Shocking News: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ, ಬ್ಯಾಗ್ನಲ್ಲಿ ಕಟ್ಟಿ ಕಾಡಿನಲ್ಲಿ ಎಸೆದ ಕಾಮುಕ; ಆಮೇಲೆ ನಡೆದಿದ್ದು ಅಚ್ಚರಿ!
ಅಪ್ರಾಪ್ತೆಯನ್ನು ತನ್ನ 'ಗೆಳತಿ' ಎಂದು ಹೇಳಿಕೊಂಡು ಅಪಹರಿಸಿ, ಅತ್ಯಾಚಾರ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ 26 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಗುವಾಹಟಿ: ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದರಲ್ಲಿ (Shocking News) ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ, ಅತ್ಯಾಚಾರ ನಡೆಸಿ, ಆಕೆಯನ್ನು ಕೊಲ್ಲಲು ಪ್ರಯತ್ನಿಸಿ, ಆಕೆಯನ್ನು ಚೀಲದಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದ. ಆದರೆ, ಸತ್ತುಹೋಗಿದ್ದಾಳೆ ಎಂದುಕೊಂಡಿದ್ದ ಆ ಬಾಲಕಿ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿ ತನ್ನ ಮನೆಗೆ ಬಂದಿದ್ದಾಳೆ. ಮನೆಗೆ ಬಂದ ಆ ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯ ಮತ್ತು ಕೊಲೆ ಪ್ರಯತ್ನದ ಬಗ್ಗೆ ಮನೆಯವರಿಗೆ ಹೇಳಿದ್ದಾಳೆ.
ಅಪ್ರಾಪ್ತೆಯನ್ನು ತನ್ನ ‘ಗೆಳತಿ’ ಎಂದು ಹೇಳಿಕೊಂಡು ಅಪಹರಿಸಿ, ಅತ್ಯಾಚಾರ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ 26 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆ ಬಾಲಕಿಯ ಮನೆಯವರು ಪೊಲೀಸರಿಗೆ ನೀಡಿದ ದೂರಿನ ನಂತರ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಂದು, ನೇಣು ಹಾಕಿದ ಪಾಪಿಗಳು
ಪೊಲೀಸ್ ಮೂಲಗಳ ಪ್ರಕಾರ, ಆ ಅಪ್ರಾಪ್ತ ಬಾಲಕಿ ಅಕ್ಟೋಬರ್ 3ರಂದು ಬೇರೊಬ್ಬರೊಂದಿಗೆ ದುರ್ಗಾ ಪೂಜೆಯ ಮಂಟಪಕ್ಕೆ ಹೋಗಿದ್ದಾಳೆಂದು ಗೊತ್ತಾದ ನಂತರ ಆ ಯುವಕ ಕೋಪಗೊಂಡು ಈ ಕೃತ್ಯ ಎಸಗಿದ್ದ. ಅಕ್ಟೋಬರ್ 6ರಂದು ಆ ವ್ಯಕ್ತಿಯನ್ನು ಬಂಧಿಸಲಾಯಿತು.
ಬಂಧಿತ ಯುವಕ ಆಕೆಯ ಕತ್ತು ಸೀಳಲು ಯತ್ನಿಸಿ, ಚೀಲದಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಆದರೆ ಆಕೆ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದಾಳೆ. ಅಲ್ಲದೆ, ಅಲ್ಲಿಂದ ಬಚಾವಾಗಿ ಮನೆಗೆ ಮರಳಿದ್ದಾಳೆ. ಆಗ ಆಕೆಯ ಬಟ್ಟೆಗಳು ಹರಿದಿದ್ದವು. ಈಗ ಆಕೆ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.