ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿಚಾರ; ಆಗಸ್ಟ್ 10ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Jul 26, 2022 | 1:37 PM

ತಮಿಳುನಾಡಿನ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಕಳೆದ ವಾರ ಚರ್ಚೆ ಮತ್ತು ಇತರ ಪ್ರಕ್ರಿಯೆ ಸಲ್ಲಿಸುವಂತೆ CWMAಗೆ ನೋಟಿಸ್ ನೀಡಿತ್ತು.

ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿಚಾರ; ಆಗಸ್ಟ್ 10ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us on

ಮೇಕೆದಾಟು ಅಣೆಕಟ್ಟಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಗೆ (Detailed Project Report – DPR) ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು (Cauvery Water Management Authority – CWMA) ಒಪ್ಪಿಗೆ ನೀಡುವ ಕುರಿತು ತಮಿಳುನಾಡು ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 10ಕ್ಕೆ ಮುಂದೂಡಿದೆ. ಮೇಕೆದಾಟು ಯೋಜನೆಯ ಡಿಪಿಆರ್​​ಗೆ ಒಪ್ಪಿಗೆ ನೀಡದಂತೆ CWMA ಸೂಚಿಸಬೇಕು ಎಂದು ತಮಿಳುನಾಡು ಸರ್ಕಾರವು ಕೋರಿದೆ. ಸುಪ್ರೀಂಕೋರ್ಟ್​​ನಲ್ಲಿ ಮೂಲ ಅರ್ಜಿ ಇನ್ನೂ ಬಾಕಿ ಇದ್ದು ಅದು ಇತ್ಯರ್ಥ ಆಗುವವರೆಗೆ ಮೇಕೆದಾಟು ಯೋಜನೆಗೆ CWMA ಒಪ್ಪಿಗೆ ಕೊಡಬಾರದು ಎಂದು ಕೋರಿದೆ. ತಮಿಳುನಾಡಿನ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಕಳೆದ ವಾರ ಚರ್ಚೆ ಮತ್ತು ಇತರ ಪ್ರಕ್ರಿಯೆ ಸಲ್ಲಿಸುವಂತೆ CWMAಗೆ ನೋಟಿಸ್ ನೀಡಿತ್ತು.

ಬಿಬಿಎಂಪಿ ಚುನಾವಣೆ ಕುರಿತ ಅರ್ಜಿ ವಿಚಾರಣೆ ಮುಂದೂಡಿಕೆ
ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ  ಇಂದು (ಮಂಗಳವಾರ) ಎಂಟು ವಾರಗಳ ಗಡುವು ಅಂತ್ಯವಾದ ಹಿನ್ನಲೆಯಲ್ಲಿ ನ್ಯಾಯಮೂರ್ತಿ ಎ.ಎಂ.ಕಾನ್ವಿಲ್ಕರ್ ನೇತೃತ್ವದ ಪೀಠ ವಿಚಾರಣೆ ನಡೆಸಿದ್ದು, ಜುಲೈ 28ಕ್ಕೆ ವಿಚಾರಣೆ ಮುಂದೂಡಿದೆ. ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡನೆಯಾದರೂ ಮೀಸಲಾತಿ ನಿಗದಿಪಡಿಸಿ ಈವರೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿಲ್ಲ.

Published On - 1:27 pm, Tue, 26 July 22