ಸಮೀರ್ ವಾಂಖೆಡೆ ತನಿಖೆ ನಡೆಸುತ್ತಿದ್ದ ಆರೂ ಕೇಸ್ಗಳ ಜವಾಬ್ದಾರಿ ಸಂಜಯ್ ಕುಮಾರ್ ಹೆಗಲಿಗೆ; ಯಾರು ಈ ಐಪಿಎಸ್ ಅಧಿಕಾರಿ?
ಸಮೀರ್ ವಾಂಖೆಡೆ ಎನ್ಸಿಬಿ ವಲಯ ನಿರ್ದೇಶಕರಾಗಿಯೇ ಮುಂದುವರಿಯುತ್ತಾರೆ. ಆದರೆ ಆರ್ಯನ್ ಖಾನ್ ಕೇಸ್ ಸೇರಿ ಆರು ಪ್ರಕರಣಗಳನ್ನು ಮಾತ್ರ ಅವರಿಂದ ಹಿಂಪಡೆದು ಸಂಜಯ್ ಕುಮಾರ್ ಹೆಗಲಿಗೆ ನೀಡಲಾಗಿದೆ.
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮುಂಬೈ ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದಾಗಿನಿಂದ ಅವರೆಷ್ಟು ಸುದ್ದಿಯಾಗಿದ್ದಾರೋ, ಅಷ್ಟೇ ದೊಡ್ಡ ಮಟ್ಟದಲ್ಲಿ ಸುದ್ದಿಯಾದವರು ಆರ್ಯನ್ ಖಾನ್ರನ್ನು ಬಂಧಿಸಿದ್ದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ. ಅವರ ವಿರುದ್ಧ ಸುಲಿಗೆ ಸೇರಿ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಆರ್ಯನ್ ಖಾನ್ ಸಂಬಂಧಪಟ್ಟ ಡ್ರಗ್ಸ್ ಕೇಸ್ ತನಿಖೆಯಿಂದ ಅವರನ್ನು ಕೈಬಿಡಲಾಗಿದೆ. ಅಷ್ಟೇ ಅಲ್ಲ, ಇದರೊಂದಿಗೆ ಅವರು ತನಿಖೆ ನಡೆಸುತ್ತಿದ್ದ ಇನ್ನೂ ಆರು ಕೇಸ್ಗಳಿಂದಲೂ ಕೊಕ್ ನೀಡಲಾಗಿದ್ದು, ವಾಂಖೆಡೆ ಜಾಗಕ್ಕೆ ಈಗ ಐಪಿಎಸ್ ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ಬಂದಿದ್ದಾರೆ. ಇನ್ನು ಮುಂದೆ ಆರ್ಯನ್ ಖಾನ್ ಕೇಸ್ ಸೇರಿ ಉಳಿದೆಲ್ಲ ಕೇಸ್ಗಳನ್ನೂ ಸಂಜಯ್ ಕುಮಾರ್ ಅವರೇ ತನಿಖೆ ನಡೆಸಲಿದ್ದಾರೆ.
ಇನ್ನು ಸಮೀರ್ ವಾಂಖೆಡೆ ಬದಲಿಗೆ ಬಂದಿರುವ ಸಂಜಯ್ ಕುಮಾರ್ 1996ನೇ ಬ್ಯಾಚ್ನ, ಒಡಿಶಾ ಕೇಡರ್ನ ಐಪಿಎಸ್ ಅಧಿಕಾರಿ. 2021ರ ಜನವರಿಯಲ್ಲಿ ಇವರನ್ನು ಎನ್ಸಿಬಿಯ ಉಪ ಪ್ರಧಾನ ನಿರ್ದೇಶಕರಾಗಿ ಕೇಂದ್ರ ಗೃಹ ಸಚಿವಾಲಯ ನೇಮಕ ಮಾಡಿದೆ. ಇದಕ್ಕೂ ಮುನ್ನ ಸಂಜಯ್ ಕುಮಾರ್ ಭುವನೇಶ್ವರ್ನಲ್ಲಿ ಪೊಲೀಸ್ ಮಾಡರ್ನೈಶೇನ್ನ ಎಡಿಜಿಯಾಗಿದ್ದರು. ಇವರು ಮೊದಲಿನಿಂದಲೂ ಡ್ರಗ್ ಮಾಫಿಯಾಕ್ಕೆ ದುಃಸ್ವಪ್ನರಾದವರೇ ಆಗಿದ್ದಾರೆ. ಒಡಿಶಾ ರಾಜ್ಯ ಪೊಲೀಸ್ನ ಡ್ರಗ್ ಟಾಸ್ಕ್ ಫೋರ್ಸ್ನ ಮುಖ್ಯಸ್ಥರಾಗಿದ್ದಾಗಲೂ ಹಲವು ಪ್ರಕರಣಗಳ ತನಿಖೆ ನಡೆಸಿದ್ದಾರೆ.
ಇನ್ನು ಸಮೀರ್ ವಾಂಖೆಡೆ ಎನ್ಸಿಬಿ ವಲಯ ನಿರ್ದೇಶಕರಾಗಿಯೇ ಮುಂದುವರಿಯುತ್ತಾರೆ. ಆದರೆ ಆರ್ಯನ್ ಖಾನ್ ಕೇಸ್ ಸೇರಿ ಆರು ಪ್ರಕರಣಗಳನ್ನು ಮಾತ್ರ ಅವರಿಂದ ಹಿಂಪಡೆದು ಸಂಜಯ್ ಕುಮಾರ್ ಹೆಗಲಿಗೆ ನೀಡಲಾಗಿದೆ.ಇನ್ನು ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದಾಗಿನಿಂದಲೂ ಸಮೀರ್ ವಾಂಖೆಡೆ ಸುದ್ದಿಯಲ್ಲಿದ್ದರು. ಅನೇಕರು ಅವರ ಕೆಲಸವನ್ನು ಶ್ಲಾಘಿಸಿದ್ದರೆ, ಇನ್ನೂ ಹಲವರು ವಾಂಖೆಡೆ ವಿರುದ್ಧ ಮಾತನಾಡಿದ್ದರು. ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ಕೂಡ ವಾಂಖೆಡೆ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದರು.
ಇದನ್ನೂ ಓದಿ: Scotland Dressing Room: ಸ್ಕಾಟ್ಲೆಂಡ್ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಎದುರಾಳಿ ನಾಯಕನ ಕನಸು ನನಸು ಮಾಡಿದ ವಿರಾಟ್ ಕೊಹ್ಲಿ