SBI Clerk Admit Card 2021: ಎಸ್ಬಿಐ ಕ್ಲರ್ಕ್ ಪ್ರಾಥಮಿಕ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ; ಡೌನ್ಲೋಡ್ ಮಾಡಿಕೊಳ್ಳುವ ವಿಧಾನ ಹೀಗಿದೆ..
ಲೇಹ್ ಮತ್ತು ಕಾರ್ಗಿಲ್ ವ್ಯಾಲಿಯಿಂದ ಎಸ್ಬಿಐ ಕ್ಲರ್ಕ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರಿಗೆ ಸದ್ಯ ಅಡ್ಮಿಟ್ ಕಾರ್ಡ್ ಬಿಡುಗಡೆಯಾಗಿಲ್ಲ. ಇವಿಷ್ಟು ಪ್ರದೇಶಗಳನ್ನು ಹೊರತುಪಡಿಸಿ ಬೇರೆಲ್ಲರ ಪ್ರವೇಶ ಪತ್ರ ಲಭ್ಯವಿದೆ.
ದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ-SBI) ಜ್ಯೂನಿಯರ್ ಅಸೋಸಿಯೇಟ್ಸ್ಗಳ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಎಸ್ಬಿಐ ಕ್ಲರ್ಕ್ ಹುದ್ದೆಗೆ ನಡೆಸಲಾಗುವ ಪ್ರಾಥಮಿಕ ಪರೀಕ್ಷೆ ದೇಶಾದ್ಯಂತ ವಿವಿಧ ಸೆಂಟರ್ಗಳಲ್ಲಿ ಜೂ.10,11, 12 ಮತ್ತು 13ರಂದು ನಡೆಯಲಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಎಸ್ಬಿಐ ವೆಬ್ಸೈಟ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಪರೀಕ್ಷಾರ್ಥಿಗಳು ತಮ್ಮ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಅನುಸರಿಸಬೇಕಾದ ವಿಧಾನಗಳು ಇಲ್ಲಿವೆ..
1.ಮೊದಲು ಎಸ್ಬಿಐ (SBI) ವೆಬ್ಸೈಟ್ sbi.co.in ಭೇಟಿ ಕೊಡಿ. 2. ಆ ವೆಬ್ಸೈಟ್ನಲ್ಲಿ ಲಭ್ಯವಿರುವ SBI Clerk Admit Card 2021 ಪ್ರಿಲಿಮ್ಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ 3. ಅದರಲ್ಲಿ ನಿಮ್ಮ ಲಾಗಿನ್ ವಿವರವನ್ನು ಸಲ್ಲಿಸಿ, ಸಬ್ಮಿಟ್ ಮಾಡಿ. 4. ಸ್ಕ್ರೀನ್ ಮೇಲೆ ನಿಮ್ಮ ಪ್ರವೇಶ ಪತ್ರ ಕಾಣಿಸುತ್ತದೆ 5. ಆ ಪ್ರವೇಶ ಪತ್ರದ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ. 6. ಅಡ್ಮಿಟ್ ಕಾರ್ಡ್ನ ಹಾರ್ಡ್ ಕಾಪಿಯನ್ನೂ ಒಂದನ್ನು ತೆಗೆದಿಟ್ಟುಕೊಳ್ಳಿ.
ಈ ಬಾರಿ ಲಡಾಖ್, ಲೇಹ್ ಮತ್ತು ಕಾರ್ಗಿಲ್ ವ್ಯಾಲಿಯಿಂದ ಎಸ್ಬಿಐ ಕ್ಲರ್ಕ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರಿಗೆ ಸದ್ಯ ಅಡ್ಮಿಟ್ ಕಾರ್ಡ್ ಬಿಡುಗಡೆಯಾಗಿಲ್ಲ. ಇವಿಷ್ಟು ಪ್ರದೇಶಗಳನ್ನು ಹೊರತುಪಡಿಸಿ ಬೇರೆಲ್ಲರ ಪ್ರವೇಶ ಪತ್ರ ಲಭ್ಯವಿದೆ. ಲಡಾಖ್, ಲೇಹ್ ಮತ್ತು ಕಾರ್ಗಿಲ್ ಕಣಿವೆ ಪರೀಕ್ಷಾರ್ಥಿಗಳು ಮುಂದಿನ ಸೂಚನೆವರೆಗೆ ಕಾಯಬೇಕಿದೆ.
ಇದನ್ನೂ ಓದಿ: Social Media Day 2021: ಸಾಮಾಜಿಕ ಮಾಧ್ಯಮ ದಿನದ ಇತಿಹಾಸದ ಜತೆಗೆ ಪ್ರಾಮುಖ್ಯತೆಯನ್ನು ತಿಳಿಯಿರಿ
(SBI clerk admit card 2021 released Check here to know how to download)
Published On - 10:39 am, Wed, 30 June 21