Omicron: ದೆಹಲಿಯಲ್ಲಿ ಇನ್ನೊಂದು ಒಮಿಕ್ರಾನ್​ ಕೇಸ್​ ದಾಖಲು; ಭಾರತದಲ್ಲೀಗ ಹೊಸ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆ

| Updated By: Lakshmi Hegde

Updated on: Dec 11, 2021 | 11:34 AM

ಭಾರತದಲ್ಲಿ ಈಗ ಒಮಿಕ್ರಾನ್​ ಪ್ರಕರಣ 33ಕ್ಕೆ ಏರಿಕೆಯಾಗಿದೆ. ಶುಕ್ರವಾರ ಮಹಾರಾಷ್ಟ್ರದಲ್ಲಿ ಒಟ್ಟಿಗೇ 7 ಕೇಸ್​ಗಳು ದಾಖಲಾಗಿ, ಗುಜರಾತ್​​ನಲ್ಲಿ ಇಬ್ಬರಿಗೆ ಈ ಸೋಂಕು ದೃಢಪಟ್ಟಿತ್ತು.

Omicron: ದೆಹಲಿಯಲ್ಲಿ ಇನ್ನೊಂದು ಒಮಿಕ್ರಾನ್​ ಕೇಸ್​ ದಾಖಲು; ಭಾರತದಲ್ಲೀಗ ಹೊಸ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆ
ಸಾಂಕೇತಿಕ ಚಿತ್ರ
Follow us on

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಎರಡನೇ ಹಾಗೂ ದೇಶದಲ್ಲಿ 33ನೇ ಒಮಿಕ್ರಾನ್ (Omicron) ಸೋಂಕಿನ ಪ್ರಕರಣ ಪತ್ತೆಯಾಗಿದೆ. ದೆಹಲಿ (Delhi)ಯಲ್ಲಿ ಇಂದು 2ನೇ ಒಮಿಕ್ರಾನ್​ ಕೇಸ್​ ದಾಖಲಾಗಿದ್ದನ್ನು ಅಲ್ಲಿನ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ದೃಢಪಡಿಸಿದ್ದಾರೆ.  ಇವರು ಜಿಂಬಾಬ್ವೆಯಿಂದ ದೆಹಲಿಗೆ ಬಂದವರಾಗಿದ್ದು, ಕೊವಿಡ್​ 19 ಸೋಂಕು ದೃಢಪಟ್ಟಿತ್ತು. ನಂತರ ಅವರ ಮಾದರಿಗಳನ್ನು ಜಿನೋಮ್ ಸಿಕ್ವೆನ್ಸಿಂಗ್​​ಗೆ ಕಳಿಸಲಾಗಿತ್ತು. ಅದರಲ್ಲಿ ಒಮಿಕ್ರಾನ್​ ಇರುವುದು ದೃಢಪಟ್ಟಿದೆ.  

ಒಮಿಕ್ರಾನ್​ ಸೋಂಕಿತನನ್ನು ಸದ್ಯ ದೆಹಲಿಯ ಲೋಕ ನಾಯಕ ಜೈ ಪ್ರಕಾಶ್​ ನಾರಾಯಣ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಅಲ್ಲಿ ಒಮಿಕ್ರಾನ್​ ಸೋಂಕಿತರಿಗೆಂದೇ ಪ್ರತ್ಯೇಕ್​ ವಾರ್ಡ್​ ಕೂಡ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಒಟ್ಟಾರೆ 27 ಪ್ರಯಾಣಿಕರನ್ನು ಅಡ್ಮಿಟ್ ಮಾಡಲಾಗಿತ್ತು. ಅದರಲ್ಲಿ ಇದೀಗ ಎರಡನೇ ವ್ಯಕ್ತಿಗೆ ಸೋಂಕು ತಗುಲಿದೆ. ಕೆಲವೇ ದಿನಗಳ ಹಿಂದೆ ಒಬ್ಬರಲ್ಲಿ ಒಮಿಕ್ರಾನ್​ ಕಾಣಿಸಿಕೊಂಡಿತ್ತು. ಉಳಿದ 25ಜನರಲ್ಲಿ ವರದಿ ನೆಗೆಟಿವ್​ ಬಂದಿದೆ.

ಭಾರತದಲ್ಲಿ ಈಗ ಒಮಿಕ್ರಾನ್​ ಪ್ರಕರಣ 33ಕ್ಕೆ ಏರಿಕೆಯಾಗಿದೆ. ಶುಕ್ರವಾರ ಮಹಾರಾಷ್ಟ್ರದಲ್ಲಿ ಒಟ್ಟಿಗೇ 7 ಕೇಸ್​ಗಳು ದಾಖಲಾಗಿ, ಗುಜರಾತ್​​ನಲ್ಲಿ ಇಬ್ಬರಿಗೆ ಈ ಸೋಂಕು ದೃಢಪಟ್ಟಿತ್ತು. ಮಹಾರಾಷ್ಟ್ರದಲ್ಲೇ 17 ಒಮಿಕ್ರಾನ್​ ಸೋಂಕಿತರು ಇದ್ದು, ಸದ್ಯ ಮುಂಬೈನಲ್ಲಿ ಸೆಕ್ಷನ್​ 144 ಜಾರಿ ಮಾಡಲಾಗಿದೆ. ಯಾವುದೇ ಮೆರವಣಿಗೆ, ರ್ಯಾಲಿ, ಗುಂಪುಗೂಡುವಿಕೆಯನ್ನು ನಿಷೇಧಿಸಲಾಗಿದೆ. ಈ ಮಧ್ಯೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆಂದು ದೇಶದಲ್ಲಿ ಮಾರ್ಗಸೂಚಿ ಬದಲಾಗಿದೆ. ಒಮಿಕ್ರಾನ್​ ನಿಯಂತ್ರಣಕ್ಕೆ ಇನ್ನಷ್ಟು ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಸೋಮವಾರದಿಂದ 3 ದಿನ ಸಿಎಂ ಪ್ರವಾಸ; ಕುಟುಂಬ ಸಮೇತರಾಗಿ ಕಾಶಿ, ಅಯೋಧ್ಯೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬೊಮ್ಮಾಯಿ