ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 142 ವರ್ಷಗಳ ಕಠಿಣ ಜೈಲು ಶಿಕ್ಷೆ
ಪೋಕ್ಸೊ ಪ್ರಕರಣದಡಿ 41 ವರ್ಷದ ವ್ಯಕ್ತಿಗೆ ಕೇರಳದ ಪಥನಂತಿಟ್ಟಾದ ಪೋಕ್ಸೊ ನ್ಯಾಯಾಲಯವು 142 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ ದಂಡ ವಿಧಿಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕೊಚ್ಚಿ (ಕೇರಳ): ಪೋಕ್ಸೊ ಪ್ರಕರಣದಡಿ 41 ವರ್ಷದ ವ್ಯಕ್ತಿಗೆ ಕೇರಳದ ಪಥನಂತಿಟ್ಟಾದ ಪೋಕ್ಸೊ ನ್ಯಾಯಾಲಯವು 142 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ ದಂಡ ವಿಧಿಸಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆದರೆ ಅಪರಾಧಿ 60 ವರ್ಷಗಳ ಕಾಲ ಮಾತ್ರ ಜೈಲಿನಲ್ಲಿ ಇರಬೇಕು ಎಂದು ನ್ಯಾಯಾಲಯ ಹೇಳಿದೆ ಎಂದು ವರದಿಯಾಗಿದೆ. 41 ವರ್ಷದ ವ್ಯಕ್ತಿಯನ್ನು ಆನಂದನ್ ಪಿಆರ್ ಅಲಿಯಾಸ್ ಬಾಬು ಎಂದು ಗುರುತಿಸಲಾಗಿದೆ.
ಬಾಲಕಿಯ ಪೋಷಕರು ಬಾಬುವಿನ ಸಂಬಂಧಿಕರಾಗಿದ್ದು, ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಬಾಲು ಬಾಲಕಿಯ ಮೇಲೆ 2019 ಮತ್ತು 2021 ನಡುವೆ ಎರಡು ವರ್ಷಗಳಲ್ಲಿ ಬಾಲಕಿ ಮೇಲೆ ಅನೇಕ ಬಾರಿ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿರುವಲ್ಲಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ಪೋಕ್ಸೋ ನ್ಯಾಯಾಲಯವು ಅಪರಾಧಿಗೆ ಶಿಕ್ಷೆಯನ್ನು ವಿಧಿಸಿದೆ. ಹಾಗೇ ಅಪರಾಧಿಯು ದಂಡವನ್ನು ಪಾವತಿಸದಿದ್ದರೆ, ಅವನು ಇನ್ನೂ ಮೂರು ವರ್ಷಗಳ ಕಾಲ ಹೆಚ್ಚಿಗೆ ಜೈಲು ಶಿಕ್ಷೆಯನ್ನು ಅಂದರೆ 145 ವರ್ಷಗಳ ಕಾಲ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇದು ಪಥನಂತಿಟ್ಟಾ ಜಿಲ್ಲೆಯಲ್ಲೇ ಪೋಕ್ಸೊ ಪ್ರಕರಣದಲ್ಲಿ ಒಬ್ಬ ಆರೋಪಿಗೆ ನೀಡಿದ ಗರಿಷ್ಠ ಶಿಕ್ಷೆಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 pm, Sat, 1 October 22