ಮೋದಿಗೆ ಸರ್ ತನ್ ಸೆ ಜುದಾ ಶಿಕ್ಷೆ, ಆಯೋಧ್ಯೆ, ಮಥುರಾ ಮೇಲೆ ಬಾಂಬ್ ದಾಳಿ ಎಚ್ಚರಿಕೆ: PFIನಿಂದ ಪ್ರತೀಕಾರದ ಪತ್ರ

| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2022 | 6:05 PM

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅಂದರ ಅಂಗ ಸಂಸ್ಥೆಗಳು ಹಾಗೂ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದಕ್ಕೆ ಸಂಘಟನೆ ಪ್ರತೀಕಾರದ ಪತ್ರವೊಂದನ್ನು ರವಾನಿಸಿದೆ.

ಮೋದಿಗೆ ಸರ್ ತನ್ ಸೆ ಜುದಾ ಶಿಕ್ಷೆ, ಆಯೋಧ್ಯೆ, ಮಥುರಾ ಮೇಲೆ ಬಾಂಬ್ ದಾಳಿ ಎಚ್ಚರಿಕೆ: PFIನಿಂದ ಪ್ರತೀಕಾರದ ಪತ್ರ
Modi PFI
Follow us on

ನವದೆಹಲಿ: ದೇಶದ್ರೋಹಿ ಕೃತ್ಯದ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಅದರ ಇತರೆ ಅಂಗ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಬ್ಯಾನ್​ ಆಗಿರುವ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತೀಕಾರಕ್ಕಾಗಿ ಕಾಯುತ್ತಿದ್ದು, ಇದೀಗ ಸಂಘಟನೆ ಪ್ರತೀಕಾರದ ಪತ್ರವೊಂದನ್ನು ರವಾನಿಸಿದೆ.

ಆಯೋಧ್ಯೆ ರಾಮ ಮಂದಿರ, ಮಥುರಾ ಕೃಷ್ಣ ಮಂದಿರದ ಮೇಲೆ ಆತ್ಮಾಹುತಿ ದಾಳಿ ಮಾಡುವುದಾಗಿ ಈ ಪತ್ರದ ಮೂಲಕ ಎಚ್ಚರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಸರ್ ತನ್ ಸೆ ಜುದಾ ಶಿಕ್ಷೆ ನೀಡುವುದಾಗಿ ಪತ್ರದಲ್ಲಿ ಬರೆಯಲಾಗಿದೆ. ಇಷ್ಟೇ ಅಲ್ಲ ನಿಷೇಧಕ್ಕೆ ದೊಡ್ಡ ಮಟ್ಟದಲ್ಲಿ ಪ್ರತೀಕಾರಾ ತೀರಿಸುವುದಾಗಿ ಎಚ್ಚರಿಸಿದೆ.

ಇದನ್ನೂ ಓದಿ: PFI ಬ್ಯಾನ್ ಬಳಿಕ ಕಿಲ್ಲಿಂಗ್ ಟಾಸ್ಕ್: ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ, ಹಿಟ್​ ಲಿಸ್ಟ್​ನಲ್ಲಿ ಯಾರಿದ್ದಾರೆ..?

ಮಹಾರಾಷ್ಟ್ರ ಬಿಜೆಪಿ ಶಾಸಕ ವಿಜಯ್ ಕುಮಾರ್ ದೇಶ್‌ಮುಖ್ ಅವರಿಗೆ ಈ ಪತ್ರ ಕಳುಹಿಸಲಾಗಿದೆ. ಪಿಎಫ್ಐ ನಾಯಕ ಮೊಹಮ್ಮದ್ ಶಫಿ ಬಿರಾಜ್‌ದಾರ್ ಹೆಸರಿನಲ್ಲಿ ಈ ಪತ್ರ ಬಂದಿದೆ. ಈ ಕುರಿತು ವಿಜಯ್ ಕುಮಾರ್ ದೇಶ್‌ಮುಖ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಿಂದಿಯಲ್ಲಿ ಪತ್ರ ಬರೆಯಲಾಗಿದ್ದು, ಪಿಎಫ್ಐ ಸಂಘಟನೆ ನಿಷೇಧಕ್ಕೆ ಸೇಡು ತೀರಿಸಿಕೊಳ್ಳುವುದು ಖಚಿತ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಿಂದೂಗಳ ಪವಿತ್ರ ಕ್ಷೇತ್ರ ಆಯೋಧ್ಯೆ ಹಾಗೂ ಮಥುರಾದ ಮೇಲೆ ಆತ್ಮಾಹುತಿ ದಾಳಿ ಮೂಲಕ ಮಂದಿರ ಸ್ಫೋಟಿಸಲಾಗುವುದು ಎಂದು ಪತ್ರದಲ್ಲಿ ಹೇಳಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ