್ಗೆ ಮಂಡ್ಯ ಜನರು ಬೆಚ್ಚಿಬಿದಿದ್ದಾರೆ. ಲಕ್ಷ್ಮೀಸಾಗರ ಗ್ರಾಮದ ಧನಂಜಯ(26)ಕೊಲೆಯಾದ ಯುವಕ. ಪಾಂಡವಪುರದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಧನಂಜಯ. ರೌಡಿಶೀಟರ್ ರೋಹಿತ್ ಹಾಗೂ ಆತನ ಸಹಚರರಿಂದ ಕೃತ್ಯವೆಸಗಲಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮೇಲುಕೋಟೆ ಪೊಲೀಸರ ಭೇಟಿ, ಸ್ಥಳ ಪರಿಶೀಲನೆ ಮಾಡಿದ್ದು, ತಲೆ ಮರೆಸಿಕೊಂಡ ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ. ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗಾರ್ಮೇಂಟ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅನುಮಾನಸ್ಪದ ಸಾವು
ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕೆಯ ಪ್ರದೇಶದ ಶಾಹಿ ಗಾರ್ಮೇಂಟ್ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿ ಲೀಲಾಧರ್ (45) ಅನುಮಾನಸ್ಪದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸೆ. 28 ರಂದು ಕೈಗಾರಿಕೆಯ ಪ್ರದೇಶದ ಬಳಿ ರೂಂನಲ್ಲಿ ಘಟನೆ ನಡೆದಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ಯುಪಿಯಿಂದ ಬಂದ ಪತ್ನಿ ಮತ್ತು ಸಂಬಂಧಿಕರು ಆಗಮಿಸಿದ್ದು, ಶವ ಯುಪಿಗೆ ತೆಗೆದುಕೊಂಡು ಹೋಗಲು ಕುಟುಂಬಸ್ಥರು ಪರದಾಡಿದ್ದಾರೆ. ಶಾಹಿ ಕಂಪನಿಯ ಅಧಿಕಾರಿಗಳು ಶವ ತೆಗೆದುಕೊಂಡು ಹೋಗಲು ವ್ಯವಸ್ಥೆಗೆ ನಿರಾಕರಿಸಿದ್ದಾರೆ. ಗ್ರಾಮಾಂತರ ಪೊಲೀಸ ಠಾಣೆ ಎದುರು ಮೃತನ ಪತ್ನಿ ಕಣ್ಣೀರು ಹಾಕಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಮೃತನ ಶವ ರವಾನೆ ವ್ಯವಸ್ಥೆಗೆ ಪತ್ನಿಯ ಒತ್ತಾಯ ಮಾಡಿದ್ದು, ಜವಾಬ್ದಾರಿಯಿಂದ ಶಾಹಿ ಗಾರ್ಮೇಂಟ್ಸ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 pm, Fri, 30 September 22