ಜಾರ್ಖಂಡ್​ನಲ್ಲೇ ನಡೆದಿವೆ ಅತಿ ಹೆಚ್ಚು ಬಾಲ್ಯ ವಿವಾಹ: ಕೇಂದ್ರ ಗೃಹ ಇಲಾಖೆ ಸಮೀಕ್ಷೆಯಿಂದ ಬಹಿರಂಗ

ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಸಮೀಕ್ಷೆ ನಡೆಸಿದ ಸಮೀಕ್ಷೆ ಬಹಿರಂಗವಾಗಿದ್ದು, ಜಾರ್ಖಂಡ್​ನಲ್ಲೇ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ.

ಜಾರ್ಖಂಡ್​ನಲ್ಲೇ ನಡೆದಿವೆ ಅತಿ ಹೆಚ್ಚು ಬಾಲ್ಯ ವಿವಾಹ: ಕೇಂದ್ರ ಗೃಹ ಇಲಾಖೆ ಸಮೀಕ್ಷೆಯಿಂದ ಬಹಿರಂಗ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 08, 2022 | 4:39 PM

:ನವದೆಹಲಿ: ಬಾಲ್ಯವಿವಾಹ ತಡೆಗೆ ಕೇಂದ್ರ ಹಾಗೂ ದೇಶದ ಆಯಾ ರಾಜ್ಯ ಸರ್ಕಾರಗಳು ಹಲವು ಕ್ರಮಗಳ ಜೊತೆ ಜಾಗೃತಿ ಕಾರ್ಯಕ್ರಮಗಳನ್ನ ಮಾಡುತ್ತಲೇ ಇವೆ. ಆದರೂ ಸಹ ದೇಶದಲ್ಲಿ ಬಾಲ್ಯವಿವಾಹ ಪ್ರಕರಣಗಳು ಅಧಿಕವಾಗುತ್ತಲೇ ಇವೆ.

ಹೌದು… ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ಜನಸಂಖ್ಯಾ ಮಾದರಿ ಸಮೀಕ್ಷೆಯ ಪ್ರಕಾರ, ಇಡೀ ದೇಶದಲ್ಲೇ ಜಾರ್ಖಂಡ್‌ನಲ್ಲಿ  (Jharkhand)ಬಾಲ್ಯವಿವಾಹ ಪ್ರಕರಣಗಳು (child marriages) ಹೆಚ್ಚಾಗಿವೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಇದೆ.

ಜಾರ್ಖಂಡ್​ನಲ್ಲಿ ವಯಸ್ಸಿಗೆ ಬರುವ ಮೊದಲೇ (18 ವರ್ಷಕ್ಕಿಂತ ಮೊದಲು) ಮದುವೆಯಾಗುವ ಹುಡುಗಿಯರ ಶೇಕಡವಾರು ಪ್ರಮಾಣ 5.8 ರಷ್ಟಿದೆ ಎಂದು ಗೃಹ ಸಚಿವಾಲಯದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ಬ್ಯಾಗ್​ನಲ್ಲಿ ಕಟ್ಟಿ ಕಾಡಿನಲ್ಲಿ ಎಸೆದ ಕಾಮುಕ; ಆಮೇಲೆ ನಡೆದಿದ್ದು ಅಚ್ಚರಿ!

18 ವರ್ಷ ಮೊದಲೇ ವಿವಾಹವಾಗುವ ಮಹಿಳೆಯರ ಶೇಕಡಾವಾರು ಪ್ರಮಾಣವು ರಾಷ್ಟ್ರೀಯ ಮಟ್ಟದಲ್ಲಿ 1.9 ಆಗಿದೆ. ಮತ್ತು ಕೇರಳದಲ್ಲಿ 0.0 ರಿಂದ ಜಾರ್ಖಂಡ್‌ನಲ್ಲಿ 5.8 ರಷ್ಟಿದೆ ಎಂದು ಸಮೀಕ್ಷೆ ವರದಿ ಹೇಳಿದೆ.

ಜಾರ್ಜಂಡ್​ನಲ್ಲಿ ಬಾಲ್ಯ ವಿವಾಹಗಳು ಗ್ರಾಮೀಣ ಪ್ರದೇಶಗಳಲ್ಲಿ ಶೇ.7.3 ಹಾಗೂ ನಗರ ಪ್ರದೇಶಗಳಲ್ಲಿ ಶೇ.3ರಷ್ಟು ಇವೆ. ಕೇವಲ ಜಾರ್ಖಂಡ್ ಮಾತ್ರವಲ್ಲ, ಪಶ್ಚಿಮ ಬಂಗಾಳದಲ್ಲೂ ಅದೇ ಪರಿಸ್ಥಿತಿ ಇದೆ. ಮಹಿಳೆಯರಿಗೆ 21 ವರ್ಷ ತುಂಬುವ ಮೊದಲೇ ಮದುವೆಯಾಗುತ್ತಿದ್ದಾರೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.

ಪಶ್ಚಿಮ ಬಂಗಾಳದಲ್ಲೂ 54.9 ಪ್ರತಿಶತದಷ್ಟು ಹುಡುಗಿರು 21 ವಯಸ್ಸಿಗೆ ಬರುವ ಮೊದಲೇ ವಿವಾಹ ಮಾಡಿಕೊಳ್ಳುತ್ತಿದ್ದರೆ, ಜಾರ್ಖಂಡ್​ನಲ್ಲಿ ಇದು ಶೇ. 54.6 ರಷ್ಟಿದೆ ಎಂದು ತಿಳಿದುಬಂದಿದೆ,

ಇನ್ನು ಎನ್​ಸಿಆರ್​ಬಿ ( National Crime Records Bureau) ಪ್ರಕಾರ, 2015 ರಲ್ಲಿ ಜಾರ್ಖಂರ್ಡ್​ನಲ್ಲಿ ಮಾಟಮಂತ್ರ ಆರೋಪದ ಮೇಲೆ 32, 2016 ರಲ್ಲಿ 27, 2017 ರಲ್ಲಿ 19, 2018, 2019 ಮತ್ತು 2020ರಲ್ಲಿ ತಲಾ 15 ಜನರನ್ನು ಕೊಲ್ಲಲಾಗಿದೆ.

ಇತ್ತೀಚೆಗೆ ಜಾರ್ಖಂಡ್​ನಲ್ಲಿ ಅಪ್ರಾಪ್ತ ಬಾಲಕಿಗೆ ಬೆಂಕಿ ಹಚ್ಚಿದ ಬೆಳಕಿಗೆ ಬಂದಿತು. ಕಳೆದ ಆಗಸ್ಟ್ 23 ರಂದು ಬಾಲಕಿ ಮಲಗಿದ್ದಾಗ ಆರೋಪಿಯು ತನ್ನ ಕೋಣೆಯ ಕಿಟಕಿಯ ಹೊರಗಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಎಂದು ಆರೋಪಿಸಲಾಗಿದೆ. ನಾಲ್ಕು ದಿನಗಳ ನಂತರ ಗಾಯಗೊಂಡಿದ್ದ ಬಾಲಕಿ ಸಾವನ್ನಪ್ಪಿದ್ದಳು.

ಸೆಪ್ಟೆಂಬರ್ 2 ರಂದು ದುಮ್ಕಾದಲ್ಲಿ 14 ವರ್ಷದ ಬುಡಕಟ್ಟು ಬಾಲಕಿಯೊಬ್ಬಳು ವ್ಯಕ್ತಿಯೊಬ್ಬನ ಮದುವೆ ಮಾತಿಗರ ಮರುಳಾಗಿ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು. ಈ ಎರಡು ಘಟನೆಗಳ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ ತನಿಖೆ ನಡೆಸುತ್ತಿವೆ. ಹದಿಹರೆಯದ ಬಾಲಕಿಯೊಬ್ಬಳು ಆ್ಯಸಿಡ್ ದಾಳಿಗೆ ಒಳಗಾಗಿದ್ದಾಳೆ. ಇದೀಗ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜ್ಯ ಸರ್ಕಾರವು ನವದೆಹಲಿಯ ಏಮ್ಸ್ ಗೆ ದಾಖಲಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Sat, 8 October 22

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ