Viral Video:‘ನಾನು ಇಂಜೆಕ್ಷನ್​ ತೆಗೆದುಕೊಳ್ಳೋದಿಲ್ಲ..’- ಲಸಿಕೆ ಕೊಡಲು ಬಂದವರನ್ನು ನೋಡಿ ಭಯದಿಂದ ದೊಡ್ಡ ಡ್ರಮ್​​ನ ಹಿಂದೆ ಅಡಗಿ ಕುಳಿತ ಅಜ್ಜಿ..

| Updated By: Lakshmi Hegde

Updated on: Jun 03, 2021 | 5:08 PM

ಕೊವಿಡ್ 19 ಲಸಿಕೆ ಅಭಿಯಾದ ದೇಶಾದ್ಯಂತ ನಡೆಯುತ್ತಿದೆ. ಆದರೆ ಕೆಲವು ಹಿಂದುಳಿದ ಹಳ್ಳಿಗಳಲ್ಲಿ ವಾಸವಾಗಿರುವ ಹಿರಿಯ ನಾಗರಿಕರಿಗೆ ಲಸಿಕೆ ಬಗ್ಗೆ ಇನ್ನೂ ಸರಿಯಾಗಿ ಅರಿವು ಮೂಡಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಇದೀಗ ವಿಡಿಯೋವೊಂದು ವೈರಲ್ ಆಗುತ್ತಿದೆ. ಕೊವಿಡ್​ 19 ಲಸಿಕೆಯ ಮಹತ್ವ ಏನು? ಯಾಕಾಗಿ ತೆಗೆದುಕೊಳ್ಳಬೇಕು ಎಂಬುದಿನ್ನೂ ಅವರಿಗೆ ಸ್ಪಷ್ಟವಾಗಿಲ್ಲ. ಕೊವಿಡ್ ಲಸಿಕೆ ನೀಡಲು ಬಂದವರನ್ನು ನೋಡಿ ಭಯಪಟ್ಟು, ದೊಡ್ಡ ಡ್ರಮ್​​ನ ಹಿಂದೆ ಅಡಗಿ ಕುಳಿತ ಅಜ್ಜಿಯ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಘಟನೆ […]

Viral Video:‘ನಾನು ಇಂಜೆಕ್ಷನ್​ ತೆಗೆದುಕೊಳ್ಳೋದಿಲ್ಲ..’- ಲಸಿಕೆ ಕೊಡಲು ಬಂದವರನ್ನು ನೋಡಿ ಭಯದಿಂದ ದೊಡ್ಡ ಡ್ರಮ್​​ನ ಹಿಂದೆ ಅಡಗಿ ಕುಳಿತ ಅಜ್ಜಿ..
ಡ್ರಮ್​ ಹಿಂದೆ ಅಡಗಿ ಕುಳಿತ ವೃದ್ಧೆ
Follow us on

ಕೊವಿಡ್ 19 ಲಸಿಕೆ ಅಭಿಯಾದ ದೇಶಾದ್ಯಂತ ನಡೆಯುತ್ತಿದೆ. ಆದರೆ ಕೆಲವು ಹಿಂದುಳಿದ ಹಳ್ಳಿಗಳಲ್ಲಿ ವಾಸವಾಗಿರುವ ಹಿರಿಯ ನಾಗರಿಕರಿಗೆ ಲಸಿಕೆ ಬಗ್ಗೆ ಇನ್ನೂ ಸರಿಯಾಗಿ ಅರಿವು ಮೂಡಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಇದೀಗ ವಿಡಿಯೋವೊಂದು ವೈರಲ್ ಆಗುತ್ತಿದೆ. ಕೊವಿಡ್​ 19 ಲಸಿಕೆಯ ಮಹತ್ವ ಏನು? ಯಾಕಾಗಿ ತೆಗೆದುಕೊಳ್ಳಬೇಕು ಎಂಬುದಿನ್ನೂ ಅವರಿಗೆ ಸ್ಪಷ್ಟವಾಗಿಲ್ಲ. ಕೊವಿಡ್ ಲಸಿಕೆ ನೀಡಲು ಬಂದವರನ್ನು ನೋಡಿ ಭಯಪಟ್ಟು, ದೊಡ್ಡ ಡ್ರಮ್​​ನ ಹಿಂದೆ ಅಡಗಿ ಕುಳಿತ ಅಜ್ಜಿಯ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.

ಘಟನೆ ನಡೆದಿದ್ದು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ. ಅಲ್ಲಿನ ಬಿಜೆಪಿ ಶಾಸಕಿ ಸರಿತಾ ಭದೌರಿಯಾ ಅವರು ಆರೋಘ್ಯ ಇಲಾಖೆ ಸಿಬ್ಬಂದಿಯೊಂದಿಗೆ ಕೊವಿಡ್ 19 ಲಸಿಕೆ ಅಭಿಯಾನಕ್ಕಾಗಿ ಚಂದ್ರಾಪುರ ಗ್ರಾಮಕ್ಕೆ ಹೋಗಿದ್ದರು. ಮೊದಲು ಗ್ರಾಮದ ಹರ್​ದೇವಿ ಎಂಬುವರ ಮನೆಗೆ ಹೋಗದರು. ಆದರೆ ಅವರನ್ನು ನೋಡುತ್ತಿದ್ದಂತೆ ಹೆದರಿದ ಹರ್​​ದೇವಿ ಮೊದಲು ಬಾಗಿಲ ಹಿಂದೆ ಅಡಗಿದರು. ಆದರೂ ಆರೋಗ್ಯ ಸಿಬ್ಬಂದಿ ಅವರಿಗೆ ತಿಳಿವಳಿಕೆ ನೀಡಿ, ಲಸಿಕೆ ನೀಡಲು ಮುಂದಾದರು. ಅದನ್ನು ನೋಡುತ್ತಿದ್ದಂತೆ ಮತ್ತಷ್ಟು ಹೆದರಿದ ಅಜ್ಜಿ ಅಲ್ಲಿಯೇ ಇದ್ದ ದೊಡ್ಡ ಡ್ರಮ್​​ನ ಹಿಂದೆ ಅಡಗಿ ಕುಳಿತಿದ್ದಾರೆ. ಅದನ್ನು ನೋಡಿದ ಆರೋಗ್ಯ ಸಿಬ್ಬಂದಿಯೊಬ್ಬ ಅಮ್ಮ ಹೊರಗೆ ಬನ್ನಿ ಎಂದು ಕರೆದಿದ್ದಾರೆ. ಆದರೆ ಒಪ್ಪಲಿಲ್ಲ..ಆಗ ಅಲ್ಲಿಗೆ ಹೋದ ವೈದ್ಯೆಯೊಬ್ಬರು, ನಾವು ನಿಮಗೆ ಇಂಜೆಕ್ಷನ್​ ಕೊಡಲು ಬಂದಿಲ್ಲ. ಹೊರಗೆ ಬನ್ನಿ ಎಂದು ಕರೆದುಕೊಂಡು ಬಂದಿದ್ದಾರೆ.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಇದು ನೋಡಲು ತುಂಬ ಫನ್ನಿ ಎನ್ನಿಸಿದರೂ ಒಂದು ದುರಂತವೇ ಸರಿ. ಹಳ್ಳಿಗಳ ಜನರಿಗೆ ಲಸಿಕೆ ಬಗ್ಗೆ ಸರಿಯಾಗಿ ಅರಿವು ಮೂಡಲಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

 

ಇದನ್ನೂ ಓದಿ: ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ShameOnYouSamantha; ಬ್ಯಾನ್​ ಆಗಲಿದೆಯೇ ‘ದಿ ಫ್ಯಾಮಿಲಿ ಮ್ಯಾನ್​ 2’?