AICC ಅಧ್ಯಕ್ಷ ಚುನಾವಣೆ: ತ್ರಿಪಾಠಿ ನಾಮಪತ್ರ ರಿಜೆಕ್ಟ್, ಖರ್ಗೆ- ಶಶಿ ತರೂರ್ ನಡುವೆ ಫೈಟ್
AICC ಅಧ್ಯಕ್ಷ ಸ್ಥಾನಕ್ಕೆ ತ್ರಿಪಾಠಿ ಸಲ್ಲಿಸಿದ್ದ ನಾಮಪತ್ರ ತಿರಸ್ಕಾರವಾಗಿದೆ. ಈ ಹಿನ್ನೆಲೆಯಲ್ಲಿ ಕಣದಲ್ಲಿ ಇಬ್ಬರ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ.
ನವದೆಹಲಿ: ತೀವ್ರ ಕುತೂಹಲ ಮೂಡಿಸಿರುವ AICC ಅಧ್ಯಕ್ಷ ಚುನಾವಣೆಯ ಅಖಾಡಕ್ಕಿಳಿದಿದ್ದ K.N.ತ್ರಿಪಾಠಿ ನಾಮಪತ್ರ(Nomination) ತಿರಸ್ಕೃತವಾಗಿದೆ. ಇದರಿಂದ ಜಾರ್ಖಂಡ್ ಕಾಂಗ್ರೆಸ್ ನಾಯಕತ್ರಿಪಾಠಿಗೆ ಭಾರೀ ನಿರಾಸೆಯಾಗಿದೆ.
ನಿಗದಿಪಡಿಸಿದ ಮಾನದಂಡ ಪೂರೈಸದ ಕಾರಣ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ (Madhusudan Mistry)ಅವರು ಇಂದು(ಅ.01) K.N.ತ್ರಿಪಾಠಿ ನಾಮಪತ್ರ ತಿರಸ್ಕೃತ ಮಾಡಿದ್ದಾರೆ. ಇದರಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ನಡುವೆ ಪೈಪೋಟಿ ನಡೆಯಲಿದೆ.
ಇದನ್ನೂ ಓದಿ: Mallikarjuna Kharge: ರಾಜ್ಯಸಭಾ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಲ್ಲಿಕಾರ್ಜುನ ಖರ್ಗೆ
Madhusudan Mistry is Congress’ Central Election Authority chairman.
The two current contenders for the post of Congress President include Mallikarjun Kharge & Shashi Tharoor pic.twitter.com/PSx6ThCHSX
— ANI (@ANI) October 1, 2022
ರಾಜಸ್ಥಾನ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಹಾಗೂ ಪಕ್ಷದ ಮತ್ತೋರ್ವ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಧ್ಯಕ್ಷ ಹುದ್ದೆ ಚುನಾವಣಾ ರೇಸ್ ನಿಂದ ಹಿಂದೆ ಸರಿದಿದಿದ್ದರು. ಇದೀಗ ತ್ರಿಪಾಠಿ ಅವರ ನಾಮಪತ್ರ ರಿಜೆಕ್ಟ್ ಆಗಿದ್ದರಿಂದ ಈಗ ಕಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಇದ್ದಾರೆ.
ಇಬ್ಬರು ನಾಯಕರಲ್ಲಿ ಯಾರಿಗೇ ಗದ್ದುಗೆ ಗಿಟ್ಟಿದರೂ, ದಕ್ಷಿಣ ಭಾರತದ ನಾಯಕರಿಗೆ ಎಐಸಿಸಿ ಅತ್ಯುನ್ನತ ಹುದ್ದೆ ಸಿಗಲಿದೆ. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅಥವಾ ಕೇರಳದ ಶಶಿ ತರೂರ್ ಕೈ ಪಾರ್ಟಿಯ ಮುಂದಿನ ಸಾರಥಿ ಆಗಲಿದ್ದಾರೆ.
ಆದ್ರೆ, ಈ ಹಿಂದೆ ಕಾಂಗ್ರೆಸ್ ಕುಟುಂಬ ನಾಯಕತ್ವ ಪ್ರಶ್ನಿಸಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಜಿ23 ನಾಯಕರೂ ಕೂಡ ಖರ್ಗೆ ಅವರಿಗೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗುವ ಎಲ್ಲಾ ಸಾಧ್ಯತೆಳಿವೆ ಎನ್ನಲಾಗಿದೆ. ಇದೇ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅಂತಿಮವಾಗಿ ಗಲುವು ಯಾರ ಪಾಲಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Sat, 1 October 22