8 ಬಾರಿ ಗೆದ್ದರೂ ಸತೀಶ್ ಮಹಾನಾರಿಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಇಲ್ಲಿದೆ ಕಾರಣ; ಕೆಲವೇ ದಿನಗಳಲ್ಲಿ ಅವರಿಗೆ ಕಾದಿದೆ ಗುಡ್​ ನ್ಯೂಸ್​ !

| Updated By: Lakshmi Hegde

Updated on: Mar 26, 2022 | 9:15 AM

ಉತ್ತರ ಪ್ರದೇಶದಲ್ಲಿ ಕಳೆದ ಅವಧಿಗೆ ಹೃದಯ ನಾರಾಯಣ ದೀಕ್ಷಿತ್​ ಅವರು ವಿಧಾನಸಭೆ ಅಧ್ಯಕ್ಷರಾಗಿದ್ದರು. ಈ ಅವಧಿಗೆ ಸ್ಪೀಕರ್ ಸ್ಥಾನಕ್ಕೆ ಸತೀಶ್​ ಮಹಾನಾ ನೇಮಕವಾಗಲಿದ್ದಾರೆ ಎಂದು ಹೇಳಲಾಗಿದೆ.

8 ಬಾರಿ ಗೆದ್ದರೂ ಸತೀಶ್ ಮಹಾನಾರಿಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಇಲ್ಲಿದೆ ಕಾರಣ; ಕೆಲವೇ ದಿನಗಳಲ್ಲಿ ಅವರಿಗೆ ಕಾದಿದೆ ಗುಡ್​ ನ್ಯೂಸ್​ !
ಸತೀಶ್​ ಮಹಾನಾ
Follow us on

ಉತ್ತರ ಪ್ರದೇಶದಲ್ಲಿ (Uttar Pradesh) ನಿನ್ನೆ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ (Yogi Adityanath) ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹಾಗೇ ಬಿಜೆಪಿ ನಾಯಕ, ಎಂಟು ಬಾರಿ ಗೆದ್ದು ಶಾಸಕರಾಗಿರುವ ಸತೀಶ್​ ಮಹಾನಾ ಈ ಬಾರಿ ಉತ್ತರ ಪ್ರದೇಶ ವಿಧಾನಸಭೆಯ ಹೊಸ ಸ್ಪೀಕರ್​ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸತೀಶ್​ ಮಹಾನಾ ಎಂಟು ಬಾರಿ ಶಾಸಕರಾದರೂ ನಿನ್ನೆ ಅವರು ಸಚಿವರಾಗಿ ಸಂಪುಟ ಸೇರಲಿಲ್ಲ. ಈ ಮಧ್ಯೆ ಇಂದು ಹಂಗಾಮಿ ಸ್ಪೀಕರ್​ ರಾಮಪತಿ ಶಾಸ್ತ್ರಿಯವರಿಗೆ ರಾಜ್ಯಪಾಲೆ ಆನಂದಿಬೆನ್​ ಪಟೇಲ್​ ಪ್ರಮಾಣವಚನ ಬೋಧಿಸುವರು. ಹೊಸದಾಗಿ ಶಾಸಕರಾದವರೆಲ್ಲ ಮಾರ್ಚ್​ 28 ಮತ್ತು 29ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಸತೀಶ್​ ಮಹಾನಾ ಮೊದಲ ಅವಧಿಯ ಬಿಜೆಪಿ ಸರ್ಕಾರದಲ್ಲಿ ಉದ್ಯಮ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದರು. ಮಾರ್ಚ್​ 30ರಂದು ವಿಧಾನಸಭೆಯಲ್ಲಿ ಇವರನ್ನೇ ಸ್ಪೀಕರ್​ ಆಗಿ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದಲ್ಲಿ ಕಳೆದ ಅವಧಿಗೆ ಹೃದಯ ನಾರಾಯಣ ದೀಕ್ಷಿತ್​ ಅವರು ವಿಧಾನಸಭೆ ಅಧ್ಯಕ್ಷರಾಗಿದ್ದರು. ಈ ಅವಧಿಗೆ ಸ್ಪೀಕರ್ ಸ್ಥಾನಕ್ಕೆ ಸತೀಶ್​ ಮಹಾನಾ ನೇಮಕವಾಗಲಿದ್ದಾರೆ ಎಂದು ಹೇಳಲಾಗಿದೆ. ಯೋಗಿ ಆದಿತ್ಯನಾಥ್​ ಸಂಪುಟದ ಸಚಿವರ ಮೊದಲ ಪಟ್ಟಿ ನಿನ್ನೆ ಹೊರಬಿದ್ದಾಗ ಸತೀಶ್ ಮಹಾನಾ ಹೆಸರು ಇರಲಿಲ್ಲ. 8 ಬಾರಿ ಶಾಸಕರಾದರೂ ಅವರನ್ನು ಕೈಬಿಟ್ಟಿದ್ದೇಕೆ ಎಂಬ ಚರ್ಚೆ ಶುರುವಾದ ಬೆನಲ್ಲೇ, ಅವರು ವಿಧಾನಸಭೆ ಅಧ್ಯಕ್ಷರಾಗಿ ನೇಮಕಗೊಳ್ಳುವರು ಎಂಬ ಮಾಹಿತಿ ಹೊರಬಿದ್ದಿದೆ.

ಸತೀಶ್​ ಮಹಾನಾ ಅವರು 1991ರಿಂದಲೂ ಸತತವಾಗಿ ಗೆಲ್ಲುತ್ತಿದ್ದಾರೆ. ಈ ಬಾರಿ 8ನೇ ಬಾರಿಗೆ ಗೆದ್ದಿದ್ದಾರೆ. 1991ರಿಂದ 5  ಅವಧಿಗೆ ಕಾನ್ಪುರ ಕಂಟೋನ್ಮೆಂಟ್​ ಕ್ಷೇತ್ರದಿಂದ ಗೆದ್ದಿದ್ದರು. ಅದಾದ ಬಳಿಕ 2012ರಿಂದ ಇಲ್ಲಿಯವರೆಗೆ ಮೂರು ಅವಧಿಗೆ ಮಹಾರಾಜ್​ಪುರ ವಿಧಾನಸಭೆ ಕ್ಷೇತ್ರದಿಂದ ಗೆಲ್ಲುತ್ತಿದ್ದಾರೆ. ಅಂದಹಾಗೇ ಈ ಬಾರಿ ಮಹಾರಾಜ್​ಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಫಟೇಹ್​ ಬಹದ್ದೂರ್​ ಗಿಲ್​ ವಿರುದ್ಧ 80 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು.

ಇದನ್ನೂ ಓದಿ: 21 ಸಚಿವರನ್ನು ಉಳಿಸಿ 22 ಸಚಿವರನ್ನು ಕೈ ಬಿಟ್ಟ ಯೋಗಿ ಆದಿತ್ಯನಾಥ; ಸಚಿವ ಸಂಪುಟದಲ್ಲಿ 31 ಹೊಸಬರು, ಐವರು ಮಹಿಳೆಯರು

Published On - 9:12 am, Sat, 26 March 22