George Fernandes ದಬ್ಬಾಳಿಕೆ ವಿರುದ್ಧ ಸದಾ ಬಂಡೇಳುತ್ತಿದ್ದ ಜಾರ್ಜ್​ ಫರ್ನಾಂಡಿಸ್ ಬದುಕಿನ ಅಪರೂಪದ ಪುಟಗಳಿವು

George Fernandes ದಬ್ಬಾಳಿಕೆ ವಿರುದ್ಧ ಸದಾ ಬಂಡೇಳುತ್ತಿದ್ದ ಜಾರ್ಜ್​ ಫರ್ನಾಂಡಿಸ್ ಬದುಕಿನ ಅಪರೂಪದ ಪುಟಗಳಿವು
ಜಾರ್ಜ್ ಫರ್ನಾಂಡಿಸ್

George Fernandes Birth Anniversary: ನಾಗರಿಕ ಸ್ವಾತಂತ್ರ್ಯ ಸೇರಿದಂತೆ ಎಲ್ಲವನ್ನೂ ನಿಗ್ರಹಿಸಿದಾಗ ತುರ್ತು ಪರಿಸ್ಥಿತಿ ದಿನಗಳಲ್ಲಿ ಜಾರ್ಜ್ ಫರ್ನಾಂಡೀಸ್ ನಾಯಕನಾಗಿ ಹೊರಹೊಮ್ಮಿದರು. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ದಿನಗಳಲ್ಲಿ ನಾಗರಿಕ ಹಕ್ಕುಗಳನ್ನು ನಿರಾಕರಿಸುವ ದೃಷ್ಟಿ ಅವರೊಳಗೆ ಕ್ರಾಂತಿಯಕಿಡಿಯವನ್ನು ಹುಟ್ಟುಹಾಕಿತು.

TV9kannada Web Team

| Edited By: Rashmi Kallakatta

Jun 03, 2021 | 5:04 PM

ದೆಹಲಿ: ಜಾರ್ಜ್ ಫರ್ನಾಂಡಿಸ್ ಭಾರತೀಯ ಕಾರ್ಮಿಕ ನಾಯಕ, ರಾಜಕಾರಣಿ, ಪತ್ರಕರ್ತ ಮತ್ತು ಸ್ವಲ್ಪ ಸಮಯದವರೆಗೆ ಬಿಹಾರದಿಂದ ರಾಜ್ಯಸಭೆಯ ಸದಸ್ಯರಾಗಿದ್ದರು ಮತ್ತು ಲೋಕಸಭಾ ಸದಸ್ಯರಾಗಿದ್ದರು. ಅವರು 3 ಜೂನ್ 1930 ರಂದು ಜನಿಸಿದರು. ಅವರು ಜನತಾದಳದ ಪ್ರಮುಖ ಸದಸ್ಯರಾಗಿದ್ದ ಅವರು ಸಮತಾ ಪಕ್ಷದ ಸ್ಥಾಪಕರಾಗಿದ್ದರು. ಸಂವಹನ, ಕೈಗಾರಿಕೆ, ರೈಲ್ವೆ ಮತ್ತು ರಕ್ಷಣಾ ಸೇರಿದಂತೆ ಹಲವಾರು ಸಚಿವ ಸ್ಥಾನಗಳನ್ನು ನಿಭಾಯಿಸಿದ್ದ ಜಾರ್ಜ್ ಫರ್ನಾಂಡಿಸ್ 29 ಜನವರಿ, 2019 ರಂದು ನಿಧನರಾದರು.

ಜಾರ್ಜ್ ಫರ್ನಾಂಡಿಸ್ ಬಗ್ಗೆ ಆಸಕ್ತಿಕರ ಸಂಗತಿ ಫರ್ನಾಂಡಿಸ್ ಮಂಗಳೂರಿನಲ್ಲಿ ಮಂಗಳೂರಿನ ಕ್ಯಾಥೊಲಿಕ್ ಕುಟುಂಬದಲ್ಲಿ ಜನಿಸಿದರು. ಆರು ಮಕ್ಕಳಲ್ಲಿ ಹಿರಿಯರೇ ಜಾರ್ಜ್. ಇವರ ಅಮ್ಮ ಕಿಂಗ್ ಜಾರ್ಜ್ V ರ ದೊಡ್ಡ ಅಭಿಮಾನಿ ಮತ್ತು ಆದ್ದರಿಂದ, ಅವರು ತನ್ನ ಮೊದಲ ಮಗನಿಗೆ ಜಾರ್ಜ್ ಎಂದು ಹೆಸರಿಟ್ಟಿದ್ದರು. ನಿಕಟ ವಲಯಗಳಲ್ಲಿ ಜಾರ್ಜ್ ಅವರನ್ನು “ಗೆರ್ರಿ” ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಅವರು ರೋಮನ್ ಕ್ಯಾಥೊಲಿಕ್ ಪಾದ್ರಿಯಾಗಲು ತರಬೇತಿಯನ್ನು ಪ್ರಾರಂಭಿಸಿದರು ಆದರೆ ನಂತರ ಸಂಪೂರ್ಣ ಹತಾಶೆಯಿಂದಾಗಿ ಅದನ್ನು ಬಿಟ್ಟು ಬಂದಿದ್ದರು.ಏಕೆಂದರೆ ರೆಕ್ಟರ್‌ಗಳು ಉತ್ತಮ ಆಹಾರವನ್ನು ಸೇವಿಸುತ್ತಾರೆ ಮತ್ತು ಸೆಮಿನೇರಿಯನ್‌ಗಳಿಗಿಂತ ಹೆಚ್ಚಿನ ಟೇಬಲ್‌ಗಳಲ್ಲಿ ಕುಳಿತುಕೊಳ್ಳುತ್ತಾರೆ ಎಂಬುದಷ್ಟೇ ತರಬೇತಿ ಕೈ ಬಿಡಲು ಕಾರಣವಾಗಿತ್ತು. ನಂತರ ಅವರು ಸಮಾಜವಾದಿ ವಿಚಾರಗಳಲ್ಲಿ ಆಸಕ್ತಿ ಹೊಂದಿ ಹಳೆಯ ಬಾಂಬೆಗೆ ತೆರಳಿದರು. ಅಲ್ಲಿ ಅವರು ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಪ್ರಾರಂಭಿಸಿದರು. ಅಲ್ಲಿಂದ, ಫರ್ನಾಂಡಿಸ್ ಬಂದರು ಕಾರ್ಮಿಕರು ಮತ್ತು ರೈಲ್ವೆ ನೌಕರರ ನಡುವೆ ಸೂಕ್ತ ನಾಯಕನನ್ನು ಕಾಯುತ್ತಿದ್ದರು. ರಾಮ್ ಮನೋಹರ್ ಲೋಹಿಯಾ ಅವರ ಪರಿಚಯದ ಮೂಲಕ, ನಂತರ ಅವರು ಮುಂಬೈನ ಪ್ರಮುಖ ಟ್ರೇಡ್ ಯೂನಿಯನ್ ನಾಯಕರಾದರು. ಮುಂಬೈನಲ್ಲಿ ಪೋರ್ಟರ್‌ಗಳು, ಚಾಲಕರು ಮತ್ತು ಕಾರ್ಮಿಕ ವರ್ಗದ ಇತರ ವರ್ಗಗಳನ್ನು ಸಂಘಟಿಸುವ ಮೂಲಕ ಕಾರ್ಮಿಕ ಸಂಘಗಳನ್ನು ರಚಿಸಲಾಯಿತು. ಅವರು ಆರು ಕಾರ್ಮಿಕ ಸಂಘಗಳ ಸ್ಥಾಪಕ ಅಧ್ಯಕ್ಷರಾಗಿದ್ದರು.

ಕಲ್ಕತ್ತಾದಿಂದ ದೆಹಲಿಗೆ ಹಿಂದಿರುಗುವ ವಿಮಾನದಲ್ಲಿ ಜಾರ್ಜ್ ಮಾಜಿ ಕೇಂದ್ರ ಸಚಿವ ಹುಮಾಯೂನ್ ಕಬೀರ್ ಅವರ ಪುತ್ರಿ ಲೈಲಾ ಕಬೀರ್ ಅವರನ್ನು ಭೇಟಿಯಾದರು. ಆಈ ಭೇಟಿ ಪ್ರೇಮಕ್ಕೆ ತಿರುಗಿ ಜುಲೈ 22, 1971 ರಂದು ವಿವಾಹವಾದರು. ಅವರಿಗೆ ಸೀನ್ ಫರ್ನಾಂಡಿಸ್ ಎಂಬ ಮಗನಿದ್ದನು, 1980 ರ ದಶಕದ ಮಧ್ಯಭಾಗದಲ್ಲಿ ಫರ್ನಾಂಡಿಸ್ ಮತ್ತು ಲೈಲಾ ಕಬೀರ್ ಬೇರೆ ಬೇರೆಯಾದರು.

ಆನಂತರ ಜಾರ್ಜ್ ಬದುಕಿಗೆ ಬಂದವರೇ ಜಯಾ ಜೇಟ್ಲಿ. 1984 ರಿಂದ ಫರ್ನಾಂಡಿಸ್ ಅವರ ಒಡನಾಡಿಯಾಗಿದ್ದರು. ಫರ್ನಾಂಡಿಸ್ ಅವರು ಹತ್ತು ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದರು- ಕೊಂಕಣಿ, ಇಂಗ್ಲಿಷ್, ಹಿಂದಿ, ತುಳು, ಕನ್ನಡ, ಮರಾಠಿ, ತಮಿಳು, ಉರ್ದು, ಮಲಯಾಳಂ ಮತ್ತು ಲ್ಯಾಟಿನ್.

ತುರ್ತು ಪರಿಸ್ಥಿತಿಯ ಹೊತ್ತು ನಾಯಕರಾದ ಜಾರ್ಜ್

ನಾಗರಿಕ ಸ್ವಾತಂತ್ರ್ಯ ಸೇರಿದಂತೆ ಎಲ್ಲವನ್ನೂ ನಿಗ್ರಹಿಸಿದಾಗ ತುರ್ತು ಪರಿಸ್ಥಿತಿ ದಿನಗಳಲ್ಲಿ ಜಾರ್ಜ್ ಫರ್ನಾಂಡೀಸ್ ನಾಯಕನಾಗಿ ಹೊರಹೊಮ್ಮಿದರು. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ದಿನಗಳಲ್ಲಿ ನಾಗರಿಕ ಹಕ್ಕುಗಳನ್ನು ನಿರಾಕರಿಸುವ ದೃಷ್ಟಿ ಅವರೊಳಗೆ ಕ್ರಾಂತಿಯಕಿಡಿಯವನ್ನು ಹುಟ್ಟುಹಾಕಿತು. ಇಂದಿರಾ ಗಾಂಧಿ ಅವರ ಸಮಾರಂಭದಲ್ಲಿ ಡೈನಮೈಟ್ ಸ್ಫೋಟಗೊಳ್ಳಲು ಯೋಜಿಸಲಾಗಿತ್ತು ಆದರೆ ವಿಫಲವಾಯಿತು. ನಂತರ ಅವರನ್ನು ಬಂಧಿಸಲಾಯಿತು. ಬಂಧನದ ಸಮಯದಲ್ಲಿ, ಜಾರ್ಜ್ ಫರ್ನಾಂಡಿಸ್ ಅವರ ಮುಷ್ಟಿಯನ್ನು ಹಿಡಿದು ಜೈ  ಎಂದು ಕರೆಯುವ ಚಿತ್ರವನ್ನು ಟೈಮ್ ನಿಯತಕಾಲಿಕೆ ಸೇರಿದಂತೆ ಅನೇಕ ನಿಯತಕಾಲಿಕೆಗಳಲ್ಲಿ ಮುದ್ರಿಸಲಾಯಿತು. ಆ ಒಂದೇ ಚಿತ್ರದ ಮೂಲಕ ಅವರು ದಬ್ಬಾಳಿಕೆಗೆ ಪ್ರತಿಕ್ರಿಯಿಸಲು ಉತ್ಸುಕರಾಗಿರುವ ಸಾಮಾನ್ಯ ಜನರನ್ನು ಪ್ರತಿನಿಧಿಸಿದರು.

ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದಾಗ ಬಿಹಾರದ ಮುಜಾಫರ್ಪುರ ಕ್ಷೇತ್ರದಿಂದ ಲೋಕಸಭೆಯಲ್ಲಿ ಸ್ಪರ್ಧಿಸಿದ ಫರ್ನಾಂಡಿಸ್, ಮೂರು ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿ ಜಯ ಸಾಧಿಸಿದರು. ಅವರು ಜೈಲಿನಲ್ಲಿದ್ದ ಕಾರಣ ಪ್ರಚಾರಕ್ಕಾಗಿ ಅವರು ಎಂದಿಗೂ ಕ್ಷೇತ್ರವನ್ನು ತಲುಪಿರಲಿಲ್ಲ.

ದೊಡ್ಡ ಶಿಕ್ಷಣವಿಲ್ಲದಿದ್ದರೂ, ಬ್ರಿಟಿಷರೇ  ನಿಬ್ಬೆರಗಾಗುವ ಇಂಗ್ಲಿಷ್‌ನಲ್ಲಿ ಮತ್ತು ವಾಜಪೇಯಿಯನ್ನು ಬೆರಗುಗೊಳಿಸುವ ಹಿಂದಿಯಲ್ಲಿ ಮಾತನಾಡುತ್ತಿದ್ದರು ಜಾರ್ಜ್. ಆಗಾಗ್ಗೆ ಸಂವಹನ, ರೈಲ್ವೆ ಮತ್ತು ರಕ್ಷಣಾ ಸಚಿವರ ಹುದ್ದೆಗಳನ್ನು ಅಲಂಕರಿಸಿದ ಜಾರ್ಜ್ ಅವರನ್ನು ‘ಸೈನಿಕರ ಸಚಿವರು’ ಎಂದು ಬಣ್ಣಿಸಲಾಗಿದೆ. ಸಿಯಾಚಿನ್‌ನಲ್ಲಿ ಸೈನಿಕರನ್ನು ನೋಡಲು ಜಾರ್ಜ್ ನಾಲ್ಕು ವರ್ಷಗಳಲ್ಲಿ 38 ಬಾರಿ ಹಿಮಾಲಯಕ್ಕೆ ಹತ್ತಿದ್ದರು. ಅಪಘಾತಗಳಿಗೆ ಕಾರಣವಾದ ಕುಖ್ಯಾತ ಸುಖೋಯ್, ಮಿಗ್ಸ್‌ ವಿಮಾನ ಹಾರಾಟ ಮಾಡಿದ್ದರು . ಮರುಭೂಮಿಯಲ್ಲಿ ಸೈನಿಕರು ಟ್ಯಾಂಕ್ ಓಡಿಸುವ ಸ್ಥಿತಿ ತಿಳಿಯಲು ರಾಜಸ್ಥಾನಕ್ಕೆ ಹೋಗಿದ್ದರು.

ಅವರು ಜನವರಿ 2010 ರಲ್ಲಿ ಆಲ್ ಜೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳಿಂದ ಬಳಲುತ್ತಿದ್ದರು. ಹಂದಿ ಜ್ವರ ಸೋಂಕಿನಿಂದಾಗಿ ಅವರು ತಮ್ಮ ಜನವರಿ 29, 2019 ರಂದು ದೆಹಲಿಯಲ್ಲಿ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು.

ಇದನ್ನೂ ಓದಿ: ತೆಹಲ್ಕಾ ಹಗರಣ: ಫರ್ನಾಂಡಿಸ್‌ ಗೆಳತಿ ಜಯಾ ಜೇಟ್ಲಿಗೆ ಜೈಲು ಶಿಕ್ಷೆ ಕಾಯಂ ಆಯ್ತು

( Remembering George Fernandes on his Birth Anniversary Some interesting facts about India’s Former Defence Minister)

Follow us on

Related Stories

Most Read Stories

Click on your DTH Provider to Add TV9 Kannada