AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ShameOnYouSamantha; ಬ್ಯಾನ್​ ಆಗಲಿದೆಯೇ ‘ದಿ ಫ್ಯಾಮಿಲಿ ಮ್ಯಾನ್​ 2’?

ಈಗ ಸಮಂತಾ ವಿರುದ್ಧ ಟ್ವಿಟರ್​ನಲ್ಲಿ ಸಾಕಷ್ಟು ಜನರು ಸಿಡಿದೆದ್ದಿದಾರೆ. ಹಿಂದಿಯವರು ತಮಿಳರನ್ನು ಉಗ್ರಗಾಮಿಗಳು ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸಮಂತಾ. ಕೂಡ ಬೆಂಬಲ ನೀಡಿದ್ದಾರೆ. ಅವರಿಗೆ ನಾಚಿಕೆ ಆಗಬೇಕು ಎಂದು ಕೆಲವರು ಬರೆದುಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ShameOnYouSamantha; ಬ್ಯಾನ್​ ಆಗಲಿದೆಯೇ ‘ದಿ ಫ್ಯಾಮಿಲಿ ಮ್ಯಾನ್​ 2’?
ಸಮಂತಾ ಅಕ್ಕಿನೇನಿ
ರಾಜೇಶ್ ದುಗ್ಗುಮನೆ
| Edited By: |

Updated on: Jun 03, 2021 | 4:55 PM

Share

ತಮಿಳರನ್ನು ಉಗ್ರಗಾಮಿಗಳಂತೆ ತೋರಿಸಲಾಗಿದೆ ಎಂದು ಆರೋಪಿಸಿ ‘ದಿ ಫ್ಯಾಮಿಲಿ ಮ್ಯಾನ್​ 2’ ವಿರುದ್ಧ ಅನೇಕರು ಸಿಡಿದೆದಿದ್ದರು. ಅಲ್ಲದೆ, ಈ ಸೀರಿಸ್​ ಮೇಲೆ ನಿರ್ಬಂಧ ಹೇರಬೇಕು ಎಂದು ಕೂಡ ಆಗ್ರಹಿಸಿದ್ದರು. ಇಂದು (ಜೂ.3) ಮಧ್ಯರಾತ್ರಿ ಈ ವೆಬ್​ ಸೀರಿಸ್​ ಅಮೇಜಾನ್ ಪ್ರೈಮ್​ನಲ್ಲಿ ರಿಲೀಸ್​ ಆಗುತ್ತಿದೆ. ಇದಕ್ಕೂ ಮೊದಲು ShameOnYouSamantha ಎಂಬುದು ಟ್ರೆಂಡ್​ ಆಗಿದೆ.

2019ರಲ್ಲಿ ಬಿಡುಗಡೆ ಆಗಿದ್ದ ‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸಿರೀಸ್​ ಸಿಕ್ಕಾಪಟ್ಟೆ ಹಿಟ್​ ಆಗಿತ್ತು. ಮನೋಜ್​ ಬಾಜಪೇಯ್​, ಪ್ರಿಯಾಮಣಿ ಮುಂತಾದವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ‘ದಿ ಫ್ಯಾಮಿಲಿ ಮ್ಯಾನ್​ 2’ಗಾಗಿ ಎಲ್ಲರೂ ಕಾದಿದ್ದರು. ಆದರೆ, ವೆಬ್​​ಸೀರಿಸ್​ ಟ್ರೇಲರ್​ ತಮಿಳಿಯನ್ನರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳು ಜನರನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಹೀಗಾಗಿ, ಅಮೇಜಾನ್​ ಪ್ರೈಮ್​ ಟ್ರೇಲರ್ ಎಡಿಟ್​ ಮಾಡುವ ಕೆಲಸವನ್ನು ಕೂಡ ಮಾಡಿತ್ತು. ಈ ಮಧ್ಯೆ ಸಮಂತಾಗೆ ಈ ಬಗ್ಗೆ ಎಲ್ಲಿಯೂ ಮಾತನಾಡದಂತೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ, ಅವರು ಈ ವಿವಾದದ ಬಗ್ಗೆ ಎಲ್ಲಿಯೂ ಮೌನ ಮುರಿದಿಲ್ಲ.

ಈಗ ಸಮಂತಾ ವಿರುದ್ಧ ಟ್ವಿಟರ್​ನಲ್ಲಿ ಸಾಕಷ್ಟು ಜನರು ಸಿಡಿದೆದ್ದಿದಾರೆ. ಹಿಂದಿಯವರು ತಮಿಳರನ್ನು ಉಗ್ರಗಾಮಿಗಳು ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸಮಂತಾ ಕೂಡ ಬೆಂಬಲ ನೀಡಿದ್ದಾರೆ. ಅವರಿಗೆ ನಾಚಿಕೆ ಆಗಬೇಕು ಎಂದು ಕೆಲವರು ಬರೆದುಕೊಂಡಿದ್ದಾರೆ. ನೀವು ಚೆನ್ನೈ ಅವರಾಗಿ ಈ ರೀತಿ ಮಾಡಿರೋದು ತಪ್ಪು. ಅಭಿಮಾನಿಯಾಗಿ ನಿಜಕ್ಕೂ ನಿರಾಸೆ ಆಗಿದೆ ಎಂದು ಬರೆದುಕೊಂಡಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್​ ಸೀಸನ್​ 2’ ಜೂನ್​ 4ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರೀಮಿಯರ್​ ಆಗುತ್ತಿದೆ. ಈ ವೆಬ್​ ಸೀರಿಸ್​ನ ನಿರ್ದೇಶನದ ಜವಾಬ್ದಾರಿಯನ್ನು ರಾಜ್​ ಮತ್ತು​ ಡಿ.ಕೆ. ನಿಭಾಯಿಸಿದ್ದಾರೆ. ಮೊದಲ ಸೀಸನ್​ ದೊಡ್ಡಮಟ್ಟದಲ್ಲಿ ಹಿಟ್ ಆದ್ದರಿಂದ ಎರಡನೇ ಸೀಸನ್​ ಮೇಲೆ ಹೆಚ್ಚು ನಿರೀಕ್ಷೆ ಇದೆ.

ಇದನ್ನೂಓದಿ:

Amazon Prime: ಅಮೆಜಾನ್ ಪ್ರೈಮ್​ನಿಂದ ಭರ್ಜರಿ ಆಫರ್; ಶೇ 50ರಷ್ಟು ರಿಯಾಯಿತಿ ಜತೆ ಸಿಗುತ್ತದೆ ಸಬ್​ಸ್ಕ್ರಿಪ್ಷನ್

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More