Swachh Survekshan Awards 2022: ಇಂದೋರ್ ನಗರಕ್ಕೆ ಸತತ 6ನೇ ಬಾರಿ ಸ್ವಚ್ಛ ನಗರಿ ಪಟ್ಟ
2022ನೇ ಸಾಲಿನ ಸ್ವಚ್ಛ ನಗರಗಳ ಪ್ರಶಸ್ತಿ ಘೋಷಣೆಯಾಗಿದ್ದು, ಕರ್ನಾಟಕದ ನಗರಗಳು ಅಗ್ರಪಟ್ಟಿಯಲ್ಲಿ ಗುರುತಿಸಿಕೊಂಡಿಲ್ಲ.
ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್ – 2022ರ (Swachh Survekshan Awards 2022) ಫಲಿತಾಂಶ ಪ್ರಕಟವಾಗಿದ್ದು, ಸತತ 6ನೇ ವರ್ಷವು ಸಹ ಮಧ್ಯಪ್ರದೇಶದ ಇಂದೋರ್ ದೇಶದಲ್ಲಿ ಅತಿ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶದ ಅತಿ ಸ್ವಚ್ಛ ನಗರಗಳ ವಾರ್ಷಿಕ ಪಟ್ಟಿಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇಂದು(ಅ.1) ಬಿಡುಗಡೆ ಮಾಡಿದ್ದು, .2015, 2016ರ ಬಳಿಕ 2017ರಿಂದ ಇಂದೋರ್ ಪಟ್ಟಿಯಲ್ಲಿ ಸತತವಾಗಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಗುಜರಾತ್‌ನ ಸೂರತ್ ಎರಡನೇ ಸ್ವಚ್ಛ ನಗರ ಎನಿಸಿಕೊಂಡಿದ್ರೆ, ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: AICC ಅಧ್ಯಕ್ಷ ಚುನಾವಣೆ: ತ್ರಿಪಾಠಿ ನಾಮಪತ್ರ ರಿಜೆಕ್ಟ್, ಖರ್ಗೆ- ಶಶಿ ತರೂರ್ ನಡುವೆ ಫೈಟ್
ಮಧ್ಯಪ್ರದೇಶದ ಭೋಪಾಲ್ ಆರನೇ ಸ್ಥಾನದಲ್ಲಿದೆ. ಈ ಮೂಲಕ ಟಾಪ್ 10 ಪಟ್ಟಿಯಲ್ಲಿ ಮಧ್ಯಪ್ರದೇಶದ ಎರಡು ನಗರಳು ಸ್ಥಾನಪಡೆದುಕೊಂಡಿರುವುದು ವಿಶೇಷ.
For the 6th time in a row, Madhya Pradesh’s Indore has been ranked as the cleanest city in India in the Swachh Survekshan 2022 Awards: Ministry of Housing and Urban Affairs pic.twitter.com/oPyIGKF7KN
— ANI (@ANI) October 1, 2022
ಇನ್ನು ಟಾಪ್ ಟೆನ್ ಪಟ್ಟಿಯಲ್ಲಿ ಆಂಧ್ರಪ್ರದೇಶದ ಮೂರು ನಗರಗಳ ಇವೆ. ವಿಶಾಖಪಟ್ಟಣ ಮತ್ತು ವಿಜಯವಾಡ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದರೆ, ತಿರುಪತಿ ಏಳನೇ ಸ್ಥಾನದಲ್ಲಿದೆ.
Delhi | Swachhata Survekshan today is the largest sanitation survey in the world, in 2016 it was started as a pilot project in 73 cities & now in 2022 more than 4,355 cities have taken part in it: Union Minister Hardeep Singh Puri at Swachh Survekshan Awards 2022 pic.twitter.com/cLYZHp77eE
— ANI (@ANI) October 1, 2022
ರಾಷ್ಟ್ರ ರಾಜಧಾನಿ ದೆಹಲಿ ಒಂಬತ್ತನೇ ಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿಯ ನೆರೆಯ ಉತ್ತರ ಪ್ರದೇಶದ ನೋಯ್ಡಾ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ. ಪ್ರಮುಖವಾಗಿ 2015, 2016ರಲ್ಲಿ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮೈಸೂರು ಈ ಬಾರಿ ಪಟ್ಟಿಯಲ್ಲಿ ಇಲ್ಲ ಎನ್ನುವುದು ಬೇಸರದ ಸಂಗತಿ.
Delhi | The cleanliness drive (Swachh Bharat Mission) that started 8 years ago as a govt initiative is a mass movement today: Union Minister Hardeep Singh Puri at Swachh Survekshan Awards 2022 ceremony organized at Talkatora Stadium pic.twitter.com/UBMXo3hgY6
— ANI (@ANI) October 1, 2022
ಸ್ವಚ್ಛ ಭಾರತ ಅಭಿಯಾನದ ನೋಡಲ್ ಏಜೆನ್ಸಿಯಾಗಿರುವ ಕೇಂದ್ರ ಕೇಂದ್ರ ನಗರಾಭಿವೃದ್ಧಿ & ವಸತಿ ಸಚಿವಾಲಯ 2016ರಲ್ಲಿ 73 ನಗರಗಳಲ್ಲಿ ತನ್ನ ಮೊದಲ ಸಮೀಕ್ಷೆ ನಡೆಸಿತ್ತು. ನಂತರದ ವರ್ಷ 434 ನಗರಗಳಲ್ಲಿ ಸಮೀಕ್ಷೆ ನಡೆಸಿತ್ತು. 2018ರ ಸಮೀಕ್ಷೆಯಲ್ಲಿ 4,203 ನಗರಗಳು, 2019ರಲ್ಲಿ 4,237 ಮತ್ತು 2021ರಲ್ಲಿ 4,320 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈಗ 2022ನೇ ಸಾಲಿನಲ್ಲಿ 4,355 ಕ್ಕೂ ಹೆಚ್ಚು ನಗರಗಳು ಇದರಲ್ಲಿ ಭಾಗವಹಿಸಿದ್ದವು.
ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:14 pm, Sat, 1 October 22