ಕೊವಿಡ್​ನಿಂದ ಸಾಯುವ ಭಯ ಇದೆ ಎಂದು ನಿರೀಕ್ಷಣಾ ಜಾಮೀನು ನೀಡಬಾರದು: ಸುಪ್ರೀಂಕೋರ್ಟ್

|

Updated on: May 25, 2021 | 7:14 PM

ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸಾವಿನ ಭೀತಿ ನಿರೀಕ್ಷಿತ. ಜಾಮೀನು ನೀಡಲು ಇದನ್ನು ಪರಿಗಣಿಸಬಹುದು ಎಂದು ಮೇ 10 ರಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ಮೋಸ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಭಾವ್ಯ ಬಂಧನವನ್ನು ಎದುರಿಸುತ್ತಿದ್ದ ಪ್ರತೀಕ್ ಜೈನ್ ಎಂಬ ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ ನ್ಯಾಯಾಲಯ ಈ ಅಭಿಪ್ರಾಯವನ್ನು ನೀಡಿದೆ.

ಕೊವಿಡ್​ನಿಂದ ಸಾಯುವ ಭಯ ಇದೆ ಎಂದು ನಿರೀಕ್ಷಣಾ ಜಾಮೀನು ನೀಡಬಾರದು: ಸುಪ್ರೀಂಕೋರ್ಟ್
ಸುಪ್ರೀಂ​ ಕೋರ್ಟ್
Follow us on

ದೆಹಲಿ: ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸಾವಿನ ಭೀತಿ ಇದೆ ಎಂದು ನಿರೀಕ್ಷಣಾ ಜಾಮೀನು ನೀಡಬಹುದು ಎಂದು ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಮಂಗಳವಾರ ತಡೆಹಿಡಿದಿದೆ.  ಲೈವ್ ಲಾ ವರದಿ ಪ್ರಕಾರ ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಬಿ.ಆರ್. ಗವಾಯಿ ಅವರ ರಜಾ ನ್ಯಾಯಪೀಠ, ನ್ಯಾಯಾಲಯಗಳು ಜಾಮೀನುಗಳನ್ನು ಪರಿಗಣಿಸುವಾಗ ಅವಲೋಕನಗಳನ್ನು ಪರಿಗಣಿಸಬಾರದು. ಅವರು ಈ ಪ್ರಕರಣವನ್ನು ಸತ್ಯ ಮತ್ತು ಸಂದರ್ಭಗಳ ಮೇಲೆ ಪರಿಗಣಿಸಬೇಕು ಎಂದು ಹೇಳಿದರು.

ನಿರೀಕ್ಷಣಾ ಜಾಮೀನು ನೀಡಲು ಕೊವಿಡ್ -19 ಮಾತ್ರ ಕಾರಣವಾಗಬಹುದೇ ಎಂಬ ವಿಷಯದ ಕುರಿತು ನ್ಯಾಯಾಲಯದ ತೀರ್ಮಾನಕ್ಕೆ ಸಹಾಯ ಮಾಡಲು ಸುಪ್ರೀಂ ಕೋರ್ಟ್ ಹಿರಿಯ ವಕೀಲ ವಿ ಗಿರಿ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿತು.

ಉತ್ತರ ಪ್ರದೇಶದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದ ಆಲಿಸಿದ ನಂತರ ಈ ಆದೇಶವು ಬಂದಿದೆ. ಉತ್ತರ ಪ್ರದೇಶವು ಹೈಕೋರ್ಟ್‌ನ ಬೀಸು ಹೇಳಿಕೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ನಿರೀಕ್ಷಣಾ ಜಾಮೀನು ಕೋರಿರುವ ವ್ಯಕ್ತಿಯೊಬ್ಬರ ಮೇಲೆ 130 ಕ್ರಿಮಿನಲ್ ಪ್ರಕರಣಗಳಿವೆ ಎಂದು ಉತ್ತರಪ್ರದೇಶ ಹೇಳಿತ್ತು. ಇದನ್ನು ಅನುಸರಿಸಿ, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ನಿರೀಕ್ಷಣಾ ಜಾಮೀನು ನೀಡುವ ಪೂರ್ವನಿದರ್ಶನವಾಗಿ ಬಳಸಲಾಗುವುದಿಲ್ಲ ಎಂದು ನ್ಯಾಯಪೀಠ ಆದೇಶಿಸಿತು. ಅಂತಹ ಸಂದರ್ಭಗಳಲ್ಲಿ ವೈಯಕ್ತಿಕ ಸಂಗತಿಗಳು ಮತ್ತು ಸಂದರ್ಭಗಳನ್ನು ಪರಿಗಣಿಸುವಂತೆ ನ್ಯಾಯಾಲಯಗಳನ್ನು ಒತ್ತಾಯಿಸಿತು.

ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸಾವಿನ ಭೀತಿ ನಿರೀಕ್ಷಿತ. ಜಾಮೀನು ನೀಡಲು ಇದನ್ನು ಪರಿಗಣಿಸಬಹುದು ಎಂದು ಮೇ 10 ರಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ಮೋಸ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಭಾವ್ಯ ಬಂಧನವನ್ನು ಎದುರಿಸುತ್ತಿದ್ದ ಪ್ರತೀಕ್ ಜೈನ್ ಎಂಬ ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ ನ್ಯಾಯಾಲಯ ಈ ಅಭಿಪ್ರಾಯವನ್ನು ನೀಡಿದೆ.

ಇದನ್ನೂ ಓದಿ:ಚುನಾವಣೋತ್ತರ ಹಿಂಸಾಚಾರ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಕೋರ್ಟ್​ಗಳು ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಆದೇಶ ನೀಡಬಾರದು; ಸುಪ್ರೀಂಕೋರ್ಟ್