ಹಿಂದೂ ಉತ್ತರಾಧಿಕಾರ ಕಾನೂನಿನಲ್ಲಿ ಲಿಂಗ ತಾರತಮ್ಯ? ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್
ಹಿಂದೂ ಮಹಿಳೆಯರ ಪರವಾಗಿ ನ್ಯಾಯಾಲಯವು ಮಧ್ಯಪ್ರವೇಶಿಸಬೇಕು. ಯಾಕೆಂದರೆ ಸಮಾಜವು ಲಿಂಗ ಸಮಾನತೆಯತ್ತ ಸಾಗುತ್ತಿರುವಾಗ, ಹಿಂದೂ ಉತ್ತರಾಧಿಕಾರ ಕಾಯಿದೆಯು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುತ್ತದೆ " ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ದೆಹಲಿ: “ಹಿಂದೂ ಉತ್ತರಾಧಿಕಾರ ಕಾಯಿದೆಯ (Hindu Succession Act) ಸೆಕ್ಷನ್‌ಗಳು ಅಸಂವಿಧಾನಿಕ ಮತ್ತು ಲಿಂಗ ಸಮಾನತೆಯನ್ನು ಉಲ್ಲಂಘಿಸುತ್ತವೆ” ಎಂದು ಆರೋಪಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಿಚಾರಣೆ ನಡೆಸಿದ್ದು, ಏಕರೂಪ ನಾಗರಿಕ ಸಂಹಿತೆಯ (Uniform Civil Code -UCC) ಚರ್ಚೆಯು ಅಲ್ಪಸಂಖ್ಯಾತ ಸಮುದಾಯಗಳ ವೈಯಕ್ತಿಕ ಕಾನೂನುಗಳಲ್ಲಿ ಪ್ರಚಲಿತದಲ್ಲಿರುವ ಲಿಂಗ ಅಸಮಾನತೆ ಮೇಲೆ ಹೆಚ್ಚಾಗಿ ಕೇಂದ್ರೀಕೃತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಸುಪ್ರೀಂಕೋರ್ಟ್ (Supreme Court) ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಹಿಂದೂ ಮಹಿಳೆಯರ ಪರವಾಗಿ ನ್ಯಾಯಾಲಯವು ಮಧ್ಯಪ್ರವೇಶಿಸಬೇಕು. ಯಾಕೆಂದರೆ ಸಮಾಜವು ಲಿಂಗ ಸಮಾನತೆಯತ್ತ ಸಾಗುತ್ತಿರುವಾಗ, ಹಿಂದೂ ಉತ್ತರಾಧಿಕಾರ ಕಾಯಿದೆಯು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುತ್ತದೆ ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಕಮಲ್ ಅನಂತ್ ಖೋಪ್ಕರ್ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ಬೇಲಾ ತ್ರಿವೇದಿ ಅವರ ತ್ರಿಸದಸ್ಯ ಪೀಠವು ಕೈಗೆತ್ತಿಕೊಂಡಿತು.
ಮನವಿಯು ಹಿಂದೂ ಉತ್ತರಾಧಿಕಾರ ಕಾಯಿದೆಯ ನಿಬಂಧನೆಗಳಲ್ಲಿ “ಆಳವಾಗಿ ಬೇರೂರಿರುವ ಪಿತೃಪ್ರಭುತ್ವದ ಸಿದ್ಧಾಂತ” ವನ್ನು ಸೂಚಿಸುತ್ತದೆ. ಮೃತ ಮಹಿಳೆಯ ಸ್ವಂತ ಪೋಷಕರಿಗಿಂತ ಮೊದಲು ಗಂಡನ ಕುಟುಂಬವು ಉತ್ತರಾಧಿಕಾರದ ಸಾಲಿನಲ್ಲಿ ಹೇಗೆ ಮೊದಲ ಸ್ಥಾನದಲ್ಲಿದೆ ಎಂಬುದನ್ನು ತೋರಿಸುತ್ತದೆ. ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿನ ನಿಬಂಧನೆಗಳು, ಪುರುಷ ವಂಶಾವಳಿಯೊಳಗೆ ಆಸ್ತಿಯನ್ನು ಹೆಚ್ಚಾಗಿ ಉಳಿಸಿಕೊಳ್ಳಲು ನಿರ್ವಹಿಸುತ್ತದೆ ಎಂದು ಅರ್ಜಿಯಲ್ಲಿ ಹೇಳುತ್ತದೆ.
ಅರ್ಜಿದಾರರು “ವೈಯಕ್ತಿಕ ಕಾನೂನನ್ನು ಆಚರಣೆ ಅಥವಾ ಧರ್ಮದ ಆಧಾರದ ಮೇಲೆ ಸ್ಥಾಪಿಸಲಾಗಿದೆಯೇ ಅಥವಾ ಅದನ್ನು ಕ್ರೋಡೀಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಅಪ್ರಸ್ತುತವಾಗಿದೆ. ಇದು ಲಿಂಗ ಸಮಾನತೆಯನ್ನು ಉಲ್ಲಂಘಿಸಿದರೆ, ಅದನ್ನು ಪ್ರಶ್ನಿಸಬಹುದು” ಎಂದು ಹೇಳಿದರು.
ಇದನ್ನೂ ಓದಿ: ಕಾದು ಸುಸ್ತಾಗಿದೆ: ಟ್ವೀಟ್ ಮೂಲಕ ಅತೃಪ್ತಿ ಹೊರಹಾಕಿದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಪುತ್ರ