ಶಶಿಕಲಾ ನಟರಾಜನ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಅಮಾವಾಸ್ಯೆ ನಂತರ ತಮಿಳುನಾಡಿಗೆ ಗ್ರ್ಯಾಂಡ್ ಎಂಟ್ರಿ ನೀಡಲು ಸಿದ್ದತೆ?
ಆಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ 4 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಶಶಿಕಲಾ 27ನೇ ತಾರೀಖು ಜೈಲಿನಿಂದ ಬಿಡುಗಡೆಗೆ ಆದೇಶ ಹೊರಡಿಸಲಾಗಿತ್ತು.
ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಶಶಿಕಲಾ ನಟರಾಜನ್ ಇಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ 4 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಶಶಿಕಲಾ 27ನೇ ತಾರೀಖು ಜೈಲಿನಿಂದ ಬಿಡುಗಡೆಗೆ ಆದೇಶ ಹೊರಡಿಸಲಾಗಿತ್ತು. ಆದರೆ ಜೈಲಿನಲ್ಲಿದ್ದ ವೇಳೆ ಶಶಿಕಲಾ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಿಂದಾಗಿ ಇದೇ ತಿಂಗಳ 20 ರಂದು ಬೌರಿಂಗ್ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಬಳಿಕ ಸಿಟಿ ಸ್ಕ್ಯಾನ್ಗೆಂದು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿತ್ತು.
21ನೇ ತಾರೀಖು ಶಶಿಕಲಾ ಸ್ವಾಬ್ ಟೆಸ್ಟ್ ವೇಳೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ 27ನೇ ತಾರೀಖು ಜೈಲಿನಿಂದ ಬಿಡುಗಡೆಯಾದರು ಶಶಿಕಲಾ ಆಸ್ಪತ್ರೆಯಲ್ಲಿ ಉಳಿಯಬೇಕಾಯಿತು. ಸದ್ಯ ಕೊವಿಡ್ ಪ್ರೊಟೊಕಾಲ್ ಪ್ರಕಾರ ಚಿಕಿತ್ಸೆ ಪೂರ್ಣಗೊಂಡಿರುವುದರಿಂದ ಇಂದು ಆಸ್ಪತ್ರೆಯಿಂದ ಶಶಿಕಲಾ ಡಿಸ್ಚಾರ್ಜ್ ಆಗಿದ್ದಾರೆ.
ಅಮಾವಾಸ್ಯೆ ನಂತರ ತಮಿಳುನಾಡಿಗೆ ಗ್ರ್ಯಾಂಡ್ ಎಂಟ್ರಿ.. ಸದ್ಯ ಪುಷ್ಯ ಮಾಸ ನಡೆಯುತ್ತಿದ್ದು ಫೆಬ್ರವರಿ ಹನ್ನೊಂದರ ನಂತರ ಮಾಘಮಾಸ ಶುರುವಾಗಲಿದೆ. ಹೀಗಾಗಿ ಅಮಾವಾಸ್ಯೆ ನಂತರ ತಮಿಳುನಾಡಿಗೆ ಗ್ರ್ಯಾಂಡ್ ಎಂಟ್ರಿ ನೀಡಲು ಶಶಿಕಲಾ ತಯಾರಿ ನಡೆಸಿದ್ದಾರೆಂದು ಆಪ್ತ ಮೂಲಗಳಿಂದ ಮಾಹಿತಿ ದೊರೆತಿದೆ. ಮಾಘಮಾಸದಲ್ಲಿ ಎಂಟ್ರಿಯಾದ್ರೆ ಶುಭವಾಗಲಿದೆ ಅನ್ನೋ ನಂಬಿಕೆಯಿಂದಾಗಿ ಈ ತೀರ್ಮಾನಕ್ಕೆ ಬರಲಾಗಿದೆ.
ಫೆಬ್ರವರಿ ಹನ್ನೊಂದರ ನಂತರ ಅದ್ದೂರಿ ಮೇರವಣಿಗೆ ಮೂಲಕ ತವರಿಗೆ ಮರಳಲು ಶಶಿಕಲಾ ಮತ್ತು ಆಪ್ತರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಬೇಕಾದ ಪೂರಕ ಸಿದ್ದತೆ ನಡೆಸಿ, ಅಮಾವಾಸ್ಯೆ ನಂತರ ನಿರ್ದಿಷ್ಟ ದಿನಾಂಕ ನಿಗದಿ ಮಾಡಿ ತಮಿಳುನಾಡಿಗೆ ಎಂಟ್ರಿಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹೊಸೂರು, ಅಥವಾ ಬೆಂಗಳೂರಿನ ಅಪ್ತರ ಐಷಾರಾಮಿ ಮನೆಯಲ್ಲಿ ಶಶಿಕಲಾ ವಾಸ್ತವ್ಯ ಹೂಡಲಿದ್ದಾರೆ.
ಶಶಿಕಲಾಗೆ ಪ್ರಜ್ಞೆ ಬಂದಿದೆ, ಚೇತರಿಸಿಕೊಳ್ಳುತ್ತಿದ್ದಾರೆ -ವಿಕ್ಟೋರಿಯಾ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
Published On - 12:37 pm, Sun, 31 January 21