ರಾಜಸ್ಥಾನ: ಜನವರಿ 4ರಂದು ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (droupadi murmu) ಅವರ ಭದ್ರತಾ ಪ್ರೋಟೋಕಾಲ್ (Security Breach) ಅನ್ನು ಉಲ್ಲಂಘಿಸಿದ ಮತ್ತು ಅವರ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದಕ್ಕಾಗಿ ಶುಕ್ರವಾರ, ಜನವರಿ 13 ರಂದು ರಾಜಸ್ಥಾನದ ಸರ್ಕಾರಿ ಇಂಜಿನಿಯರ್ನ್ನು ಅಮಾನತುಗೊಳಿಸಲಾಯಿತು. ಗೃಹ ಸಚಿವಾಲಯದ ಮಧ್ಯಪ್ರವೇಶದ ನಂತರ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ವಿಭಾಗವು ಇಂಜಿನಿಯರ್ ಅನ್ನು ಅಮಾನತುಗೊಳಿಸಿತು.
ಪಿಎಚ್‌ಇಡಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಅಂಬಾ ಸಿಯೋಲ್ ಅವರು ಜನವರಿ 4 ರಂದು ರೋಹೆತ್‌ನಲ್ಲಿ ನಡೆದ ಸ್ಕೌಟ್ ಗೈಡ್ ಜಾಂಬೋರಿಯ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ರಾಷ್ಟ್ರಪತಿಗಳ ಪಾದಗಳನ್ನು ಮುಟ್ಟುವ ಪ್ರಯತ್ನವನ್ನು ಮಾಡುವ ಮೂಲಕ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ, ಆದ್ದರಿಂದ ರಾಜಸ್ಥಾನದ ನಾಗರಿಕ ಸೇವಾ ನಿಯಮದ ಅಡಿಯಲ್ಲಿ ಅಧಿಕಾರದಿಂದ ಅಮಾನತು ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಮುಖ್ಯ ಇಂಜಿನಿಯರ್ (ಆಡಳಿತ), PHED ರ ಆದೇಶದಲ್ಲಿ ತಿಳಿಸಿದ್ದಾರೆ.
ನೀರಿನ ವ್ಯವಸ್ಥೆಯನ್ನು ನೋಡಿಕೊಳ್ಳಲು ಸಿಯೋಲ್ ಸ್ಥಳದಲ್ಲಿಯೇ ಇದ್ದರು. ಆದರೆ ರಾಷ್ಟ್ರಪತಿಗಳ ಭದ್ರತಾ ಗ್ರಿಡ್ ಅನ್ನು ಉಲ್ಲಂಘಿಸಿ, ಅವರು ರಾಷ್ಟ್ರಪತಿಯವರನ್ನು ಸ್ವಾಗತಿಸಲು ಅಲ್ಲಿದ್ದ ಅಧಿಕಾರಿಗಳಿಂತ ಮೊದಲೇ ಹೋಗಿ ಅವರ ಪಾದವನ್ನು ಸ್ಪರ್ಶ ಮಾಡಿದ್ದಾರೆ.
ರಾಷ್ಟ್ರಪತಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿದಂತೆ ಅಂಬಾ ಸಿಯೋಲ್ ಹಠಾತ್ ಅವರ ಬಳಿಗೆ ಬಂದಿದ್ದು, ಪಾದ ಸ್ಪರ್ಶಿಸಲು ಪ್ರಯತ್ನಿಸಿದ್ದಾರೆ, ಆದರೆ ಅಧ್ಯಕ್ಷರ ಭದ್ರತೆಯಿಂದ ತಡೆದಿದ್ದಾರೆ. ಸ್ಥಳೀಯ ಪೊಲೀಸರು ಔಪಚಾರಿಕ ವಿಚಾರಣೆಯ ನಂತರ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಷ್ಟ್ರಪತಿಗಳ ಭದ್ರತೆಯಲ್ಲಿ ಗಂಭೀರ ಲೋಪವಾಗಿದೆ ಎಂದು ಪರಿಗಣಿಸಿ ರಾಜಸ್ಥಾನ ಪೊಲೀಸರಿಂದ ವರದಿ ನೀಡಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ