PFI ಬ್ಯಾನ್ ಬಳಿಕ ಕಿಲ್ಲಿಂಗ್ ಟಾಸ್ಕ್: ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ, ಹಿಟ್ ಲಿಸ್ಟ್ನಲ್ಲಿ ಯಾರಿದ್ದಾರೆ..?
ಪಿಎಸ್ಐನ ಉದ್ದೇಶ ಇಲ್ಲಿಗೆ ಮುಗಿಯುತ್ತಾ..? ಪಿಎಫ್ಐ ನಲ್ಲಿದ್ದ ಕಾಣದ ಮುಖಂಡರ ಮುಂದಿನ ಹೆಜ್ಜೆ ಏನು..? ಎಫ್ ಐ ಮುಖಗಳ ಮುಂದಿನ ಹೆಜ್ಜೆಯ ಸ್ಟೋರಿಯ ಪೊಲೀಸ್ ಇನ್ವೆಸ್ಟಿಗೇಷನ್ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಕೇಂದ್ರ ಸರ್ಕಾರದಿಂದ ಐದು ವರ್ಷ ಪಿಎಫ್ ಐ ಬ್ಯಾನ್ (Popular Front of India) ಬಳಿಕ ಮುಂದೇನು ಅನ್ನೋ ಅನುಮಾನ ಕಾಡತೊಡಗಿದೆ. ಅಸಲಿಗೆ ದೊಡ್ಡ ಮಟ್ಟದ ಬೆಳವಣಿಗೆಯ ಈ ನಡುವೆ ಕೆಲ ಮಂದಿ ಬಂಧನವಾಗಿದ್ರೆ, ಮತ್ತಷ್ಟು ಮಂದಿ ನಾಪತ್ತೆಯಾಗಿದ್ದಾರೆ. ಉಳಿದಂತೆ ಸಂಘಟನೆಯ ಕೆಲವರು ಕಂಡು ಕಾಣದೆ ಚದುರಿದ್ದಾರೆ. ಹಾಗಾದರೇ ಪಿಎಸ್ಐನ ಉದ್ದೇಶ ಇಲ್ಲಿಗೆ ಮುಗಿಯುತ್ತಾ..? ಪಿಎಫ್ಐ ನಲ್ಲಿದ್ದ ಕಾಣದ ಮುಖಂಡರ ಮುಂದಿನ ಹೆಜ್ಜೆ ಏನು..?
ಅಸಲಿಗೆ ಈ ರೀತಿ ಬ್ಯಾನ್ ಎಂಬ ಸಂದರ್ಭದ ವಿಚಾರದ ಬಗ್ಗೆ ಪಿಎಫ್ ಐನಲ್ಲಿ ಈ ಮೊದಲೇ ಚರ್ಚೆಯಾಗಿತ್ತಾ..? ಈ ಎಲ್ಲಾ ವಿಚಾರಗಳ ಬಗ್ಗೆ ಟಿವಿ9ನಲ್ಲಿ ಕಾಣದ ಪಿಎಫ್ ಐ ಮುಖಗಳ ಮುಂದಿನ ಹೆಜ್ಜೆಯ ಸ್ಟೋರಿಯ ಪೊಲೀಸ್ ಇನ್ವೆಸ್ಟಿಗೇಷನ್ ಇನ್ಫಾರ್ಮೇಶನ್ ತೆರದಿಟ್ಟಿದೆ.
ಇದನ್ನೂ ಓದಿ: ಗಲಾಟೆ, ಗಲಭೆ ಮಾಡಲು ಮಿಲಿಟರಿ ಮಾದರಿಯ ಪರ್ಯಾಯ ಸೇನೆ ತಯಾರು ಮಾಡಿದ್ದ ಪಿಎಫ್ಐ
ಅಸಲಿಗೆ ಬ್ಯಾನ್ ಮುನ್ಸೂಚನೆಯಲ್ಲಿ ಪಿಎಫ್ ಐ ಮುಂದಿನ ತಂತ್ರಗಾರಿಕೆ ನಡೆಸಿತ್ತು ಎನ್ನಲಾಗಿದೆ.. ಈ ಹಿಂದೆ ಸೆಮಿ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಬ್ಯಾನ್ ಆದಾ ವಿಚಾರ ಮನದಟ್ಟು ಮಾಡಿಕೊಂಡಿದ್ದ ಮುಖಂಡರು ಅದೇ ಮಾದರಿ ಪಿಎಫ್ ಐ ಭವಿಷ್ಯದ ಬಗ್ಗೆಯೂ ಯೋಚಿಸಿದ್ದರು.. ಹಾಗಾಗಿ ಸದ್ದಿಲ್ಲದೇ ನಡೆದಿದೆ ಅಂಡರ್ ಗ್ರೌಂಡ್ ನಲ್ಲಿ ಕೆಲ ಸ್ಪೋಟಕ ತಂತ್ರಗಳನ್ನು ಎಣೆದಿದ್ದರು ಎನ್ನಲಾಗಿದೆ.. ಈ ವಿಚಾರದ ತನಿಖೆಗೆ ಮುಂದಾದ ಪೊಲೀಸರಿಗೆ ಮತ್ತೊಂದು ಶಾಕ್ ಹೊಡೆದಿದೆ. ಅಸಲಿಗೆ ರಾಷ್ಟ್ರದಲ್ಲಿ ಮತ್ತೆ ತಲೆಯತ್ತಲಿದೆಯಾ ಪಿಎಫ್ ಐ ನ ಮತ್ತೊಂದು ಮುಖ ಅನ್ನೋ ಸಂಶಯ ಶುರುವಾಗಿದೆ.. ಇದೆಕ್ಕೆ ಕಾರಣವಾಗಿದೆ ಆ ಐದು ಸಂಶಯಾಸ್ಪದ ಸಂಗತಿಗಳು.
ಪಿಎಫ್ ಐ ಐದು ವರ್ಷ ಬ್ಯಾನ್ ಆದ ಬಳಿಕ ಟಾರ್ಗೆಟ್ ಕಿಲ್ಲಿಂಗ್ ಎಂಬ ಟಾಸ್ಕ್ ಶುರುವಾಗಿದೆಯಂತೆ.. ಸ್ಲಿಪರ್ ಸೆಲ್ ಗಳಿಂದ ಸೈಲೆಂಟ್ ಆಗಿ ಪ್ರಾಜೆಕ್ಟ್ ಆರಂಭವಾಗಿದ್ದು, ಬಿಗ್ ಟಾಸ್ಕ್ ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.. ಯಾವುದೇ ಕೃತ್ಯಕ್ಕೂ ಪಿಎಫ್ ಐ ಕಡೆ ಬೆಟ್ಟು ಮಾಡಲಾಗುತಿತ್ತು.. ಆದರೀಗ ಪಿಎಫ್ ಐ ಬ್ಯಾನ್ ಆದ ಬಳಿಕ ಟಾರ್ಗೆಟ್ ಕಿಲ್ಲಿಂಗ್ ಶುರುವಾಗಿದೆ.. ಈ ವೇಳೆ ನಡೆಯುವ ಕೃತ್ಯಕ್ಕೆ ಯಾರ ಮೇಲೆ ಆರೋಪ ಹೊರಿಸುತ್ತಾರೆ ಅನ್ನೊ ತಂತ್ರದಲ್ಲಿ ಈ ಹೆಜ್ಜೆ ಎನ್ನಲಾಗಿದೆ.
ಸದ್ಯ ಬ್ಯಾನ್ ಆದ ಬಳಿಕ ಈ ಸ್ಲೀಪರ್ ಸೆಲ್ ನಿಂದ ಶುರುವಾಗಿದ ಟಾರ್ಗೆಟ್ ಕಿಲ್ಲಿಂಗ್ ಶುರುವಾಗಿದ್ದು, ತಮ್ಮದೇ ಪಟ್ಟಿಯನ್ನು ತಯಾರಿಸಿಕೊಳ್ಳುತ್ತಿದ್ದಾರೆ.. ಸದ್ಯದ ಬೆಳವಣಿಗೆಗಳ ಮುಖಾಂತರ ಮುಖಂಡರ ಟಾರ್ಗೆಟ್ ಪಟ್ಟಿ ರಚನೆ ಮಾಡಿ ಅಂಡರ್ ಗ್ರೌಂಡ್ ನಲ್ಲೇ ಕುಳಿತು ಸಂಚು ರೂಪಿಸುವ ತಂತ್ರ ಎಣೆಯಾಲಿದೆ ಎನ್ನಲಾಗಿದೆ.. ಹಾಗಾದರೇ ಟಾರ್ಗೆಟ್ ಕಿಲ್ಲರ್ಸ್ ಗಳ ಪಟ್ಟಿಯಲ್ಲಿ ಯಾರಿದ್ದಾರೆ..? ಸದ್ಯ ಸದ್ದಿಲ್ಲದೇ ಕ್ರಿಯೆಟ್ ಆದ ಟಾರ್ಗೆಟ್ ಕಿಲ್ಲರ್ಸ್ ನ ಬೇಸ್ ಯಾವುದು..? ಈ ವಿಚಾರಗಳಲ್ಲಿ ಪೊಲೀಸರಿಗೆ ತೀವ್ರ ಆತಂಕ ಸೃಷ್ಟಿಸಿದ್ದು, ಆ ಆಯಾಮದಲ್ಲಿ ಮುಂದಿನ ಸ್ಲೀಪರ್ ಸೆಲ್ ಗಳ ಆ್ಯಕ್ಟೀವಿಟಿಗಳ ಬಗ್ಗೆ ನಿಗಾವಹಿಸಿದ್ದಾರೆ ಎನ್ನಲಾಗಿದೆ..
SDPI ಸೇರಲಿದ್ದಾರಾ ಪಿಎಫ್ ಐ ಮಂದಿ..?
ಒಂದು ಕಡೆ ಟಾರ್ಗೆಟ್ ಕಿಲ್ಲರ್ಸ್ ಆತಂಕದ ನಡುವೆ ಮತ್ತೊಂದು ವಿಚಾರ ಸದ್ದು ಮಾಡುತ್ತಿದೆ.. ಸದ್ಯ ಪಿಎಫ್ ಐ ಬ್ಯಾನ್ ಆಗಿದೆ.. ಆದ್ರೆ ಸಂಘಟನೆಯಲ್ಲಿದ್ದವರ ಸಂಗತಿ ಏನು ಅನ್ನೊದು.. ಪೊಲೀಸ್ ಮೂಲಗಳಲ್ಲಿ ಪಿಎಫ್ ಐ ಅಂಗ ಸಂಸ್ಥೆಗೆ ಕಾರ್ಯಕರ್ತರು ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.. ಅದು ಕೇವಲ ತಾತ್ಕಾಲಿಕವಾಗಿ ಎಸ್ ಡಿಪಿಐ ಸೇರಲಿದ್ದಾರೆ.
ಇದನ್ನೂ ಓದಿ: ‘ಆರ್ಎಸ್ಎಸ್ ಎಚ್ಚರ, ನಾವು ಮರಳಿ ಬರುತ್ತೇವೆ’ ರಸ್ತೆ ಮೇಲೆ ಬರೆದು RSSಗೆ ವಾರ್ನಿಂಗ್ ಕೊಟ್ಟ ಪಿಎಫ್ಐ
ಪಿಎಫ್ ಐ ಪ್ಲೆಕ್ಸ್ ಬದಲಾಗಿ ಮುಂದೆ ಎಲ್ಲಾಕಡೆ ಎಸ್ ಡಿಪಿಐ ಫ್ಲೆಕ್ಸ್ ಗಳು ತಲೆ ಎತ್ತುವ ನಿರೀಕ್ಷೆ ಇದೆ.. ಸದ್ಯ ಐದು ವರ್ಷಗಳ ಪಿಎಫ್ ಐ ಬ್ಯಾನ್ ಹಿನ್ನಲೆ ಬಹುತೇಕ ಕಾರ್ಯಕರ್ತರು ಚದುರಿದ್ದಾರೆ.. ಅವರೆಲ್ಲರನ್ನೂ ಒಂದೆಡೆ ಸೇರಿಕೊಳ್ಳುವ ತಂತ್ರದಲ್ಲಿ ಮುಂದಿನ ಹೆಜ್ಜೆಯಲ್ಲಿದೆ ಅನ್ನಿ ಸಂಗತಿ ಕೇಳಿ ಬಂದಿದೆ..
ಬದಲಾದ ಮುಖಪುಟದಲ್ಲಿ ಮತ್ತೆ ಪಿಎಫ್ ಐ ಮುಖಂಡರು ಎಂಟ್ರಿ ಕೊಡುವ ಅನುಮಾನ ಪೊಲೀಸರಿಲ್ಲದೆ.. ಅಸಲಿಗೆ ಪಿಎಫ್ ಐ ಕಾರ್ಯಕ್ರಮಗಳಲ್ಲಿ ಮೇಲ್ನೊಟಕ್ಕೆ ಕಂಡ ನಾಯಕರೇ ಬೇರೆ.. ಆದರೆ ತೆರೆ ಮರೆಯಲ್ಲಿ ಆ್ಯಕ್ಟೀವ್ ಆಗಿರುವ ಅಸಲಿ ನಾಯಕರೇ ಬೇರೆ ಎನ್ನುತ್ತಿವೆ ಮೂಲಗಳು.. ಹೀಗಾಗೆ ಸದ್ಯ ತೆರೆ ಮೇಲೆ ಕಂಡವರಿಗೆ ಪೊಲೀಸರು ಖೆಡ್ಡಕೆ ಖೆಡವಿದ್ದಾರೆ.. ಆದ್ರೆ ಶೀಘ್ರದಲ್ಲೇ ತೆರೆ ಮರೆಯ ನಾಯಕರು ಮತ್ತೊಂದು ಸಂಘಟನೆ ಮೂಲಕ ರೀ ಎಂಟ್ರಿ ಕೊಡಲಿದ್ದು, ಅದಕ್ಕೆ ಕೆಲವೊಂದಿಷ್ಟು ವರ್ಷ ತಗಲಿದೆ.
ಅಸಲಿಗೆ ಕಾಣದಂತೆ ಕುಳಿತ ಆ ನಾಯಕರು ಸದ್ಯ ತಂತ್ರ ಹೆಣೆಯುತಿದ್ದು, ಹೊಸ ಸಂಘಟನೆಯ ಕಾರ್ಯಾಚರಣೆಗೆ ಮುಂದಾಗಿದ್ದಾರಂತೆ.. ಆ ನಿಟ್ಟಿನಲ್ಲಿ ಈಗ ಹೆಚ್ಚು ಸದ್ದು ಮಾಡಿದ್ದ ಪಿಎಫ್ ಐನ ಮುಖಂಡರನ್ನು ಹೊರತಾಗೆ ಬೇರೆ ಹೊಸ ನಾಯಕರ ಸೃಷ್ಟಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.. ಬಳಿಕ ಆ ನಾಯಕರ ಮೂಲಕ ಹೆಚ್ಚು ಪ್ರಭಾವ ಸೃಷ್ಟಿಸಿದ ನಂತರ ತಮ್ಮ ಕಂಟ್ರೋಲ್ ಗೆ ತೆಗೆದುಕೊಂಡು ಮುಂದಿನ ತಂತ್ರ ಹೆಣೆಯಲ್ಲಿದ್ದಾರೆ ತೆರೆಮರೆಯಲ್ಲಿರುವ ಮುಖಂಡರು ಅನ್ನೊ ಮಾತು ಕೇಳಿ ಬಂದಿದೆ..
ಪಿಎಫ್ ಐ ಐದು ವರ್ಷ ಬ್ಯಾನ್ ಆದೇಶದ ಬಳಿಕ ತಮ್ಮ ಸಮುದಾಯದ ಸಂಘಟನೆ ಚಿದ್ರವಾಗಿದ್ದು, ಎಲ್ಲರನ್ನೂ ಒಂದು ಗೂಡಿಸಲು ತೆರೆ ಮರೆಯ ಮುಖಂಡರು ಡಿಜಿಟಲ್ ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ.. ಅಂದ್ರೆ ಈ ಹಿಂದೆ ಪಿಎಫ್ ಐ ಸದಸ್ಯತ್ವ ಪಡೆದ ವೇಳೆ ಪ್ರತಿಯೊಬ್ಬರ ಮಾಹಿತಿ ಪಡೆಯಲಾಗಿತ್ತು.. ಅದು ಸಹ ನಂಬರ್ ಸಹಿತವಾಗಿ ಸಂಗ್ರಹಿಸಲಾಗಿತ್ತು.. ಇನ್ನು ಈ ಮಾಹಿತಿಗಳನ್ನು ಗೌಪ್ಯವಾಗಿಡಲಾಗಿದೆ.. ಮುಂದಿನ ದಿನಗಳಲ್ಲಿ ರೀ ಎಂಟ್ರಿ ವೇಳೆ ಈ ಡೇಟಾಗಳು ಸಹಾಯವಾಗಲಿದ್ದು, ಮುಂದಿನ ದಿನಗಳಲ್ಲಿ ನಿಧಾನವಾಗಿ ಮತ್ತೆ ಎಲ್ಲರೂ ಸಂಘಟಿತರಾಗಲಿದ್ದಾರೆ.. ಒಂದೇರಡು ವರ್ಷದಲ್ಲಿ ಈ ಡೇಟಾಗಳ ಮೂಲಕ ಎಲ್ಲರನ್ನೂ ಸಂಪರ್ಕಸಿ ಒಂದುಗೂಡುವ ಟಾರ್ಗೆಟ್ ಹಾಕಲಾಗಿದೆಯಂತೆ.. ಸಂಘಟನೆಯ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಚದುರಿದ ಎಲ್ಲರಿಗೂ ಸದ್ಯ ಭಯ ಕಾಡುತಿದೆಯಂತೆ.. ಹೀಗಾಗಿ ಯಾರಿಗ್ಯಾರು ಕಾಂಟ್ಯಾಕ್ಟ್ ಇಲ್ಲದಂತಾಗಿದೆ..
ಕಾರಣ ಪೊಲೀಸರ ಭಯ, ಬಂಧನದ ಭೀತಿಯಿಂದ ಎಷ್ಟರ ಮಟ್ಟಿಗೆ ಅಂದ್ರೆ ಕೆಲವರು ಸದ್ಯ ತಮಗೂ ಸಂಘಟನೆಗೂ ಸಂಬಂಧವಿಲ್ಲದಂತೆ ಉಳಿದರೆ, ಇನ್ನು ಕೆಲವರು ಬೇರೆ ಬೇರೆ ಕೆಲಸದಲ್ಲಿ ತೊಡಗಿದ್ದಾರೆ.. ಆದ್ರೆ ಅವರೆಲ್ಲರನ್ನು ಸಂಪರ್ಕಿಸಲಿರುವ ಸ್ಲೀಪರ್ ಸೆಲ್ ಮಂದಿ, ಅಂಡರ್ ಗ್ರೌಂಡ್ ನಲ್ಲಿದ್ದುಕೊಂಡೇ ನಿಧಾನವಾಗಿ ಸಂಪರ್ಕಕ್ಕೆ ಪಡೆಯಲಿದ್ದಾರಂತೆ.. ನಂತರ ನಾವಿದ್ದೇವೆಂದು ಭರವಸೆ ನೀಡುವ ಮುಖಾಂತರ ಸಂಘಟನೆಗೆ ಸೇರಿಸುವ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ.
ಇನ್ನು ರಿ ಯುನೈಟ್ ಆದ ಸಂಘಟಿತರಿಗೆ ತಮ್ಮ ಮುಂದಿನ ಕೆಲಸಗಳಿಗೆ ಫಂಡ್ ಅತ್ಯಗತ್ಯವಾಗಿದೆ.. ಫಂಡ್ ಗಾಗಿ ಕೆಲ ಮಹತ್ವ ತಂತ್ರ ಹೆಣದಿದ್ದು, ಸದ್ಯ ಅಂದು ಕೊಂಡಿರು ಹೆಜ್ಜೆಗಳು ಮುಂದಿನ ದಿನಗಳಲ್ಲಿ ನಡೆದರೆ, ಆ ಬಳಿಕ ದೊಡ್ಡ ಸಮಾವೇಶ ಮಾಡಲಿದ್ದಾರಂತೆ.. ಆದರೆ ಇದರ ಮೂಲ ಉದ್ದೇಶ ಹಣ ಸಂಗ್ರಹಿಸುವುದು ಎನ್ನಲಾಗಿದೆ.. ಸದ್ಯ ಪಿಎಫ್ ಐ ಬ್ಯಾನ್ ಆಗಿದೆ.. ಹೀಗಾಗೆ ಹೊಸ ಬ್ಯಾನರ್ ರಚನೆ ಮೂಲಕ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ..ಅಸಲಿಗೆ ಈ ಕಾರ್ಯಕ್ರಮಗಳು ಜಿಲ್ಲಾ ಹೆಡ್ ಕ್ವಾಟರ್ಸ್ ಗಳಲ್ಲಿ ನಡೆಯಲಿದ್ದು, ಈ ವೇಳೆ ಹಣದ ಹೊಳೆಯೇ ಹರಿದು ಬರುತ್ತೆ ಎನ್ನಲಾಗಿದೆ.
ಇನ್ನು ಈ ರೀತಿ ಬಂದ ದೊಡ್ಡ ಪ್ರಮಾಣದ ಹಣವನ್ನು ಮುಂದಿನ ತಂತ್ರಗಳಿಗೆ ಬಳಸಲಾಗುತ್ತದೆ.. ಆ ಹಣ ಬರುವ ದಾರಿ ಸದ್ಯ ಕ್ಲಿಷ್ಟವಾಗಿದ್ದು, ಈಗಾಗಲೇ ಇಷ್ಟು ಮಾಹಿತಿ ಸಂಗ್ರಹಿಸಿರೊ ಪೊಲೀಸರು ಈ ಎಲ್ಲಾ ಹಂತಗಳ ಮೇಲು ಕಣ್ಣಿಟ್ಟಿದ್ದಾರೆ.. ಆದ್ರೆ ಸದ್ಯ ಪೊಲೀಸರಿಗೆ ಕೇಳಿ ಬಂದ ಈ ಮಾಹಿತಿಯ ಮೂಲಕ ತನಿಖೆ ನಡೆಯುತಿದ್ದು, ಸ್ಲೀಪರ್ ಸೆಲ್ ಗಳು, ತೆರೆ ಮರೆಯ ಮುಖಂಡರ ತಂತ್ರಗಳಿಗೆ ಶಾಕ್ ನೀಡ್ತಾರಾ ಕಾದು ನೋಡಬೇಕಿದೆ..
ವರದಿ: ಕಿರಣ್ ಹೆಚ್ವಿ. ಟಿವಿ9