ಕಾಂಗ್ರೆಸ್​ ಹೆಚ್ಚು ಮತಗಳನ್ನು ಪಡೆಯಲು ಶಿವಸೇನೆಯೂ ಕಾರಣ: ಸಂಜಯ್ ರಾವತ್

|

Updated on: Jun 06, 2024 | 10:48 AM

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಹೆಚ್ಚು ಮತವನ್ನು ಗಳಿಸುವಲ್ಲಿ ಶಿವಸೇನೆಯ ಪಾತ್ರವೂ ಇದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಕಾಂಗ್ರೆಸ್​ ಹೆಚ್ಚು ಮತಗಳನ್ನು ಪಡೆಯಲು ಶಿವಸೇನೆಯೂ ಕಾರಣ: ಸಂಜಯ್ ರಾವತ್
ಸಂಜಯ್ ರಾವತ್
Follow us on

ಲೋಕಸಭಾ ಚುನಾವಣೆ(Lok Sabha Election)ಯ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ನೇತೃತ್ವದ ಎನ್​ಡಿಎ ಬಹುಮತವನ್ನು ಪಡೆದಿದೆ. ಹಾಗೆಯೇ ಇಂಡಿ ಮೈತ್ರಿಕೂಟವು ಕೂಡ ಹೆಚ್ಚು ಸೀಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್​ ಹೆಚ್ಚು ಸ್ಥಾನ ಗಳಿಸುವಲ್ಲಿ ಶಿವಸೇನೆಯ ಪಾತ್ರವೂ ಇದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

‘‘ಕಾಂಗ್ರೆಸ್​ ಹಾಗೂ ಎನ್​ಸಿಪಿಯ ಮತಗಳ ಹೆಚ್ಚಳದಲ್ಲಿ ಶಿವಸೇನೆ ಪಾತ್ರವಹಿಸಿದೆ ಎಂದು ನಿಮಗೆ ಅನಿಸುವುದಿಲ್ಲವೇ, ಶಿವಸೇನೆ ಮತ್ತು ಉದ್ಧವ್ ಠಾಕ್ರೆ ಮಹಾರಾಷ್ಟ್ರಾದ್ಯಂತ ಪ್ರಚಾರ ಮಾಡದಿದ್ದರೆ ಹೀಗಾಗುತ್ತಿತ್ತೇ, ಮಹಾ ವಿಕಾಸ್ ಅಘಾಡಿ ಬಲವಾಗಿ ಕೆಲಸ ಮಾಡುತ್ತದೆ ಮತ್ತು ನಮ್ಮ ಮನಸ್ಸಿನಲ್ಲಿ ಯಾವುದೇ ಅಹಂಕಾರವಿಲ್ಲ’’ ಎಂದರು.

ಈ ಮೊದಲು ರಾಹುಲ್ ಗಾಂಧಿ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ಧರಿದ್ದರೆ ನಾವು ವಿರೋಧಿಸುವುದಿಲ್ಲ ಅವರು ಬಹುರಾಷ್ಟ್ರೀಯ ನಾಯಕ ಎಂದು ಸಾಬೀತುಪಡಿಸಿದ್ದಾರೆ, ನಾವೆಲ್ಲರೂ ಅವರನ್ನು ಬಯಸುತ್ತೇವೆ, ನಮ್ಮ ಮೈತ್ರಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.

ಚುನಾವಣೆ ಆರಂಭವಾದಾಗಿನಿಂದ ಇಂಡಿ ಮೈತ್ರಿಕೂಟಕ್ಕೆ ಪ್ರಧಾನಿ ಹುದ್ದೆಯ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಬಿಜೆಪಿ ಸರ್ವಾಧಿಕಾರ ಆಡಳಿತದಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಲು ಈ ಮೈತ್ರಿ ಯಾವಾಗಲೂ ಹೋರಾಡಿದೆ ಮತ್ತು ಜನರು ನಮಗೆ ಮತ ಹಾಕಿದ್ದಾರೆ ಎಂದು ಹೇಳಿದ್ದರು.

ಮತ್ತಷ್ಟು ಓದಿ:Lok Sabha Election Results: ಸ್ಪರ್ಧಿಸಿದ ಅಷ್ಟೂ ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ಚಿರಾಗ್ ಪಾಸ್ವಾನ್ ಪಕ್ಷ

ಬಿಜೆಪಿ ಸ್ವಂತ ಬಲದ ಮೇಲೆ ಬಹುಮತ ಪಡೆದಿಲ್ಲ, ಬಿಜೆಪಿ ಕೇವಲ 235-240 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ ಎಂದ ಅವರು, ಬಿಜೆಪಿಯು ಸ್ವತಂತ್ರವಾಗಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿಯು ಇಷ್ಟು ಸ್ಥಾನಗಳನ್ನು ಸಿಬಿಐ, ಇಡಿ ಹಾಗೂ ಆದಾಯ ತೆರಿಗೆ ಇಲಾಖೆ ನೆರವಿನಿಂದಲೇ ಗಳಿಸಿದೆ ಎಂದು ವ್ಯಂಗ್ಯವಾಡಿದ ಸಂಜಯ್ ರಾವತ್, ಒಂದು ವೇಳೆ ಬಿಜೆಪಿಗೆ ಅಗತ್ಯ ಬೆಂಬಲವಿದ್ದರೆ ಸರ್ಕಾರ ರಚಿಸಲು ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಪ್ರಜಾಪ್ರಭುತ್ವವಾಗಿರುವುದರಿಂದ ಅವರೇನಾದರೂ ಸರ್ಕಾರ ರಚಿಸಲು ಮುಂದಾದರೆ ನಾವದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:47 am, Thu, 6 June 24