ಲೋಕಸಭಾ ಕಲಾಪ ವೇಳೆ ಭದ್ರತಾ ಲೋಪ: ವೀಕ್ಷಕರ ಪಾಸ್​ ನಿಷೇಧಿಸಿದ ಸ್ಪೀಕರ್ ಓಂ ಬಿರ್ಲಾ

|

Updated on: Dec 13, 2023 | 3:30 PM

ಲೋಕಸಭಾ ಕಲಾಪದ ವೇಳೆ ಭಾರಿ ಭದ್ರತಾ ಲೋಪ ಉಂಟಾಗಿರುವ ಹಿನ್ನೆಲೆಯಲ್ಲಿ ವೀಕ್ಷಕರ ಪಾಸ್​ ಅನ್ನು ನಿಷೇಧಿಸಿ ಸ್ಪೀಕರ್ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.

ಲೋಕಸಭಾ ಕಲಾಪ ವೇಳೆ ಭದ್ರತಾ ಲೋಪ: ವೀಕ್ಷಕರ ಪಾಸ್​ ನಿಷೇಧಿಸಿದ ಸ್ಪೀಕರ್ ಓಂ ಬಿರ್ಲಾ
ಓಂ ಬಿರ್ಲಾ
Image Credit source: Hindustan Times
Follow us on

ಲೋಕಸಭಾ(Lok Sabha)  ಕಲಾಪದ ವೇಳೆ ಭಾರಿ ಭದ್ರತಾ ಲೋಪ ಉಂಟಾಗಿರುವ ಹಿನ್ನೆಲೆಯಲ್ಲಿ ವೀಕ್ಷಕರ ಪಾಸ್​ ಅನ್ನು ನಿಷೇಧಿಸಿ ಸ್ಪೀಕರ್ ಓಂ ಬಿರ್ಲಾ(Speaker Om Birla) ಆದೇಶ ಹೊರಡಿಸಿದ್ದಾರೆ. ಲೋಕಸಭೆಯ ಕಲಾಪದ ಸಂದರ್ಭದಲ್ಲಿ ಇಬ್ಬರು ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್​ ಬಳಿ ನುಗ್ಗಿದ್ದು, ಬಳಿಕ ಸ್ಮೋಕ್​ ಕ್ರ್ಯಾಕರ್​ ಸಿಡಿಸಿದ್ದರು. ಇದರಿಂದ ಕೆಲಕಾಲ ಸಂಸತ್ತಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರೇಕ್ಷರ ಪಾಸ್​ನ್ನು ನೀಡಲಾಗುವುದಿಲ್ಲ ಎಂದು ಓಂ ಬಿರ್ಲಾ ಹೇಳಿದ್ದಾರೆ. ಇದೀಗ ಕಲಾಪ ಪುನರಾರಂಭಗೊಂಡಿದೆ. ಪ್ರಾಣತ್ಯಾಗಕ್ಕೂ ಸಿದ್ಧ ಆದರೆ ಕಲಾಪ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಸದನ ಅಂದೂ ನಡೆದಿತ್ತು, ಇಂದೂ ನಡೆಯಲಿದೆ, ಭಾರತದ ಜನರ ಆಶೋತ್ತರಗಳಿಗಾಗಿ ನಾವು ಇಲ್ಲಿ ಸೇರಿದ್ದೇವೆ, ಘಟನೆ ಬಗ್ಗೆ ಪ್ರಾಥಮಿಕ ತನಿಖೆ ನಡೆಯುತ್ತಿದೆ. ನಡೆದಿರುವ ಘಟನೆ ಬಗ್ಗೆ ನಿಮ್ಮೆಲ್ಲರ ಮುಂದೆ ಹೇಳಲಿದ್ದೇವೆ.

ಮತ್ತಷ್ಟು ಓದಿ: ಸಂಸತ್ತಿನಲ್ಲಿ ಭದ್ರತಾಲೋಪ: ಕಲಾಪದೊಳಗೆ ನುಗ್ಗಿದ್ದವ ಗುರುತು ಪತ್ತೆ, ಪ್ರತಾಪ್​​​ ಸಿಂಹ ಪಿಎ ಕಡೆಯಿಂದ ಪಾಸ್

ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರೆಲ್ಲರ ಜತೆ ಕುಳಿತು ಮಾತನಾಡಲಿದ್ದೇನೆ, ನಿಮ್ಮೆಲ್ಲರ ರಕ್ಷಣೆ ನನ್ನ ಹೊಣೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಸದಸ್ಯರು ಭಯಪಡುವಹಾಗಿಲ್ಲ, ಸದಸನದಲ್ಲಿ ಹರಡಲಾಗಿದ್ದ ಹೊಗೆಯ ಪ್ರಾಥಮಿಕ ಮಾಹಿತಿ ನನ್ನ ಬಳಿ ಇದೆ, ಎಲ್ಲವನ್ನೂ ನಿಮ್ಮ ಗಮನಕ್ಕೆ ತರಲಿದ್ದೇನೆ , ನಾನೂ ನಿಮ್ಮ ಜತೆಗೆ ಕುಳಿತಿಲ್ಲವೇ ಎಂದು ಸ್ಪೀಕರ್ ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಕ್ಷಣವೇ ಸ್ಥಳಕ್ಕೆ ತಲುಪಿದ್ದಾರೆ, ಘಟನೆಯಲ್ಲಿ ಯಾರೂ ಕೂಡ ಗಾಯಗೊಂಡಿಲ್ಲ. ಇದು ಲೋಕಸಭೆಯ ಒಳಗೆ ನಡೆದರೆ, ಸಂಸತ್ತಿನ ಹೊರಗೆ ಇಬ್ಬರು ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ಬಂಧಿಸಿದರು. ಲೋಕಸಭಾ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಪ್ರವೇಶ ಪಾಸ್‌ಗೆ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅತಿಕ್ರಮಣಕಾರರನ್ನು ಹಿಡಿಯಲು ಸಂಸದರು ಮುಗಿಬಿದ್ದಿದ್ದರಿಂದ ಗದ್ದಲ ಸೃಷ್ಟಿಸಿತು. ಸದ್ಯ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:20 pm, Wed, 13 December 23