ಏಳು ತಿಂಗಳ ಬಳಿಕ ಅಸ್ಸಾಂನಲ್ಲಿ ಶಾಲೆಗಳು ರೀ ಓಪನ್

| Updated By: ಸಾಧು ಶ್ರೀನಾಥ್​

Updated on: Nov 02, 2020 | 4:08 PM

ಕೊರೊನಾ ಕಾಟಕ್ಕೆ ಹೆದರಿ ಕಳೆದ ಏಳು ತಿಂಗಳಿನಿಂದ ಮುಚ್ಚಿದ್ದ ಶಾಲೆ ಬಾಗಿಲುಗಳು ಇಂದು ತೆರೆದುಕೊಂಡಿವೆ. ಅಸ್ಸಾಂನ ಗುವಾಹಟಿಯಲ್ಲಿ ಇಂದಿನಿಂದ ಶಾಲೆಗಳು ಪುನಾರಂಭಗೊಂಡಿವೆ. ಕೊರೊನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಾಲೆಗಳು 7 ತಿಂಗಳ ಬಳಿಕ ಪುನಾರಂಭವಾಗುತ್ತಿದೆ. ಇನ್ನು ಶಾಲೆಗಳಲ್ಲಿ ಸರ್ಕಾರ ನೀಡಿರುವ ಎಲ್ಲಾ ರೀತಿಯ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಫೇಸ್ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಇನ್ನು, ಈ ಮಧ್ಯೆ ಈಶಾನ್ಯ ರಾಜ್ಯಗಳ ಪೈಕಿ ಒಂದಾದ ಮಿಜೋರಾಂನಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಮೊದಲ ಸಾವು ಸಂಭವಿಸಿದೆ. […]

ಏಳು ತಿಂಗಳ ಬಳಿಕ ಅಸ್ಸಾಂನಲ್ಲಿ ಶಾಲೆಗಳು ರೀ ಓಪನ್
ಪ್ರಾತಿನಿಧಿಕ ಚಿತ್ರ
Follow us on

ಕೊರೊನಾ ಕಾಟಕ್ಕೆ ಹೆದರಿ ಕಳೆದ ಏಳು ತಿಂಗಳಿನಿಂದ ಮುಚ್ಚಿದ್ದ ಶಾಲೆ ಬಾಗಿಲುಗಳು ಇಂದು ತೆರೆದುಕೊಂಡಿವೆ. ಅಸ್ಸಾಂನ ಗುವಾಹಟಿಯಲ್ಲಿ ಇಂದಿನಿಂದ ಶಾಲೆಗಳು ಪುನಾರಂಭಗೊಂಡಿವೆ.

ಕೊರೊನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಾಲೆಗಳು 7 ತಿಂಗಳ ಬಳಿಕ ಪುನಾರಂಭವಾಗುತ್ತಿದೆ. ಇನ್ನು ಶಾಲೆಗಳಲ್ಲಿ ಸರ್ಕಾರ ನೀಡಿರುವ ಎಲ್ಲಾ ರೀತಿಯ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಫೇಸ್ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.

ಇನ್ನು, ಈ ಮಧ್ಯೆ ಈಶಾನ್ಯ ರಾಜ್ಯಗಳ ಪೈಕಿ ಒಂದಾದ ಮಿಜೋರಾಂನಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಮೊದಲ ಸಾವು ಸಂಭವಿಸಿದೆ. ಮಿಜೋರಾಂ, ಅಸ್ಸಾಂನ ನೆರೆಯ ರಾಜ್ಯವಾಗಿದ್ದು ಇಲ್ಲಿನ ಜನರಲ್ಲಿ ಆತಂಕ ಹೆಚ್ಚಿದೆ. ಈ ನಡುವೆಯೇ ಶಾಲೆಗಳನ್ನೂ ತೆರೆಯಲಾಗಿದೆ.
ಉತ್ತರಾಖಂಡದ ಡೆಹ್ರಾಡೂನ್​ ಲ್ಲಿಯೂ ಶಾಲೆಗಳು ಆರಂಭವಾಗಿವೆ.

Published On - 12:38 pm, Mon, 2 November 20