Smoke Bomb: ಇಂದು ಸಂಸತ್​ನಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ ಸ್ಮೋಕ್​ ಬಾಂಬ್​ ಕುರಿತು ಮಾಹಿತಿ ಇಲ್ಲಿದೆ

ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಬುಧವಾರ ಭಾರೀ ಅವಘಡ ಸಂಭವಿಸಿದೆ. ಸಂಸತ್ ಕಲಾಪ ನಡೆಯುತ್ತಿದ್ದಾಗ ಇಬ್ಬರು ಅಪರಿಚಿತರು ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರ ಗ್ಯಾಲರಿಗೆ ಜಿಗಿದಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರು ಸಂಸತ್ತಿನಲ್ಲಿ ಸ್ಮೋಕ್​ ಬಾಂಬ್​ ಬಳಕೆ ಮಾಡಿ, ಇಡೀ ಸಂಸತ್ತು ಹೊಗೆಮಯವಾಗಿತ್ತು.

Smoke Bomb: ಇಂದು ಸಂಸತ್​ನಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ ಸ್ಮೋಕ್​ ಬಾಂಬ್​ ಕುರಿತು ಮಾಹಿತಿ ಇಲ್ಲಿದೆ
Follow us
ನಯನಾ ರಾಜೀವ್
|

Updated on:Dec 13, 2023 | 3:10 PM

ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಬುಧವಾರ ಭಾರೀ ಅವಘಡ ಸಂಭವಿಸಿದೆ. ಸಂಸತ್ ಕಲಾಪ ನಡೆಯುತ್ತಿದ್ದಾಗ ಇಬ್ಬರು ಅಪರಿಚಿತರು ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರ ಗ್ಯಾಲರಿಗೆ ಜಿಗಿದಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರು ಸಂಸತ್ತಿನಲ್ಲಿ ಸ್ಮೋಕ್​ ಬಾಂಬ್​ ಬಳಕೆ ಮಾಡಿ, ಇಡೀ ಸಂಸತ್ತು ಹೊಗೆಮಯವಾಗಿತ್ತು.

ಸ್ಮೋಕ್ ಬಾಂಬ್ ಎಂದರೇನು? ಹೆಸರೇ ಸೂಚಿಸುವಂತೆ, ಇದು ಸಾಕಷ್ಟು ಹೊಗೆಯನ್ನು ಉತ್ಪಾದಿಸುವ ಪಟಾಕಿ ರೀತಿಯ ವಸ್ತುವಾಗಿದೆ. ದೀಪಾವಳಿ ಅಥವಾ ಯಾವುದೇ ಪಾರ್ಟಿಯ ಸಮಯದಲ್ಲಿ ಇಂತಹ ಸ್ಮೋಕ್​ ಬಾಂಬ್​ಗಳ ಬಳಕೆಯನ್ನು ನೋವು ನೋಡಿರುತ್ತೀರಿ. ಇದು ಕೆಲವು ಸಮಯದಿಂದ ಭಾರತದಲ್ಲಿ ಬಳಕೆಯಲ್ಲಿದೆ.

ಸ್ಮೋಕ್ ಬಾಂಬ್ ಹುಟ್ಟಿದ್ದೆಲ್ಲಿ? ನಾವು ಹೊಗೆ ಬಾಂಬ್ ಇತಿಹಾಸದ ಬಗ್ಗೆ ಮಾತನಾಡುವುದಾದರೆ ಅದು ಮೂಲತಃ ಜಪಾನಿನಿಂದ ಬಂದಿದೆ ಆದರೆ ನಾವು ಆಧುನಿಕತೆ ಬಗ್ಗೆ ಹೇಳುವುದಾದರೆ 1848 ರಲ್ಲಿ, ಬ್ರಿಟಿಷ್ ಸಂಶೋಧಕ ರಾಬರ್ಟ್ ಯೇಲ್ ಸ್ಮೋಕ್​ ಬಾಂಬ್​ ಅನ್ನು ಕಂಡುಹಿಡಿದರು. ಇದರಲ್ಲಿ ಚೈನೀಸ್ ವಿಧಾನವನ್ನು ಬಳಸಲಾಗಿದೆ, ಕೆಲವು ಬದಲಾವಣೆಗಳೊಂದಿಗೆ, ಹೊಗೆ ಹೆಚ್ಚು ಕಾಲ ಉಳಿಯಲು ಅಂತಹ ವಸ್ತುಗಳನ್ನು ಸೇರಿಸಲಾಯಿತು. ಪ್ರಸ್ತುತ, ವಿವಿಧ ರೀತಿಯ ಹೊಗೆ ಬಾಂಬ್‌ಗಳು ಬಣ್ಣಬಣ್ಣದ ಹೊಗೆಯನ್ನು ಹೊರಸೂಸುತ್ತವೆ. ಸಂಸತ್ತಿನಲ್ಲಿ ಬುಧವಾರ ನಡೆದ ಸ್ಮೋಕ್ ಬಾಂಬ್ ದಾಳಿಯಲ್ಲಿ ಹಳದಿ ಮತ್ತು ಕೆಂಪು ಹೊಗೆ ಹೊರಬರುತ್ತಿರುವುದು ಕಂಡುಬಂದಿದೆ. ಪ್ರತಿಭಟನಾಕಾರರನ್ನು ಹಿಡಿದು ಸಂಸತ್ ಭವನದ ಒಳಗೆ ಮತ್ತು ಹೊರಗೆ ಕರೆದೊಯ್ಯುವಾಗ ಅದು ಕಾಣಿಸಿದೆ.

ಮತ್ತಷ್ಟು ಓದಿ: ಎರಡು ದಶಕದ ಹಿಂದೆ ಸಂಸತ್‌ ಮೇಲೆ ನಡೆದ ಭಯೋತ್ಪಾದನಾ ದಾಳಿ ದಿನವೇ ಮತ್ತೆ ಭದ್ರತಾ ಲೋಪ

ಸಂಸತ್ತಿನಲ್ಲಿ ಬುಧವಾರ ಏನಾಯಿತು?

ಬುಧವಾರ ಸಂಸತ್ ಕಲಾಪ ನಡೆಯುತ್ತಿರುವಾಗ ಮಧ್ಯಾಹ್ನ 1.15ರ ಸುಮಾರಿಗೆ ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ವ್ಯಕ್ತಿಯೊಬ್ಬ ಜಿಗಿದಿದ್ದಾನೆ. ಸಭಾಧ್ಯಕ್ಷರತ್ತ ತೆರಳುತ್ತಿದ್ದ .ಈ ವ್ಯಕ್ತಿ ಸಂಸದರ ಆಸನದ ಮೂಲಕ ಹಾದು ಹೋಗುತ್ತಿದ್ದಂತೆಯೇ ಅಲ್ಲಿದ್ದ ಸಂಸದರು ಈ ವ್ಯಕ್ತಿಯನ್ನು ಹಿಡಿದಿದ್ದಾರೆ. ಸಂಸತ್ತಿನ ಭದ್ರತೆಯಲ್ಲಿ ಇದು ದೊಡ್ಡ ಲೋಪವಾಗಿದೆ, ಏಕೆಂದರೆ ದಾಳಿಕೋರನು ಸಂಸದರ ಅತಿಥಿಯಾಗಿ ಸದನದೊಳಗೆ ಪ್ರವೇಶಿಸಿ ಇಂತಹ ಕೃತ್ಯ ಎಸಗಿದ್ದು, ಇದು ಸಂಸದರು ಮತ್ತು ಜನರನ್ನು ತೊಂದರೆಗೆ ಸಿಲುಕಿಸಬಹುದು ಎಂದು ಹೇಳಲಾಗಿದೆ.

ಪ್ರಧಾನಿ ಸಂಸತ್​ನಲ್ಲಿ ಇರಲಿಲ್ಲ ಈ ಘಟನೆ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಇರಲಿಲ್ಲ , ಡಿಸೆಂಬರ್ 13 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ಶ್ರದ್ಧಾಂಜಲಿ ಸಲ್ಲಿಸಿದರು.ದಾದ ನಂತರ, ಛತ್ತೀಸ್‌ಗಢದ ಸಂಸದ ಮತ್ತು ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ತೆರಳಿದರು. ಹೊಗೆ ಕ್ರ್ಯಾಕರ್‌ಗಳನ್ನು ಬಳಸಿದ ಆರೋಪದ ಮೇಲೆ ಓರ್ವ ಪುರುಷ ಹಾಗೂ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:08 pm, Wed, 13 December 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ