ಸಿಪಿಎಂ ಪಕ್ಷದ ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್ ನಿಧನ
ಭಾರತದ ಪ್ರಮುಖ ರಾಜಕಾರಣಿ ಮತ್ತು ಕೇರಳದ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ (69) ಶನಿವಾರ (ಅ.1) ರಂದು ನಿಧನರಾಗಿದ್ದಾರೆ.

ಸಿಪಿಎಂ ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್Image Credit source: The Indian Express
ಚೆನ್ನೈ: ಭಾರತದ ಪ್ರಮುಖ ರಾಜಕಾರಣಿ ಮತ್ತು ಕೇರಳದ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ (69) ಶನಿವಾರ (ಅ.1) ರಂದು ನಿಧನರಾಗಿದ್ದಾರೆ. ಕೊಡಿಯೇರಿ ಬಾಲಕೃಷ್ಣನ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆಗಸ್ಟ್ 29 ರಂದು ಅವರ ಆರೋಗ್ಯ ಸ್ಥಿತಿ ಗಂಭೀರವಾದಾಗಅವರನ್ನು ವಿಶೇಷ ಏರ್ ಆಂಬ್ಯುಲೆನ್ಸ್‌ನಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ ಕಣ್ಣೂರಿಗೆ ಕೊಂಡೊಯ್ಯಲಾಗುವುದು. ಕಣ್ಣೂರಿನ ತಲಶ್ಶೇರಿ ಟೌನ್ ಹಾಲ್‌ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಸೋಮವಾರ ಮಧ್ಯಾಹ್ನ 3 ಗಂಟೆಗೆ ಅವರ ಅಂತಿಮ ಸಂಸ್ಕಾರ ನೆರವೇರಲಿದೆ.




